ಹರಿಹರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯರಿಂದ ನಾಡಗೀತೆಗೆ ಅವಮಾನ

ದಾವಣಗೆರೆ, ಅಕ್ಟೋಬರ್ 13: ಮಾಜಿ ಮುಖ್ಯಮಂತ್ರಿ- ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 'ಬಾಡಿ ಲಾಂಗ್ವೇಜ್' ಭಾನುವಾರ ದಾವಣಗೆರೆಯ ಹರಿಹರ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಯಿತು. ಕಾರ್ಯಕ್ರಮವೊಂದರಲ್ಲಿ ನಾಡಗೀತೆ ಹಾಡುವ ವೇಳೆ ಉಗುಳುವುದು, ಮೈ- ಕೈ ಅಲ್ಲಾಡಿಸುವ ಮೂಲಕ ಅಗೌರವ ತೋರಿಸಿದ್ದಾರೆ ಎಂಬ ಚರ್ಚೆಗೆ ನಾಂದಿ ಹಾಡಿದ್ದಾರೆ ಸಿದ್ದರಾಮಯ್ಯ.

ಹರಿಹರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆಯಿತು. ಕ್ಯಾಂಟೀನ್ ಉದ್ಘಾಟನೆಗಾಗಿ ಬಂದಿದ್ದ ಸಿದ್ದರಾಮಯ್ಯ ಅವರು, ನಾಡಗೀತೆ ಹಾಡುತ್ತಿದ್ದ ವೇಳೆಯಲ್ಲಿ ಬಾಯಲ್ಲಿ ಮೆಲುಕು ಹಾಕುತ್ತಿದ್ದುದನ್ನು ಉಗುಳಿದರು. ಮೈ- ಕೈ ಅಲುಗಾಡಿಸುತ್ತಾ ನಿಂತಿದ್ದರು. ಈ ಘಟನೆ ವಿಡಿಯೋದಲ್ಲಿ ಚಿತ್ರೀಕರಣ ಕೂಡ ಆಗಿದೆ.

 Former CM Siddaramaiah Insult Nada Geethe In Davanagere

ಇನ್ನು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ನಂತರ ಪಲಾವ್ ತಿಂದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತಿತರರು ಭಾಗವಹಿಸಿದ್ದರು. ಉದ್ಘಾಟನೆ ಕಾರ್ಯಕ್ರಮಕ್ಕಿಂತ ಸಿದ್ದರಾಮಯ್ಯ ಅವರ ಬಾಡಿ ಲಾಂಗ್ವೇಜ್ ಹೆಚ್ಚು ಚರ್ಚೆಗೆ ಒಳಗಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+