ದೂರು ಕೊಡಲು ಬಂದವಳೊಂದಿಗೇ ಅಕ್ರಮ ಸಂಬಂಧ; ಪೊಲೀಸ್ ಮೇಲೆ ಕೇಸ್!

ದಾವಣಗೆರೆ, ಅಕ್ಟೋಬರ್ 11: ಜಗಳ ಆಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ ಹೆಂಡತಿಯನ್ನು ಬೇರೆ ಮಾಡಿ ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪಿಎಸ್ಐ ಗುಟ್ಟು ರಟ್ಟಾಗಿ ಈಗ ಆತನ ಮೇಲೇ ಪ್ರಕರಣ ದಾಖಲಾಗಿದೆ.

ಹದಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ‌ನಿರ್ವಹಿಸುತ್ತಿದ್ದ ಸಂದರ್ಭ ಪಿಎಸ್ಐ ರಾಜೇಂದ್ರ ನಾಯ್ಕ್ ಬಳಿ ಕೌಟುಂಬಿಕ ಪ್ರಕರಣವೊಂದು ಬಂದಿತ್ತು. ಆ ಸಮಯದಲ್ಲಿ ಆಕೆಯನ್ನು‌ ನೋಡಿದ್ದ ರಾಜೇಂದ್ರ, ಆ ದಂಪತಿಯನ್ನು ಒಂದು ಮಾಡುವ ಬದಲು, ಒಂದು ಮಗುವಿದ್ದ ಆ ಮಹಿಳೆಯು ಗಂಡನಿಗೆ ವಿಚ್ಛೇದನ ಕೊಡುವಂತೆ ಪ್ರೇರೇಪಿಸಿದ್ದ. ನಂತರ ಆಕೆಯೊಂದಿಗೆ ಅಕ್ರಮ ಸಂಬಂಧ ಆರಂಭಿಸಿದ್ದ. ವಿವಾಹಿತನಾಗಿದ್ದ ಈತ ಆ ಮಹಿಳೆಗೆ ಬೇರೊಂದು‌ ಮನೆ ಮಾಡಿಟ್ಟು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ. ಆಗಾಗ್ಗೆ ಆಕೆಯಿಂದ ಹಣವನ್ನೂ ಪಡೆಯುತ್ತಿದ್ದ. ಆದರೆ ಈಗ ಆ ಅಕ್ರಮ ಸಂಬಂಧದಲ್ಲಿ ಬಿರುಕು ಮೂಡಿದ್ದು ಪೊಲೀಸ್ ಠಾಣೆಯ‌ ಮೆಟ್ಟಿಲೇರಿದೆ.

ರಾಜೇಂದ್ರ ಮನೆಯಲ್ಲಿ ಅಕ್ರಮ ಸಂಬಂಧದ ವಿಷಯ ತಿಳಿಯುತ್ತಿದ್ದಂತೆ ಜಗಳ ಆರಂಭವಾಗಿದೆ. ಈ ಮಹಿಳೆ ಕೂಡ ಪಿಎಸ್ಐ ಮನೆಗೆ ಹೋಗಿ ತನಗೆ ನ್ಯಾಯ ಕೊಡಿಸಿ ಇಲ್ಲವೇ ನನ್ನ ಗಂಡನೊಂದಿಗೆ ಒಂದು ಮಾಡಿ ಎಂದು ಕೇಳಿಕೊಂಡಿದ್ದಾಳೆ. ಆ ಸಂದರ್ಭ ಪಿಎಸ್ಐ ಹಾಗೂ ಆತನ ಪತ್ನಿ ಈಕೆ ಮೇಲೆ ಹಲ್ಲೆ ನಡೆಸಿರುವುದಾಗಿ ಹಾಗೂ ಈಕೆಯ ಮನೆಗೂ ಬಂದು ವಿಷ ಕುಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 28ರಂದು ಆಕೆ ಮೇಲೆ ಹಲ್ಲೆ ನಡೆದಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು.

Case Against Davanagere Police For Illegal Relationship

ಈಗ ಹಾವೇರಿ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ‌ ಕೆಲಸ ನಿರ್ವಹಿಸುತ್ತಿರುವ ರಾಜೇಂದ್ರ ‌ನಾಯ್ಕ್ ಹಾಗೂ ಆತನ ಪತ್ನಿ ಕೂಡ ಆ ಮಹಿಳೆ ಮೇಲೆ‌ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+