ಶ್ರೀರಂಗಪಟ್ಟಣದಲ್ಲಿ ಮದಕರಿ ನಾಯಕ ಸ್ಮಾರಕ ನಿರ್ಮಾಣಕ್ಕೆ ಕಾಳಿಸ್ವಾಮಿ ಆಗ್ರಹ

ಚಿತ್ರದುರ್ಗ, ಜೂನ್ 9 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮದಕರಿ ನಾಯಕ ಸ್ಮಾರಕ ನಿರ್ಮಾಣ ಮಾಡುವಂತೆ ರಿಷಿಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈದರಾಲಿಯು ಮದಕರಿ ನಾಯಕನಿಗೆ ವಿಷವಿಟ್ಟು ಮೋಸದಿಂದ ಹತ್ಯೆ ಮಾಡಿದ್ದಾನೆ. ಶ್ರೀರಂಗಪಟ್ಟಣ ಮಸೀದಿ ಅಲ್ಲ, ಅದು ಆಂಜನೇಯ ದೇಗುಲವಾಗಿತ್ತು. ಈಗಿರುವ ಮಸೀದಿಯಲ್ಲಿರುವ ಮದರಸಾ ಖಾಲಿ ಮಾಡಿಸಬೇಕು. ಇಲ್ಲವಾದರೆ ಬೆಂಗಳೂರಿನಿಂದ ಶ್ರೀರಂಗಪಟ್ಟಣವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಿಷಿಕುಮಾರ ಸ್ವಾಮಿ ತಿಳಿಸಿದರು.

ಮೊನ್ನೆ ನೆಡೆದ ಶ್ರೀರಂಗಪಟ್ಟಣ ಪಾದಯಾತ್ರೆಯಲ್ಲಿ ನಮ್ಮ ಹುಡುಗರು ಏನು ಮಾಡಿದ್ದರು ಅಂತ ತಡೆದಿದ್ದೀರಾ ? ಇದು ಆಗಲ್ಲ. ಎಲ್ಲೂ ಹಿಂದೂಪರ ಸ್ವಾಮಿಜಿಗಳು ಸಹಿತವಾಗಿ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬರುತ್ತೇವೆ. ಬೆಂಗಳೂರಿನ ಅಣ್ಣಮ್ಮ ದೇವಾಲಯದಿಂದ ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇಗುಲಕ್ಕೆ ಪಾದಯಾತ್ರೆ ನಡೆಸಲಾಗುತ್ತದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಿಂದೂ ಹನುಮ ಮಾಲಾದಾರಿಗಳೊಂದಿಗೆ ಶ್ರೀರಂಗಪಟ್ಟಣ ಪ್ರವೇಶಿಸಲಾಗುವುದು ಎಂದು ತಿಳಿಸಿದರು.

RishiKumar Swami Demands for Madakari Nayaka Statue in Srirangapatna

ಕೆಪಿಸಿಸಿ ಮುಂದೆ ನೇತಾಡಿದ ಚಡ್ಡಿಗಳು :
RSS ಕಾರ್ಯಕರ್ತರು ಸೀಳುನಾಯಿಗಳಂತೆ ಬರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಸ್ವಾಮೀಜಿ " ಒಂದು ಚಡ್ಡಿ ಸುಟ್ಟಿದ್ದಕ್ಕೆ ಕೆಪಿಸಿಸಿ ಕಚೇರಿ ತುಂಬ ಚಡ್ಡಿ ನೇತಾಡುತ್ತಿವೆ. ಚಡ್ಡಿ ಭಯಕ್ಕೆ ಯಾರು ಸುದ್ದಿಗೂ ಹೋಗಲ್ಲ ಎನ್ನುತ್ತಿರೋದು. ಸೀಳನಾಯಿ ಬಂದಂಗೆ ಬರ್ತವೆ ಅನ್ನೋದು ನಿಮ್ಮ ಭಾಷೆ . ನಿಜ, ಆರ್ ಎಸ್ ಎಸ್ ನವರು ಶತೃಗಳಿಗೆ ಸೀಳು ನಾಯಿಗಳೇ, ಆದರೆ ನೀನು ಯಾಕೆ ಶತೃತ್ವ ಕಟ್ಟಿಕೊಳ್ಳೋಕೆ ಹೋಗ್ತೀದಿಯಾ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಚಡ್ಡಿ ಸುಡ್ತೀನಿ ಅಂದಿದ್ದಕ್ಕೆ ನೀನು ತರೋದು ಬೇಡ ಅಂತ ಚಡ್ಡಿ ಕಳಿಹಿಸುತ್ತಿರೋದು. ನಮ್ಮವರು ಮನೆ ಮನೆಗೆ ಹೋಗಿ ಚಡ್ಡಿ ಸಂಗ್ರಹ ಮಾಡಿ ಕೆಪಿಸಿಸಿ ಕಚೇರಿಗೆ ಕಳುಹಿಸಿದ್ದಾರೆ. ಚಡ್ಡಿ ವಾಸನೆ ತಡೆಯಲು ಆಗದೆ ಸೀಳುನಾಯಿಯಂತೆ ಬರ್ತಾರೆ ಎನ್ನುತ್ತೀರಾ ಎಂದು ಪ್ರಶ್ನೆ ಮಾಡಿದರು. ಈಗಾಗಲೇ ಚಡ್ಡಿ ವಾಸನೆ ಸಿದ್ಧರಾಮಯ್ಯ ಮೂಗಿಗೆ ಹೋಗಿದೆ. ಸಿದ್ಧರಾಮಯ್ಯ ಗಿಲಿಬಿಲಿ ಆಟಗಳನ್ನು ಬಿಟ್ಟು ದೇಶಕ್ಕಾಗಿ , ಧರ್ಮಕ್ಕಾಗಿ, ಜಗತ್ತಿನ ಒಳಿತಾಗಿ ಚಿಂತಿಸಿ ಎಂದು ಸಲಹೆ ನೀಡಿದರು.

RishiKumar Swami Demands for Madakari Nayaka Statue in Srirangapatna

ದೇಗುಲಕ್ಕೆ ಭೇಟಿ
ನಗರದ ಕೋಟೆ ರಸ್ತೆಯಲ್ಲಿರುವ ರಾಜ ಉತ್ಸವಾಂಬ ದೇಗುಲಕ್ಕೆ ರಿಷಿಕುಮಾರ ಸ್ವಾಮಿ‌ ಭೇಟಿ ದೇವಿಗೆ ಪೂಜೆ‌ ಸಲ್ಲಿಸಿದರು. ಪಾಳೇಗಾರ ವಂಶಸ್ಥರಾದ ಪರಶುರಾಮ್ ನಾಯಕ್ ಗೆ ಮಾಲೆ ಹಾಕಿ‌ ಆಶೀರ್ವಾದ ಮಾಡಿದರು. ರಾಜ ವೀರಮದಕರಿ ನಾಯಕ ಸ್ಮಾರಕ ಟ್ರಸ್ಟ್ ರಚನೆಗೆ ನಿರ್ಧಾರ ಕೈಗೊಂಡಿದ್ದು, ರಿಷಿಕುಮಾರ್ ಸ್ವಾಮಿ ಗೌರವಧ್ಯಕ್ಷತೆಯಲ್ಲಿ ಶುಕ್ರವಾರ ಟ್ರಸ್ಟ್ ರಚನೆಯಾಗಲಿದೆ ಎಂದು ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+