ಇಂದಿನಿಂದ ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ; ಗಾಜಿನ ಮನೆಯಲ್ಲಿ ಅರಳಿದ ಐಫೆಲ್ ಟವರ್

ದಾವಣಗೆರೆ, ಆಗಸ್ಟ್ 23: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ದಾವಣಗೆರೆ ಗಾಜಿನ ಮನೆಯಲ್ಲಿ ಇಂದಿನಿಂದ 27ರವರೆಗೆ ಐದು ದಿನಗಳ ಕಾಲ ಪುಷ್ಪ ಮೇಳವನ್ನು ಆಯೋಜಿಸಲಾಗಿದೆ.

ನಗರದ ಗಾಜಿನ ಮನೆಯಲ್ಲಿ ಬೆಂಗಳೂರು ಲಾಲ್ ಬಾಗ್ ಮಾದರಿಯಲ್ಲಿ ಪುಷ್ಪ ಮೇಳ ಆಯೋಜಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್, "ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ 23ರಿಂದ 27ರವರೆಗೆ ಐದು ದಿನಗಳ ಕಾಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಾತಂತ್ರ ದಿನಾಚರಣೆಯಂದೇ ಪ್ರದರ್ಶನ ಉದ್ಘಾಟಿಸಬೇಕಿತ್ತು. ಮಳೆಯಿಂದಾಗಿ ಪ್ರದರ್ಶನ ಮುಂದೂಡಲಾಯಿತು" ಎಂದು ತಿಳಿಸಿದರು.

EIFFel Tower In Flower Show Of Davanagere

ಈ ಬಾರಿ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಹೂವಿನಲ್ಲಿ ಪ್ಯಾರಿಸ್ ನ ಐಫೆಲ್ ಟವರ್ ಮಾದರಿ ಮಾಡಲಾಗಿದ್ದು,30 ಅಡಿ ಎತ್ತರ ಹಾಗೂ 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ 80,000ಕ್ಕೂ ಹೆಚ್ಚು ಗುಲಾಬಿ ಹೂವುಗಳಿಂದ ವಿನ್ಯಾಸಗೊಳಿಸಲಾಗಿದೆ. ಇದು ಜನರ ಕಣ್ಸೆಳೆಯುತ್ತಿದೆ. ಗುಲಾಬಿಯಿಂದ ವಿನ್ಯಾಸಗೊಂಡ ಬೈಸಿಕಲ್, 20,000 ಸೇವಂತಿಗೆ ಹೂವುಗಳಿಂದ ಹೃದಯದ ಆಕಾರದ ಕಲಾಕೃತಿ, ಮಿಕ್ಕಿ ಮೌಸ್‌, ಅಣಬೆ, ಡಾಲ್ಫಿನ್ ಆಕಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾಕೃತಿಗಳನ್ನು ಮಾಡಲಾಗಿದೆ. ಸಿರಿಧಾನ್ಯದಲ್ಲಿ ವಿನ್ಯಾಸಗೊಳಿಸಿದ ಬುದ್ಧ, ಬಸವಣ್ಣ, ಡಾ|ಬಿ.ಆರ್‌.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್.ಮರೀಗೌಡರ ಮೂರ್ತಿಗಳನ್ನು ಪ್ರದರ್ಶನದಲ್ಲಿವೆ. ಅಪರೂಪದ ಹಣ್ಣು, ತರಕಾರಿ, ಸಸ್ಯ ಸಂತೆ ಜತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

EIFFel Tower In Flower Show Of Davanagere

ಬೆಂಗಳೂರು ಲಾಲ್ ಬಾಗ್ ಮಾದರಿಯಲ್ಲಿ ವರ್ಷಕ್ಕೆ ಎರಡು ಬಾರಿ ಈ ರೀತಿಯ ಪುಷ್ಪ ಪ್ರದರ್ಶನ ನಡೆಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+