ಬೆಲೆ ಇಳಿಸಿದ ರಾಜ್ಯ ಸರ್ಕಾರ: ವಿವಿಧ ಸಸಿಗಳಿಗೆ ಹೆಚ್ಚಿದ ಬೇಡಿಕೆ
ಚಿಕ್ಕಬಳ್ಳಾಪುರ, ಜುಲೈ 17: ಅರಣ್ಯ ಇಲಾಖೆ ಸಸ್ಯ ಕ್ಷೇತ್ರದಲ್ಲಿ ಬೆಳೆಸಿದ ಸಸಿಗಳನ್ನು ರೈತರು ಹಾಗೂ ಸಸ್ಯ ಪ್ರೇಮಿಗಳು ಖರೀದಿಸಲು ಹಿಂದೇಟು ಹಾಕಿದ್ದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸಸಿಗಳ ಬೆಲೆ ಇಳಿಸಿದ್ದರಿಂದ ರೈತರು ಹಾಗೂ ಅರಣ್ಯ ಕೃಷಿ ಮಾಡುವವರ ಮೊಗದಲ್ಲಿ ಖುಷಿ ಕಂಡು ಬಂದಿದೆ.
ಅರಣ್ಯ ಇಲಾಖೆ ಪ್ರತಿ ವರ್ಷದಂತೆ ಸಹಾಯ ಧನದ ಆಧಾರದಲ್ಲಿ ನೀಡುತ್ತಿದ್ದ ಸಸಿಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳ ಮಾಡಿತ್ತು. ಸಸಿಗಳ ಬೆಲೆ ದುಬಾರಿಯಾಗಿ ರೈತರು ಕಂಗಾಲಾಗಿದ್ದು, ಅರಣ್ಯ ಕೃಷಿ ಮಾಡುವ ಉತ್ಸಾಹಕ್ಕೆ ಕಲ್ಲು ಬಿದ್ದಿದ್ದಂತಾಗಿತ್ತು. ಮತ್ತೊಂದೆಡೆ ಮುಂಗಾರಿನಲ್ಲಿ ಸಸಿಗಳನ್ನು ಮಾರಾಟ ಮಾಡಲು ಅಣಿಗೊಂಡಿದ್ದ ಅರಣ್ಯ ಇಲಾಖೆ ಆತಂಕಕ್ಕೆ ಬಿದ್ದಿತ್ತು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಸಸ್ಯ ಕೇಂದ್ರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಸಿಗಳು ಮಾರಾಟಕ್ಕೆ ಸಿದ್ಧಗೊಂಡಿದ್ದರೂ ಕೊಳ್ಳುವವರಿಲ್ಲದೆ ಇಲಾಖೆಯು ನಷ್ಟ ಭೀತಿಯನ್ನು ಎದುರಿಸುತ್ತಿತ್ತು.
ಪ್ರಸಕ್ತ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲೆಡೆ ವಿವಿಧ ಗಾತ್ರದ ಅಂದರೆ 8/12 ಹಾಗೂ 6/9 ಇಂಚಿನ ಸುತ್ತಳತೆಯ ಚೀಲದಲ್ಲಿ ಲಕ್ಷಾಂತರ ಸಸಿಗಳನ್ನು ಹಾಗೂ ಉತ್ತರ ಅರಣ್ಯ ವಲಯ ಕೇಂದ್ರದಲ್ಲಿ 8/12 ಇಂಚಿನ ಚೀಲಗಳು, ಇಂಚಿನ ಚೀಲದಲ್ಲಿ ಅಸಂಖ್ಯಾತ ಲೆಕ್ಕದಲ್ಲಿ ಸಸಿಗಳನ್ನು ಬೆಳೆಸಲಾಗಿತ್ತು, ಮುಂಗಾರು ಆರಂಭವಾದರೂ ಶೇ.2 ರಷ್ಟು ಸಸಿಗಳನ್ನು ಮಾರಾಟ ಮಾಡಲು ಅರಣ್ಯ ಇಲಾಖೆಯಿಂದ ಸಾಧ್ಯವಾಗಿರಲಿಲ್ಲ, ಸಸಿಗಳ ಬೆಲೆ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ಕಳೆದ ಸಾಲಿನಲ್ಲಿ 6/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು ಕೇವಲ 1 ರೂ.ಗೆ, 8/12 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 3 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈ ಹಿಂದಿನ ಸರಕಾರದ ಆದೇಶದಂತೆ 6/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 6 ರೂ. 8/12 ಸೈಜ್‌ನ ಚೀಲಗಳಲ್ಲಿ ಬೆಳೆಸಲಾದ ಸಸಿಗಳನ್ನು ಈ ಬಾರಿ ಬರೊಬ್ಬರಿ 23 ರೂ.ಗೆ ಏರಿಕೆ ಮಾಡಲಾಗಿತ್ತು.
ಅರಣ್ಯ ಇಲಾಖೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಸಿಗಳನ್ನು ಮಾರಾಟ ಮಾಡಿದರೂ ಖರೀದಿಗೆ ಹಿಂಜರಿಯುತ್ತಿದ್ದ ರೈತರು ಹಾಗೂ ಸಾರ್ವಜನಿಕರ ಸಸಿಗಳ ಖರೀದಿಗೆ ಹೊಡೆತ ಬಿದ್ದಿತ್ತು. ಇದೀಗ ರಾಜ್ಯ ಸರಕಾರ ರೈತರು ಹಾಗೂ ಸಸಿಗಳ ಪ್ರಿಯರ ಪರವಾಗಿ 5/8 ಸಸಿಗಳನ್ನು 2 ರೂ.ಗೆ, 1/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 3 ರೂ. 8/12 ಸೈಟ್‌ನ ಚೀಲಗಳಲ್ಲಿ ಬೆಳೆಸಲಾದ ಸಸಿಗಳನ್ನು 6 ರೂ.ಗೆ ಇಳಿಕೆ ಮಾಡಿರುವುದು ಅರಣ್ಯ ಕೃಷಿ ಮಾಡುವವರು ಸೇರಿದಂತೆ ಸಸ್ಯಗಳ ಪ್ರೇಮಿಗಳಲ್ಲಿ ಖುಷಿ ಮೂಡಿಸಿದೆ.
ರೈತರಿಗೆ ಲಭ್ಯವಿರುವ ಸಸಿಗಳು ಯಾವುವು?
ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅರಣ್ಯ ಜೀವಿ ಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಜಿ.ಮಂಜುಳಾ ರವರು ಜು.13 ರಂದು ಆದೇಶ ಹೊರಡಿಸಿದ್ದು ಸದರಿ ಆದೇಶದಂತೆ ಸಸಿಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರೈತರಿಗೆ ಹಂಚಿಕೆ ಮಾಡಲು ನಾನಾ ಸಸ್ಯ ಕ್ಷೇತ್ರಗಳಲ್ಲಿ ಶ್ರೀಗಂಧ, ತೇಗ, ಹೆಬ್ಬೇವು, ಕರಿಬೇವು, ಬೇವು, ಬೆಟ್ಟದ ನೆಲ್ಲಿ ಹುಣಸಿ, ಸೀತಾಫಲ, ಹೊನ್ನೆ, ನೇರಳೆ, ಪೇರಲ, ನೆಲ್ಲಿ, ನುಗ್ಗೆ, ಚೆಲ, ಕಾಡು ಬಾದಾಮಿ, ರಕ್ತ ಚಂದನ, ಸಿಲ್ವರ್ ಓಕ್, ಹಲಸು, ತಬಸಿ, ಹೊಂಗೆ ಸೇರಿದಂತೆ ನಾನಾ ಜಾತಿಯ ಸಸಿಗಳನ್ನು ಅರಣ್ಯ ಇಲಾಖೆಯ ಸಸ್ಯ ಕೇಂದ್ರಗಳಲ್ಲಿ ಬೆಳೆಸಲಾಗಿದೆ.
ರಾಜ್ಯ ಸರ್ಕಾರ ರೈತರು ಹಾಗೂ ಸಸಿಗಳ ಪ್ರಿಯರ ಪರವಾಗಿ 5/8 ಸಸಿಗಳನ್ನು 2 ರೂ.ಗೆ, 6/9 ಸೈಜ್‌ನ ಚೀಲದಲ್ಲಿ ಬೆಳೆಸಲಾದ ಸಸಿಗಳನ್ನು 3 ರೂ. 8/11 ಸೈಜ್ ನ ಚೀಲಗಳಲ್ಲಿ ಬೆಳೆಸಲಾದ ಸಸಿಗಳನ್ನು 6 ರೂ.ಗೆ ಬೆಲೆ ಇಳಿಕೆ ಮಾಡಲಾಗಿದ್ದು, ರೈತರು ಹಾಗೂ ಸಸ್ಯ ಪ್ರೇಮಿಗಳು ತಮ್ಮ ಹತ್ತಿರದ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಸಸಿಗಳನ್ನು ಪಡೆಯಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಸಿ ಖರೀದಿಗೆ ಬೇಕಾಗುವ ದಾಖಲೆಗಳೇನು?
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆ ವತಿಯಿಂದ ವಿತರಣೆ ಮಾಡುತ್ತಿದ್ದ ಗಿಡಗಳ ಬೆಲೆಯನ್ನು ಏಕಾಏಕಿ ಹೆಚ್ಚಳ ಮಾಡಿ ವಿರೋಧಕ್ಕೆ ಕಾರಣವಾಗಿದ್ದ ಇಲಾಖೆ ನಂತರ ಎಚ್ಚೆತ್ತುಕೊಂಡಿದ್ದು, ಬೆಲೆಯನ್ನು ಕಡಿಮೆ ಮಾಡಿದೆ. ಹೀಗಾಗಿ ರೈತರು ಕಚೇರಿಗೆ ತೆರಳಿ ಜಮೀನಿನ ಪಹಣಿ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ದಾಖಲಾತಿ ಮೂಲಕ ಅರ್ಜಿ ಪಡೆದು ನೋಂದಣಿ ಮಾಡಿಸಿ ಕೊಳ್ಳಬಹುದಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications