ಜಯಲಲಿತಾ ಅನಾರೋಗ್ಯ: ಸೆಪ್ಟೆಂಬರ್ 23ರಿಂದ ಡಿಸೆಂಬರ್ 4ರವರೆಗೆ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 4: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ದೊಡ್ಡ ಮಟ್ಟದ ಸುದ್ದಿ. ಅಲ್ಲಿ ಜನರ ಜೀವನವೇ ನಿಧಾನವಾದಂತಾಗಿದೆ. ಸೆಪ್ಟೆಂಬರ್ 23ರಿಂದ ಅಪೋಲೋ ಆಸ್ಪತ್ರೆ ಕಡೆಗೆ ನೋಡುತ್ತಾ ಕೂತಿದ್ದವರಿಗೆ ಭಾನುವಾರದ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ. ಇನ್ನೇನು ಅಮ್ಮ ಮನೆಗೆ ಹೋಗುವಷ್ಟು ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿಯ ಸಂತಸ ಆಚರಿಸುವಷ್ಟರಲ್ಲಿ ಆಘಾತಕಾರಿ ಮಾಹಿತಿ ಅಪೋಲೋ ಆಸ್ಪತ್ರೆಯಿಂದ ಬಂದಿದೆ.

ಸೆಪ್ಟೆಂಬರ್ 23ರಿಂದ ರಾಹುಲ್ ಗಾಂಧಿ, ಅಮಿತ್ ಶಾ, ರಜನಿಕಾಂತ್, ಖುಷ್ಬೂ, ರಾಜ್ಯಪಾಲ ವಿದ್ಯಾಸಾಗರ್ ಇನ್ನೂ ಹಲವರು ಅಪೋಲೋ ಆಸ್ಪತ್ರೆಗೆ ಬಂದು ನೋಡಿ ಹೋಗಿದ್ದಾರೆ. ಸೆಪ್ಟೆಂಬರ್ 23ರಿಂದ ಆಚೆಗೆ ನಡೆದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ.

apollo hospital

23.9 ಅತಿಸಾರ, ಜ್ವರದಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆ ದಾಖಲು
24.9 ಹೆಚ್ಚಿನ ಚಿಕಿತ್ಸೆಗೆ ಸಿಂಗಾಪೂರಕ್ಕೆ ಕರೆದುಕೊಂಡು ಹೋಗಲು ಚಿಂತನೆ
30.9 ಜಯಲಲಿತಾ ಆರೋಗ್ಯ ಮಾಹಿತಿ ಕೇಳಿದ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ
1.10 ಚೆನ್ನೈ ಅಪೋಲೋ ಆಸ್ಪತ್ರೆಗೆ ಯು.ಕೆ. ವೈದ್ಯ ರಿಚರ್ಡ್ ಜಾನ್ ಬೇಲ್
1.10 ಜಯಲಲಿತಾ ಆರೋಗ್ಯ ಮಾಹಿತಿ ಕೋರಿ ವಕೀಲರೊಬ್ಬರಿಂದ ರಾಷ್ಟ್ರಪತಿಗೆ ಪತ್ರ
4.10. ಜಯಲಲಿತಾ ಆರೋಗ್ಯ ಮಾಹಿತಿ ಬಹಿರಂಗಪಡಿಸಿ ಎಂದ ಹೈಕೋರ್ಟ್
6.10 ಹೈಕೋರ್ಟ್ ನಲ್ಲಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ
7.10 ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು ಸುಬ್ರಮಣಿಯನ್ ಸ್ವಾಮಿ ಒತ್ತಾಯ
8.10 ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಹೆಸರು ಚಾಲ್ತಿಗೆ
11.10 ಜಯಲಲಿತಾ ಅನಾರೋಗ್ಯ ಸಿಬಿಐ ತನಿಖೆಗೆ ಎಐಡಿಎಂಕೆ ಸಂಸದೆ ಒತ್ತಾಯ
16.10 ಅಪೋಲೋ ಆಸ್ಪತ್ರೆಗೆ ನಟ ರಜನೀಕಾಂತ್ ಭೇಟಿ
19.10 ಜಯಲಲಿತಾ ಫೋಟೋ ಇಟ್ಟು ಕ್ಯಾಬಿನೆಟ್ ಮೀಟಿಂಗ್
21.10 ಜಯಲಲಿತಾ ಸನ್ನೆ ಮೂಲಕ ಸ್ಪಂದಿಸುತ್ತಿದ್ದಾರೆ ಎಂಬ ಸುದ್ದಿ
22.10 ಜಯಲಲಿತಾ ಗುಣವಾಗಲೆಂದು ಚಾಮುಂಡೇಶ್ವರಿಗೆ ಹರಕೆ ಸಲ್ಲಿಕೆ
26.10 ಜಯಾ ಆರೋಗ್ಯದಲ್ಲಿ ಚೇತರಿಕೆ ಆಗಿದೆ, ಆದರೆ ವಾಪಸ್ ಮನೆಗೆ ಹೋಗೋದು ಅನುಮಾನ ಎಂದ ಸುಬ್ರಮಣಿಯನ್ ಸ್ವಾಮಿ
28.10 ಜಯಲಲಿತಾ ಮೇಲೆ ವಾಮಾಚಾರ ಮಾಡಲಾಗಿದೆ ಎಂಬ ವದಂತಿ
29.10 ಎಐಎಡಿಎಂಕೆ ಅಭ್ಯರ್ಥಿ ಚುನಾವಣೆ ಫಾರಂಗೆ ಜಯಲಲಿತಾ ಹೆಬ್ಬೆಟ್ಟು ಗುರುತು
4.11 ಇನ್ನು ಮೂರು ವಾರದಲ್ಲಿ ಜಯಲಲಿತಾ ಆಸ್ಪತ್ರೆಯಿಂದ ಬಿಡುಗಡೆ ಎಂಬ ಮಾಹಿತಿ
7.11 ಜಯಲಲಿತಾ ಆಸ್ಪತ್ರೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ: ಎಐಎಡಿಎಂಕೆ
14.11 ಇದು ನನ್ನ ಪುನರ್ಜನ್ಮ: ಚೇತರಿಕೆ ನಂತರ ಅಮ್ಮ ಮೊದಲ ಹೇಳಿಕೆ
19.11 ಕೊನೆಗೂ ಐಸಿಯುನಿಂದ ಹೊರಬಂದ ಜಯಲಲಿತಾ
4.12 ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಾಘಾತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is a timeline of Tamil nadu cm Jayalalithaa in hospital from September 23, 2016 to December 4, 2016. Apollo Hospital says in a press release, TN CM Jayalalithaa has suffered cardiac arrest this evening (Dec 4) and is being treated by a team in Critical Care Unit.
Please Wait while comments are loading...