ಚಿಕ್ಕಬಳ್ಳಾಪುರದಲ್ಲಿ ಹಿರಿಯ ಅಟೆಂಡರ್ ರಿಂದ ನ್ಯಾಯಾಲಯ ಉದ್ಘಾಟನೆ

ತಮಗಿಂತ ಕೆಳಗಿನ ಸ್ಥಾನದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳಿಗೆ ಅನೇಕ ಜನರು ಗೌರವ ನೀಡುವುದಿಲ್ಲ. ಆದರೆ, ತಮಗಿಂತ ಕೆಳಗಿನ ಸ್ಥಾನದಲ್ಲಿ ಒಬ್ಬ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ನ್ಯಾಯಾಲಯವನ್ನು ಉದ್ಘಾಟನೆ ಮಾಡಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ನೂತನ ಜಿಲ್ಲಾ ನ್ಯಾಯಾಲಯವನ್ನು ಹಿರಿಯ ಅಟೆಂಡರ್ ರಿಂದ ಉದ್ಘಾಟನೆ ಮಾಡಿಸಲಾಗಿದೆ. ಜಯರಾಜ್ ತರಿಮೋತಿ ಈ ರೀತಿ ಆಕಸ್ಮಿಕವಾಗಿ ಅದೃಷ್ಟ ಪಡೆದಿದ್ದಾರೆ. ತಾವು ಕೆಲಸ ಮಾಡುವ ನ್ಯಾಯಾಲಯವನ್ನು ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಿದ್ದಾರೆ.

ಈ ರೀತಿ ಅಟೆಂಡರ್ ರಿಂದ ಜಿಲ್ಲಾ ನ್ಯಾಯಾಲಯವನ್ನು ಉದ್ಘಾಟನೆ ಮಾಡಿಸಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಎಸ್ ಓಕಾ. ತಮ್ಮನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದ ಸಮಯದಲ್ಲಿ, ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅಟೆಂಡರ್ ರಿಂದ ಉದ್ಘಾಟಿಸಬೇಕು ಎಂದು ಅಭಯ ರವರು ತಿಳಿಸಿದ್ದರಂತೆ.

Chikkaballapur District Court Inaugurated By A Attender

ಆಕಸ್ಮಿಕವಾಗಿ ತಮಗೆ ಬಗ್ಗೆ ಈ ಸುವರ್ಣಾವಕಾಶ ನೆನೆದು ಅಟೆಂಡರ್ ಜಯರಾಜ್ ತರಿಮೋತಿ ಸಂತಸ ಹಂಚಿಕೊಂಡಿದ್ದಾರೆ. ಇದು ನನ್ನ ಭಾಗ್ಯ ಎಂದಿದ್ದಾರೆ. ಜಯರಾಜ್ ಕೋಲಾರದ ಈಲಂ ನಿವಾಸಿಯಾಗಿದ್ದು, ಕಳೆದ 31 ವರ್ಷಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂದಹಾಗೆ, 11.50 ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ
ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅತಿಥಿಯಾಗಿ ಆಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+