• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಮಾದರಿ ಚೆನ್ನೈನಲ್ಲಿ ಅಗ್ನಿ ಅವಘಡ 150ಕ್ಕೂ ಹೆಚ್ಚು ಕಾರಿಗೆ ಹಾನಿ

|

ಚೆನ್ನೈ, ಫೆಬ್ರವರಿ 24 : ನಿಲುಗಡೆ ಪ್ರದೇಶದಲ್ಲಿ ಇದ್ದ ಒಟ್ಟು 174 ಪ್ರಯಾಣಿಕ ಕಾರುಗಳಿಗೆ ಭಾನುವಾರ ಮಧ್ಯಾಹ್ನ ಚೆನ್ನೈನ ಪೊರೂರ್ ಪ್ರದೇಶದಲ್ಲಿ ಬೆಂಕಿ ಬಿದ್ದು, ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾಹನಗಳನ್ನು ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್ ಬಳಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲಹಂಕದಲ್ಲಿ ಮತ್ತೆ ಬೆಂಕಿಯ ರುದ್ರ ನರ್ತನ

ಮಧ್ಯಾಹ್ನ ಎರಡು ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಬೆಂಕಿ ನಂದಿಸುವ ಸಲುವಾಗಿ ಆರು ವಾಹನಗಳನ್ನು ಕಳುಹಿಸಲಾಯಿತು. ಆ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿ ಪಿ.ಶರವಣನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬೆಂಕಿ ಹೊತ್ತಿಕೊಳ್ಳುವುದರಲ್ಲಿದ್ದ ಮೂವತ್ತೆರಡು ವಾಹನಗಳನ್ನು ಅನಾಹುತದಿಂದ ತಪ್ಪಿಸಲಾಗಿದೆ. ಬೆಂಕಿ ಹೊತ್ತುಕೊಳ್ಳುವುದಕ್ಕೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ. ಇದೇ ಮಾದರಿಯ ಅಗ್ನಿ ಅವಘಡ ಬೆಂಗಳೂರಿನ ಯಲಹಂಕದ ವಾಯು ನೆಲೆಯ ಎದುರು ಶನಿವಾರ ಸಂಭವಿಸಿ, ಮುನ್ನೂರಕ್ಕೂ ಹೆಚ್ಚು ಕಾರುಗಳು ಹಾನಿಗೀಡಾಗಿದ್ದವು.

English summary
A total of 174 passenger cars were gutted in a fire that engulfed a parking lot in Porur area in Chennai on Sunday afternoon, authorities said.The vehicles were parked near the Sri Ramachandra Medical Centre, a Tamil Nadu Fire and Rescue Services official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X