ತಮಿಳುನಾಡಿನ ಬಿಕ್ಕಟ್ಟು ಪರಿಹಾರಕ್ಕೆ 3 ಕಾನೂನು ತಜ್ಞರ ಸಲಹೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 15: ತಮಿಳುನಾಡಿನ ಬಿಕ್ಕಟ್ಟು ಪರಿಹಾರಕ್ಕೆ 3 ಕಾನೂನು ತಜ್ಞರ ಸಲಹೆ ಕೋರಿ ಗೃಹ ಸಚಿವಾಲಯಕ್ಕೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಕಳಿಸಿರುವ ಮನವಿ ಪತ್ರದ ಪ್ರಮುಖ ಅಂಶಗಳು ಬಹಿರಂಗಗೊಂಡಿವೆ.

ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕೆ 1998ರಲ್ಲಿ ತಲೆದೋರಿದ್ದ ಉತ್ತರಪ್ರದೇಶದ ಜಗದಾಂಬಿಕಾ ಪಾಲ್ vs ಕಲ್ಯಾಣ್ ಸಿಂಗ್ ಪ್ರಸಂಗ ಮಾದರಿಯಾಗಲಿದೆ. ತಮಿಳುನಾಡು ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಬಹುಮತ ಸಾಬೀತುಪಡಿಸಲು ಉಭಯ ಬಣಕ್ಕೂ ಸಮಾನ ಅವಕಾಶ ನೀಡಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ಹೇಳಿದ್ದಾರೆ. [ತಮಿಳುನಾಡು ರಾಜ್ಯಪಾಲರ ಮುಂದಿರುವ 6 ಆಯ್ಕೆಗಳು]

TN crisis: Governor in report to Home Ministry cites advise of 3 legal experts

ಮೂವರು ಕಾನೂನು ತಜ್ಞರ ಸಲಹೆಯನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಕೋರಿದ್ದಾರೆ. ಎಜಿ, ಹಿರಿಯ ವಕೀಲ ಸೋಲಿ ಸೊರಾಬ್ಜಿ ಹಾಗೂ ಮೊಹನ್ ಪರಾಶರನ್ ಅವರು ರಾಜ್ಯಪಾಲರಿಗೆ ಸೂಕ್ತ ಸಲಹೆ ನೀಡಿದ್ದಾರೆ.

ಗೃಹಸಚಿವಾಲಯದಿಂದ ಸಿಗುವ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲ ವಿದ್ಯಾಸಾಗರ್ ಅವರು ಫೆಬ್ರವರಿ 12 ರಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಬಹುತೇಕ ಎಲ್ಲರೂ ಬಹುಮತ ಸಾಬೀತುಪಡಿಸಲು ಎಲ್ಲರಿಗೂ ಅವಕಾಶ ನೀಡಬೇಕು ಎಂದಿದ್ದರೆ, ಸೋಲಿ ಸೊರಾಬ್ಜಿ ಅವರು ಮಾತ್ರ, ಹೆಚ್ಚು ಶಾಸಕರನ್ನು ಹೊಂದಿರುವವರಿಗೆ ಹಕ್ಕು ಮಂಡನೆಗೆ ಅವಕಾಶ ನೀಡುವಂತೆ ಹೇಳಿದ್ದಾರೆ.

ಈ ವಾರದೊಳಗೆ ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಶಶಿಕಲಾ ಅವರಿಗೆ ಸರ್ಕಾರ ರಚನೆ, ಬಹುಮತ ಸಾಬೀತುಪಡಿಸಲು ಅವಕಾಶ ನೀಡಲು ವಿಳಂಬ ಮಾಡುವ ಮೂಲಕ ರಾಜ್ಯಪಾಲರು, ತಕ್ಕಮಟ್ಟಿಗೆ ಬಿಕ್ಕಟ್ಟು ಉಲ್ಬಣವಾಗದಂತೆ ನೋಡಿಕೊಂಡಿದ್ದಾರೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Attorney General of India Mukul Rohatgi has once again said that a special session of the Tamil Nadu legislative assembly be convened and a floor test conducted. In his advise to the Governor of Tamil Nadu, the AG said that if there are rival claims then a composite floor test be conducted in accordance with the 1998 Jagadambika Pal vs Kalyan Singh case in Uttar Pradesh.
Please Wait while comments are loading...