'ಹಿಂದೂ' ವಿರೋಧಿ ಕಮಲ್ ಹಾಸನ್ ವಿರುದ್ಧ ದೂರು!

Posted By:
Subscribe to Oneindia Kannada

ಚೆನ್ನೈ, ಮಾರ್ಚ್ 16: 'ಯೂನಿರ್ವಸಲ್ ಸ್ಟಾರ್' ಕಮಲ್ ಹಾಸನ್ ವಿರುದ್ಧ ಮತ್ತೊಮ್ಮೆ ಹಿಂದೂ ಪರ ಸಂಘಟನೆಗಳು ತಿರುಗಿ ಬಿದ್ದಿವೆ. ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳ ಎದುರು ಸದಾಕಾಲ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ನಟ ಕಮಲ್ ಹಾಸನ್ ವಿರುದ್ಧ ಹಿಂದೂ ಮಕ್ಕಳ್ ಕಚ್ಚಿಯಿಂದ ದೂರು ದಾಖಲಾಗಿದೆ.

ಚೆನ್ನೈ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಹಿಂದೂ ಮಕ್ಕಳ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದು, ಕಮಲ್ ಹಾಸನ್ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.[ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ : ಕಮಲ್ ಹಾಸನ್]

Complaint filed against Kamal Haasan by Hindu Makkal Katchi

ಇತ್ತೀಚಿಗೆ ಕಮಲ್ ಹಾಸನ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಹಾಭಾರತದ ಬಗ್ಗೆ ಉಲ್ಲೇಖಿಸಿದ್ದರು. ಮಹಾಭಾರತದಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ. ಜೂಜಾಟದಲ್ಲಿ ದಾಳದಂತೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದರು.[ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್]

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಮಕ್ಕಳ ಪಕ್ಷ, ಕಮಲ್ ಅವರ ಭಾಷಣ, ಸಂದರ್ಶನ, ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಅವರ ಸಂದೇಶಗಳು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಸಮಾಜದ ಶಾಂತಿ ಕದಡುತ್ತಿವೆ ಎಂದು ಆರೋಪಿಸಿದೆ.ದೂರು ಸ್ವೀಕರಿಸಿರುವ ಪೊಲೀಸರು, ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindu Makkal Katchi lodged a complaint against actor Kamal Haasan for his ‘derogatory remarks against Hindus through media and social network sites’.
Please Wait while comments are loading...