Heart Attack: ಹೃದಯಘಾತದಿಂದ ಕಳಸ ಠಾಣೆಯ ಎಎಸ್‌ಐ ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್ 24: ಹೃದಯಘಾತದಿಂದ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಹೃದಯಾಘಾತಕದಿಂದ ಸಾವನ್ನಪ್ಪಿದ್ದಾರೆ.
ಜಿ.ಕೆ ಮುರಳೀಧರ್ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದಾಗ ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಳಸದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿ.ಕೆ ಮುರಳೀಧರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ನಗರ ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಅವರ ಅಗಲಿಕೆಗೆ ಜಿಲ್ಲಾ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ಇನ್ನು ಜಿ.ಕೆ ಮುರಳೀಧರ್ ಚಿಕ್ಕಮಗಳೂರು ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಇಲಾಖೆಯ ಕರ್ತವ್ಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದರು.
ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕ ನೀರು ಪಾಲು
ಚಿಕ್ಕಮಗಳೂರು: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುರುಬರಹಳ್ಳಿ ಗ್ರಾಮದ 25 ವರ್ಷದ ಗಣೇಶ್ ಮೃತ ದುರ್ದೈವಿ. ಕುರುಬರಹಳ್ಳಿ ಕೆರೆಯಲ್ಲಿ ಗಣಪತಿ ಬಿಡುವ ವೇಳೆ ಅವಘಡ ಸಂಭವಿಸಿದ್ದು ಯುವಕ ನೀರು ಪಾಲಾಗಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ದ್ವೇಷಕ್ಕೆ ವ್ಯಕ್ತಿಯ ಹೆಬ್ಬೆರಳು ಕಟ್ ಮಾಡಿದ ಭೂಪ
ಚಿಕ್ಕಮಗಳೂರು : ಹಳೆ ದ್ವೇಷಕ್ಕೆ ಯುವಕನೊಬ್ಬ ವ್ಯಕ್ತಿಯ ಹೆಬ್ಬೆರಳು ಕಟ್ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಗನಿಪುರ ಗ್ರಾಮದಲ್ಲಿ ನಡೆದಿದೆ. ಯುವಕ ಲಾಂಗು ಬೀಸಿದ ರಭಸಕ್ಕೆ ಸಗನಿಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಹೆಬ್ಬೆರಳು ತುಂಡಾಗಿದೆ. ಇನ್ನು ಹೆಬ್ಬೆರಳು ಕಳೆದುಕೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ನರಳಾಡುತ್ತಿದ್ದಾರೆ. ಅದೇ ಗ್ರಾಮ ಕೌಶಿಕ್ ಎಂಬ ಯುವಕ ಹುಚ್ಚಾಟ ಮೆರೆದು ಲಾಂಗ್ ಬೀಸಿದ್ದಾನೆ. ಮದ್ಯದ ಅಮಲಿನಲ್ಲಿ ಬಂದು ಹಲ್ಲೆ ಮಾಡಿದಾನೆಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಇನ್ನು ಕೌಶಿಕ್ ಫೇಸ್‌ಬುಕ್ ವಾಟ್ಸಪ್ ನಲ್ಲೂ ಲಾಂಗು, ಮಚ್ಚು, ಚೈನು ಹಿಡಿದು ಫೋಸ್ ನೀಡಿರುವ ಪೋಟೋಗಳು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಜೀವ ರಕ್ಷಣೆಗಾಗಿ ಕುಮಾರಸ್ವಾಮಿ ಪೊಲೀಸರ ಮೊರೆ ಹೋಗಿದ್ದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications