ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆ ಆಮಂತ್ರಣ ಪತ್ರಿಕೆ ಕೊಡ್ತಿವಿ ಆದ್ರೆ ಮದುವೆಗೆ ಬರಬೇಡಿ

|
Google Oneindia Kannada News

ದಾವಣಗೆರೆ, ಜೂನ್ 10: ಮದುವೆ ಆಮಂತ್ರಣ ಪತ್ರಿಕೆ ಕೊಡ್ತಿವಿ ಆದ್ರೆ ಮದುವೆಗೆ ಬರಬೇಡಿ ಎಂದು ನವ ಜೋಡಿ ತಮ್ಮ ಸ್ನೇಹಿತ ಹಾಗೂ ಸಂಬಂಧಿಕರಿಗೆ ಹೇಳಿದೆ. ದಾವಣಗೆರೆಯ ನವ ಜೋಡಿ ಫೇಸ್‌ಬುಕ್‌ ಮೂಲಕ ಮದುವೆ ಕಾರ್ಯಕ್ರಮ ಮಾಡುತ್ತಿದೆ.

Recommended Video

Sriramulu taking a break at a small shop video goes viral | Oneindia Kannada

ಕೊರೊನಾ ವೈರಸ್‌ ಸೋಂಕು ಇರುವ ಕಾರಣ ಸರ್ಕಾರ ಮದುವೆ ಕಾರ್ಯಕ್ರಮಗಳಿಗೆ ಕೆಲವು ನಿಯಮ ನೀಡಿದೆ. ಅದರಂತೆ, 50 ಜನರಿಗಿಂತ ಹೆಚ್ಚಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ, ಅನೇಕ ಸರಳ ಮದುವೆಗಳು ನಡೆಯುತ್ತಿವೆ.

ಮದುವೆಯಲ್ಲಿ ಮಾಸ್ಕ್ ಧರಿಸದಿದ್ದರೆ 10,000 ರೂ. ದಂಡ!ಮದುವೆಯಲ್ಲಿ ಮಾಸ್ಕ್ ಧರಿಸದಿದ್ದರೆ 10,000 ರೂ. ದಂಡ!

ರಂಚಿತಾ ಹಾಗೂ ನವೀನ್ ಮದುವೆಯಾಗುತ್ತಿರುವ ಜೋಡಿಯಾಗಿದ್ದಾರೆ. ಇದು ವಂಕದಾರಿ ಮತ್ತು ಚಿಂತಾಲ ಕುಟುಂಬದ ಮದುವೆಯಾಗಿದೆ. ಈ ಕುಟುಂಬ ಕೊರೊನಾ ಇರುವ ಕಾರಣ ತಮ್ಮ ಸ್ನೇಹಿತ ಹಾಗೂ ಸಂಬಂಧಿಗಳಿಗೆ ಫೇಸ್‌ ಬುಕ್ ಮೂಲಕವೇ ಮದುವೆ ಸಂಭ್ರಮದಲ್ಲಿ ಭಾಗಿಯಾಗುವಂತೆ ಹೇಳಿದೆ.

Davangere Couple Invited Friends To Bless On Facebook Live

ಮದುವೆ ಆಮಂತ್ರಣ ಪತ್ರಿಕೆ ಸಿದ್ಧ ಮಾಡಿದೆ. ಆದರೆ, ಅದರಲ್ಲಿ ಫೇಸ್‌ ಬುಕ್‌ ಲೈವ್‌ ಮೂಲಕ ಮದುವೆ ಸಂಭ್ರಮದಲ್ಲಿ ಸೇರಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಆಮಂತ್ರಣ ಪತ್ರಿಕೆ ನೀಡಿದ್ದರೂ, ಮದುವೆಗೆ ಭಾಗಿಯಾಗುವಂತಿಲ್ಲ. ಆನ್ ಲೈನ್ ಮೂಲಕವೇ ಹೊಸ ಜೋಡಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದೆ.

ಜೂನ್ 15 ರಂದು ಬೆಳಗ್ಗೆ 9 ಗಂಟೆಗೆ ದಾವಣಗೆರೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವೀನ್ ಮತ್ತು ರಂಜಿತಾ ವಿವಾಹ ನಡೆಯಲಿದೆ.

English summary
Davangere couple invited friends to their marriage and to bless in facebook live.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X