ಚಿಕ್ಕಮಗಳೂರು; ದತ್ತ ಜಯಂತಿ, 3320 ಪೊಲೀಸರ ನಿಯೋಜನೆ

ಚಿಕ್ಕಮಗಳೂರು, ಡಿಸೆಂಬರ್ 16; ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ದತ್ತಪೀಠದಲ್ಲಿ ಶುಕ್ರವಾರ ಗಣಹೋಮದೊಂದಿಗೆ ದತ್ತಜಯಂತಿ ವಿದ್ಯುಕ್ತವಾಗಿ ಆರಂಭಗೊಳ್ಳುತ್ತಿದೆ. ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಚಿಕ್ಕಮಗಳೂರು ಜಿಲ್ಲಾದ್ಯಂತ 3320 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ದತ್ತಪೀಠದಲ್ಲಿ ಡಿಸೆಂಬರ್ 17ರಂದು ಅನಸೂಯದೇವಿ ಪೂಜೆ ನಡೆದರೆ, ಡಿಸೆಂಬರ್ 18 ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಆಜಾದ್‌ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಡಿ. 19ರಂದು ದತ್ತಪೀಠಕ್ಕೆ ದತ್ತಭಕ್ತರು ಇರುಮುಡಿ ಹೊತ್ತು ಸಾಗುತ್ತಿದ್ದು, ಪೀಠದ ಹಸಿರಿನಂಗಳದಲ್ಲಿ ಕೇಸರಿಯ ರಂಗು ಮೂಡಲಿದೆ.

ದತ್ತಪೀಠದಲ್ಲಿ ಅನಸೂಯದೇವಿ ಪೂಜೆ, ಗಣಪತಿ ಹೋಮ, ದುರ್ಗಾಹೋಮವನ್ನು ಋತ್ವಿಜರು ನಡೆಸಿಕೊಡಲಿದ್ದಾರೆ. ಇತ್ತ ನಗರದಲ್ಲಿ ನಗರಸಂಕೀರ್ತನಾ ಯಾತ್ರೆ ನಡೆಯುವುದು. ಬೆಳಗ್ಗೆ 8.30ಕ್ಕೆ ಬೋಳರಾಮೇಶ್ವರ ದೇವಾಲಯ ಆವರಣದಿಂದ ಆರಂಭಗೊಳ್ಳುವ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಂಚರಿಸಿ, ಕಾಮಧೇನು ಗಣಪತಿ ದೇವಾಲಯ ಬಳಿ ಮುಕ್ತಾಯಗೊಳ್ಳಲಿದೆ.

Datta Jayanti In Chikkamagaluru 3320 Police Deployed

ಸಂಕೀರ್ತನಾ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ಯಾತ್ರೆ ಸಾಗಲಿದೆ. ವಿವಿಧ ಮಹಿಳಾ ಭಜನಾಮಂಡಳಿಗಳು ಪಾಲ್ಗೊಳ್ಳುತ್ತವೆ. ದತ್ತಾತ್ರೇಯರ ಅಡ್ಡೆಯನ್ನು ದತ್ತಭಕ್ತರು ಹೊತ್ತು ಪೀಠಕ್ಕೆ ಕೊಂಡೊಯ್ಯಲಿದ್ದಾರೆ.

ಭಕ್ತರು ಸರದಿಸಾಲಿನಲ್ಲಿ ಸಾಗಿ ದತ್ತಪಾದುಕೆಗಳ ದರ್ಶನ ಪಡೆಯುವರು. ಅನಸೂಯದೇವಿಗೆ ಪೂಜೆ ಸಲ್ಲಿಸುವರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಕಾರ್ಯಕ್ರಮ ಸಂಘಟಕರು ಬಳೆಗಳು ಮತ್ತು ಅರಿಶಿಣ, ಕುಂಕುಮ ನೀಡುವರು.

ಬಿಗಿ ಪೊಲೀಸ್ ಬಂದೋಬಸ್ತ್; ದತ್ತ ಜಯಂತಿ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮನ್ನೆಚ್ಚರಿಕೆ ಕ್ರಮವಾಗಿ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಒಟ್ಟು 3320 ಪೊಲೀಸರನ್ನು ನಿಯೋಜಿಸಲಾಗಿದೆ.

Datta Jayanti In Chikkamagaluru 3320 Police Deployed

ಒಬ್ಬರು ಎಸ್ಪಿ, ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ 3, ಡಿವೈಎಸ್ಪಿ 11, ವೃತ್ತನಿರೀಕ್ಷಕರು 31, ಠಾಣಾಧಿಕಾರಿ 141,ಸಹ ಠಾಣಾಧಿಕಾರಿ 171, ಮುಖ್ಯಪೇದೆ 718, ಪೊಲೀಸರು 1103, ಮಹಿಳಾ ಪೊಲೀಸರು 132, ಗೃಹರಕ್ಷಕದಳ 500, 14 ಕೆಎಸ್‌ಆರ್‌ಪಿ ತುಕಡಿ, 21 ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ.

ಸಮಾಜ ಘಾತುಕಶಕ್ತಿಗಳ ಮೇಲೆ ನಿಗಾ ಇಡಲು 23 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಇಲ್ಲಿ ಸಿಸಿಕ್ಯಾಮರಾ ಅಳವಡಿಸಿದ್ದು, ಇಲ್ಲಿ ಕಾರ್ಯ ನಿರ್ವಹಣೆ ಮಾಡಲು 66 ವಿಶೇಷ ತಂಡ ನಿಯೋಜನೆ ಮಾಡಲಾಗಿದೆ.

ಕೇಸರಿಮಯವಾದ ಕಾಫಿನಾಡು; ದತ್ತ ಜಯಂತಿ ಹಿನ್ನಲೆಯಲ್ಲಿ ಕಾಫಿನಾಡು ಸಂಪೂರ್ಣ ಕೆಸರಿಮಯವಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಕೇಸರಿ ಭಾವುಟಗಳು, ಭಗಧ್ವಜ, ಕೇಸರಿ ಬಂಟಿಂಗ್‌ಗಳು ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳಾದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ಸರ್ಕಲ್, ಭೋಳರಾಮೇಶ್ವರ ಸರ್ಕಲ್, ಎನ್‌ಎಂಸಿ ವೃತ್ತಗಳು ಕೇಸರಿ ಬಂಟಿಂಗ್‌ಗಳಿಂದ ತುಂಬಿ ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+