ದಾವಣಗೆರೆ: ಕೊರೊನಾಗೆ 3 ನೇ ಬಲಿ, 12 ಹೊಸ ಕೇಸ್ ಪತ್ತೆ
ದಾವಣಗೆರೆ, ಮೇ 5: ದಾವಣಗೆರೆ ನಗರದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣ ಮುಂದುವರಿಯುತ್ತಲೇ ಇದೆ. ಮಂಗಳವಾರ ಬರೋಬ್ಬರಿ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮತ್ತೊಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೇರಿದೆ.
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರು ಹೆಚ್ಚುತ್ತಿದ್ದು, ಇದುವರೆಗೂ 44 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 44 ರಲ್ಲಿ ಇಬ್ಬರು ಗುಣಮುಖರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಉಳಿದ 39 ಮಂದಿ ಸೋಂಕಿತರಿಗೆ ಜಿಲ್ಲಾಡಳಿತದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 29 ಮತ್ತು 30 ರಂದು ವೃದ್ಧ ಹಾಗೂ ನರ್ಸ್ ಗೆ ಸೋಂಕು ಪತ್ತೆಯಾಗಿತ್ತು. ಈ ಇಬ್ಬರು ಸೋಂಕಿತರ ಸಂಪರ್ಕ ಹೊಂದಿದವರಿಗೆ ಸೋಂಕು ಪತ್ತೆಯಾಗಿರುವ ಕಾರಣ, ಜಿಲ್ಲೆಯಲ್ಲಿ ಆತಂಕ ಮುಂದುವರೆದಿದೆ.