ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದು: ರಜನಿಕಾಂತ್

Posted By:
Subscribe to Oneindia Kannada
   ರಜಿನಿಕಾಂತ್ ಕನ್ನಡ ಹಾಗು ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಆಡಿದ ಮಾತುಗಳು | Oneindia Kannada

   ಚೆನ್ನೈ, ಡಿಸೆಂಬರ್ 30: ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ತಮ್ಮ ಅಭಿಮಾನಿಗಳೊಂದಿಗೆ ಸರಣಿ ಸಂವಾದಗಳನ್ನು ನಡೆಸುತ್ತಿದ್ದಾರೆ. ಅದರಂತೆ ಶನಿವಾರ ಚೆನ್ನೈನಲ್ಲಿ ನಡೆದ ತಮ್ಮ ಅಭಿಮಾನಿಗಳ ಸಂವಾದದಲ್ಲಿ ರಜನಿ ಕನ್ನಡಾಭಿಮಾನ ಪ್ರದರ್ಶಿಸಿದರು.

   ರಜನಿ ರಾಜಕೀಯ ಪ್ರವೇಶ, ಡಿ 31ಕ್ಕೆ ಅಧಿಕೃತ ಘೋಷಣೆ

   ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ರಜನಿಕಾಂತ್, "ನಾನು ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದೇನೆ. ನನ್ನ ಕುಟುಂಬ, ಸಹೋದರರು ಕನ್ನಡವನ್ನು ಕಲಿತಿದ್ದಾರೆ. ಕನ್ನಡದಲ್ಲಿಯೇ ಮಾತನಾಡುತ್ತಾರೆ ಎಂದು ಕನ್ನಡಾಭಿಮಾನವನ್ನು ಹೊರಹಾಕಿದರು.

   I studied in Kannada and grew up in Karnataka says Super star Rajinikanth

   ತಮಿಳು ಚಿತ್ರರಂಗಕ್ಕೆ ಬಂದ ನಂತರ ತಮಿಳು ಮಾತನಾಡುವುದನ್ನು ಕಲಿತೆ. ಹಾಗೂ ನನ್ನ ಗುರುಗಳಾದ ನಿರ್ದೇಶಕ ಬಾಲಚಂದರ್ ತಮಿಳು ಕಲಿಯುವಂತೆ ತಿಳಿಸಿದ್ದರು. ಅದರಂತೆ ಜೀವನಕ್ಕಾಗಿ ತಮಿಳು ಮಾತನಾಡಲು ಕಲಿತೆ ಎಂದರು. ಇದೀಗ, ತಮಿಳು ಚಿತ್ರರಂಗ ನನ್ನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಬೆಳಸಿದೆ ಎಂದು ಹೇಳಿದರು.

   ಬಾರಿ ಕುತೂಹಲ ಕೆರಳಿಸಿರುವ ರಜನಿ ರಾಜಕೀಯ ನಡೆ ಡಿಸೆಂಬರ್ 31ರಂದು ತೆರೆ ಬೀಳಲಿದೆ. ಅಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ರಜನಿಕಾಂತ್ ಅವರೇ ಘೋಷಣೆ ಮಾಡಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Actor Rajinikanth expresses his love for Kannada, I studied in Kannada and grew up in Karnataka. He added that his family members are also Kannadigas and speak in Kannada said Super star Rajinikanth in Chennai on December 30.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ