ಸಿರಿಗೆರೆ ಬೃಹನ್ಮಠದಲ್ಲಿ ಫೆ.28ರಿಂದ 'ಸದ್ಧರ್ಮ ನ್ಯಾಯ ಪೀಠ' ಪುನರಾರಂಭ
ಚಿತ್ರದುರ್ಗ, ಫೆಬ್ರವರಿ 22: ಕೊರೊನಾ ಸೋಂಕು ಮತ್ತು ಓಮಿಕ್ರಾನ್ ಭೀತಿಯಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಇದೇ ಫೆ.28ರಿಂದ 'ಸದ್ಧರ್ಮ ನ್ಯಾಯ ಪೀಠ' ಪುನರಾರಂಭವಾಗಲಿದೆ.
ಸದ್ಧರ್ಮ ನ್ಯಾಯ ಪೀಠ ಪುನರಾರಂಭದ ಕುರಿತು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠವು ಪ್ರಕಟಣೆ ಹೊರಡಿಸಿದ್ದು, ಕೆಲವು ಮಾರ್ಗಸೂಚಿಗಳನ್ನು ಭಕ್ತರು ಪಾಲಿಸಬೇಕೆಂದು ಮನವಿ ಮಾಡಿದೆ.
ಪ್ರಕಟಣೆಯ ಅಂಶಗಳು
* ಕೊರೊನಾ ಕಾರಣದಿಂದ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳು ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು.

* ಕಳೆದ ಜನವರಿ ತಿಂಗಳಲ್ಲಿ ಎರಡು ಸೋಮವಾರ ನ್ಯಾಯಪೀಠವನ್ನು ಪುನರಾರಂಭಿಸಲಾಗಿತ್ತು. ಆದರೆ ಮತ್ತೆ ಕೋವಿಡ್ ಹೆಚ್ಚಾದ ಕಾರಣದಿಂದ ಮುಂದೂಡಲಾಗಿತ್ತು.
* ಈಗ ಎಲ್ಲಾ ನ್ಯಾಯಾಲಯಗಳು ಖುದ್ದಾಗಿ ಹಾಜರಾಗಲು ಅವಕಾಶ ಕಲ್ಪಿಸಿಕೊಟ್ಟಿವೆ. ಆದ ಕಾರಣ ನಮ್ಮ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಸದ್ಧರ್ಮ ನ್ಯಾಯಪೀಠವನ್ನು ಇದೇ ಫೆಬ್ರವರಿ 28ರ ಸೋಮವಾರದಿಂದ ಪುನರಾರಂಭಗೊಳಿಸಲು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ಧರಿಸಿರುತ್ತಾರೆ.

* ಎಂದಿನಂತೆ ಭಕ್ತಾದಿಗಳು ಇನ್ನು ಮುಂದೆ ಪ್ರತಿ ಸೋಮವಾರ ನ್ಯಾಯಪೀಠಕ್ಕೆ ತಮ್ಮ ಅಹವಾಲುಗಳೊಂದಿಗೆ ಹಾಜರಾಗಬಹುದು.
* ದಿನಾಂಕ 28-2-2022ರಂದು ಇರುವ ಕೇಸ್‌ಗಳು ಈ ಕೆಳಕಂಡಂತೆ ಇವೆ. ಸಂಬಂಧಪಟ್ಟವರು ನ್ಯಾಯಪೀಠಕ್ಕೆ ಹಾಜರಾಗುವುದು.
* ನ್ಯಾಯಪೀಠದ ಕಾರ್ಯಕಲಾಪಗಳನ್ನು ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ನಡೆಸಲಾಗುತ್ತದೆ.
* ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿಕೊಂಡು ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿಗಳು ತಿಳಿಸಿದ್ದಾರೆ.












Click it and Unblock the Notifications