ಪ್ರಿಯಾಂಕಾ ಗಾಂಧಿಗೆ ಕಂಬಳಿ ಹೊದಿಸಿ ಕುರಿಮರಿ ಉಡುಗೊರೆ ನೀಡಿದ ಕಾಡುಗೊಲ್ಲರು

ಚಿತ್ರದುರ್ಗ, ಏಪ್ರಿಲ್‌ 26: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದು, ಕಾಡುಗೊಲ್ಲ ಸಮುದಾಯದ ಮಹಿಳೆಯರು ಆರತಿ ಬೆಳಗುವ ಮೂಲಕ ಹಿರಿಯೂರಿಗೆ ಬರಮಾಡಿಕೊಂಡರು.

ಹಿರಿಯೂರು ತಾಲೂಕು ಕ್ರೀಡಾಂಗಣದಲ್ಲಿ ಕಾಡುಗೊಲ್ಲ ಸಮುದಾಯದ ಜೊತೆ ಸಂವಾದವನ್ನು ಆಯೋಜಿಸಿದ್ದು, ಸಂವಾದದಲ್ಲಿ ಕಾಡುಗೊಲ್ಲರ ಬೇಡಿಕೆ ಮತ್ತು ಅವರ ಸಮಸ್ಯೆಗಳನ್ನು ಆಲಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಮಸ್ಯೆಗಳು ಬಗೆ ಹರಿಯುವ ಬಗ್ಗೆ ಭರವಸೆ ನೀಡಿದರು.

Kadugolla Community Give Sheep To Priyanka Gandhi

ಸಂವಾದದಲ್ಲಿ ಮಾತನಾಡಿದ ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ಕಾಡುಗೊಲ್ಲರನ್ನು ಎಸ್ಟಿ ಮೀಸಲಾತಿಗೆ ಸೇರಿಸ ಬೇಕೆಂದು‌ ಪ್ರಸ್ತಾವನೆ‌ ಸಲ್ಲಿಕೆಯಾಗಿದ್ದು, ಅದನ್ನು ತಾವುಗಳು ಮಾಡಿ ಕೊಡುವ ಮೂಲಕ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ಧಿಯತ್ತ ಕರೆದೊಯ್ಯಬೇಕು ಎಂದು ಮನವಿ ಮಾಡಿದರು.

ಕಾಡುಗೊಲ್ಲರು ಅರಣ್ಯಗಳಲ್ಲಿ ವಾಸವಿದ್ದು, ಶಿಕ್ಷಣದಿಂದ ಬಹಳ ಹಿಂದುಳಿದಿದ್ದೆವೆ, ರಾಜಕೀಯವಾಗಿಯೂ ಕೂಡ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನೂ ಆರ್ಥಿಕವಾಗಿ ಅಭಿವೃದ್ಧಿ ಯಾಗುವುದು ದೂರದ ಮಾತಾಗಿದೆ. ನಮಗೆ ಎಸ್‌ಟಿ ಸೌಲಭ್ಯ ನೀಡಿದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು.

ಸ್ವಾತಂತ್ರ್ಯ ಪೂರ್ವದಿಂದ ಕಾಡುಗೊಲ್ಲರಿಗೆ ಬಹಳ ಅನ್ಯಾಯವಾಗಿದೆ. ಕಾಂಗ್ರೆಸ್‌ ಹಟ್ಟಿಗಳಿಗೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ ಎಂದು ಮನವಿಯನ್ನು ಕಾಡುಗೊಲ್ಲ ಮುಖಂಡರು ಮನವಿ ಮಾಡಿದರು. ಸಮಸ್ಯೆಗಳು ಬೇಡಿಕೆಗಳನ್ನು ಆಲಿಸಿದ ಪ್ರಿಯಾಂಕಾ ಗಾಂಧಿ, ನಿಮ್ಮದು ಸ್ವಾಭಿಮಾನಿ ಸಮಾಜ, ಎಸ್ಟಿ ಸೌಲಭ್ಯ ಸಿಕ್ಕಿಲ್ಲ ಎನ್ನುವುದು ಬಹಳ ನೋವಿನ ಸಂಗತಿ. ನಿಮಗೆ ಎಸ್ಟಿ ಸೌಲಭ್ಯ ಸಿಗಬೇಕೆಂದು ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು ಆಗಿಲ್ಲ. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

Kadugolla Community Give Sheep To Priyanka Gandhi

ರಾಜನೀತಿ ಬದಲಾಗಬೇಕು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿ, ನಂತರ ಸುಮ್ಮನಾಗವುದು ಸರಿಯಲ್ಲ. ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು, ನಾವು ಪ್ರಯತ್ನ ಪಡುತ್ತೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಮೊದಲು ಎಸ್ಟಿ ಸೇರಿಸುತ್ತೇವೆ. ನಿಮಗಾಗಿ ನಾವಿದ್ದೇವೆ, ಸರ್ಕಾರ ಬಂದಾಗ ನೀವು ಹೇಳಿದ ಹಾಗೆ ಮಾಡುತ್ತೇವೆ. ಕಾಡುಗೊಲ್ಲರಿಗೆ ನೀಡುವ ಸೌಲಭ್ಯ ನೀಡಬೇಕು, ಪ್ರಾತಿನಿಧ್ಯ ನಿಮಗೆ ನೀಡಿಲ್ಲ. ಆದರೆ ಅದು ನಿಮ್ಮ ಹಕ್ಕು. ನಿಮ್ಮ ಹಕ್ಕು‌ ನಿಮಗೆ ಸಿಗಲೇಬೇಕು. ನೀವು ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಬೇಕು. ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪಡೆಯುವ ಹಕ್ಕು ಕೂಡ ನಿಮ್ಮದು ಎಂದು ಹೇಳಿದರು.

ಈ ರೀತಿಯ ಸಂವಾದಗಳು ನಡೆಯಬೇಕು. ನಿಮ್ಮ ಸಮಸ್ಯೆಗಳನ್ನು ತಿಳಿಯಲು ಸಂವಾದಗಳು ಅವಶ್ಯಕ. ಇದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲು ಸಹಕಾರಿ ಆಗಲಿದೆ. ಡಿಕೆಶಿ, ಸಿದ್ದರಾಮಯ್ಯ ಹಾಗೂ ಸ್ಥಳೀಯ ನಾಯಕರುಗಳ ಜೊತೆ ಚರ್ಚೆಗಳು ನಡೆಯುತ್ತಿದ್ದರೆ ಸಮಸ್ಯೆಗಳನ್ನು ಪರಿಹಾರ ಹುಡುಕಲು ಸಾಧ್ಯ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಸಂವಾದ ನಮಗೆ ಅಗತ್ಯವಾಗಿದೆ ಎಂದರು.

Kadugolla Community Give Sheep To Priyanka Gandhi

ನೀವು ನನ್ನನ್ನು ಸ್ವಾಗತಿಸಿದ ರೀತಿ ಬಹಳ ಚೆನ್ನಾಗಿತ್ತು. ಸಂತೋಷ ತಂದಿದೆ. ನಿಮ್ಮ ಭಾಷೆ ನಮಗೆ ಅರ್ಥ ಆಗಿಲ್ಲ. ಆದರೂ ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತವೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ನಿಮ್ಮ ಜೊತೆ ಸದಾ ಇರುತ್ತೆನೆ ಎಂದು ಹೇಳುವ ಮೂಲಕ ಪ್ರಿಯಾಂಕಾ ಗಾಂಧಿ ಭರವಸೆಯನ್ನು ನೀಡಿದರು. ಸಂವಾದಕ್ಕೂ ಮುನ್ನ ಕಾಡುಗೊಲ್ಲರು ಪ್ರಿಯಾಂಕಾ ಗಾಂಧಿ ಅವರಿಗೆ ಕಂಬಳಿ ಹೊದಿಸಿ ಕುರಿ ಮರಿಯನ್ನು ಉಡುಗೊರೆಯಾಗಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+