ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಇಂದಿನಿಂದ ಉರುಸ್: ಆಚರಣೆಯಿಂದ ಹೊರಗುಳಿದ ಮುಸ್ಲಿಂ ಮುಖಂಡರು
ರಾಜ್ಯ ಸರ್ಕಾರಕ್ಕೆ ನಾಲ್ಕು ಬೇಡಿಕೆ ಇಟ್ಟಿರುವ ಮುಸ್ಲಿಂ ಸಮುದಾಯ ಉರುಸ್‍ನಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದೆ.ಇಂದಿನಿಂದ(ಮಾರ್ಚ್ 8ರಿಂದ) ಆರಂಭವಾಗುವ ಮೂರು ದಿನಗಳ ಉರುಸ್ ಆಚರಣೆಗೆ ಮುಸ್ಲಿಂ ಸಮುದಾಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದೆ.
ಚಿಕ್ಕಮಗಳೂರು, ಮಾರ್ಚ್ 8: ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಇಂದಿನಿಂದ(ಮಾರ್ಚ್ 8ರಿಂದ) ಆರಂಭವಾಗುವ ಮೂರು ದಿನಗಳ ಉರುಸ್ ಆಚರಣೆಗೆ ಮುಸ್ಲಿಂ ಸಮುದಾಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದೆ.
ದತ್ತಪೀಠದ ಆಡಳಿತಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ದತ್ತಪೀಠ ವ್ಯವಸ್ಥಾಪನ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿರುವ ಮುಸ್ಲಿಂ ಸಮುದಾಯ ಉರುಸ್‍ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಅಲ್ಲದೇ ವ್ಯವಸ್ಥಾಪನ ಮಂಡಳಿ ಹಾಗೂ ಜಿಲ್ಲಾಡಳಿದ ಮುಂದಾಳತ್ವದಲ್ಲಿ ಉರುಸ್ ಆಚರಣೆಯನ್ನ ತಿರಸ್ಕಿರಿಸಿರುವ ಮುಸ್ಲಿಂ ಸಮುದಾಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ.

ರಾಜ್ಯ ಸರ್ಕಾರಕ್ಕೆ ನಾಲ್ಕು ಬೇಡಿಕೆ ಇಟ್ಟಿರುವ ಮುಸ್ಲಿಂ ಸಮುದಾಯ ಉರುಸ್‍ನಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದೆ. ದತ್ತಪೀಠದಲ್ಲಿ ಅರ್ಚಕರ ನೇಮಕಾತಿ ರದ್ದು ಹಾಗೂ ವ್ಯವಸ್ಥಾಪನ ಮಂಡಳಿ ರದ್ದು ಮಾಡಬೇಕು. ಎಂಟು ಜನರ ವ್ಯವಸ್ಥಾಪನಾ ಮಂಡಳಿಯಲ್ಲಿ ನಾಲ್ಕು ಜನ ಹಿಂದೂ ಹಾಗೂ ನಾಲ್ಕು ಜನ ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ.
ಗುಹೆಯೊಳಗಿರುವ ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆಗೆ ಅವಕಾಶ ನೀಡಬೇಕು. ದತ್ತಪೀಠದಲ್ಲಿರುವ ಮಸೀದಿ ಓಪನ್ ಮಾಡಿ ನಮಾಜ್ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ದತ್ತಪೀಠ ಆಡಳಿತ ಮಂಡಳಿ ರಚನೆ ಬಳಿಕ ಹಿಂದೂ ಅರ್ಚಕರ ನೇಮಕಾತಿ ಮಾಡಿ ದತ್ತಪೀಠದಲ್ಲಿ ಹೋಮ-ಹವನ ಮಾಡಿ ದತ್ತಜಯಂತಿ ಆಚರಿಸಿದೆ. ಅದೇ ರೀತಿ ನಮಗೂ ನಮ್ಮ ಸಂಪ್ರದಾಯದಂತೆ ಉರುಸ್ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಉರುಸ್‍ಗೆ ವಿರೋಧ ವ್ಯಕ್ತಪಡಿಸಿದರು.

ನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಇಂದಿನಿಂದ(ಮಾರ್ಚ್ 8ರಿಂದ) ಆರಂಭವಾಗುವ ಮೂರು ದಿನಗಳ ಉರುಸ್ ಆಚರಣೆಗೆ ದೂರ ಉಳಿಯಲು ಮುಸ್ಲಿಂ ಮುಖಂಡರು ಚಿಂತಿಸಿದ್ದಾರೆ. ಅಲ್ಲದೇ ಇದೇ ಕಾರಣಕ್ಕೆ ವಿವಾದಿತ ದತ್ತಪೀಠದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.












Click it and Unblock the Notifications