ಚೆನ್ನೈನಲ್ಲಿ ಅಮ್ಮನ ಅಭಿಮಾನಿಯ ಹುಚ್ಚು ಸಾಹಸ ನೋಡಿ!

ಚೆನ್ನೈ, ಫೆ. 23 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು, ಅವರ ವಿರುದ್ಧದ ದೂರುಗಳನ್ನು ಕೈಬಿಡಬೇಕು ಎಂದು ಅಮ್ಮ ಅಭಿಮಾನಿಯೊಬ್ಬ ಶಿಲುಬೆಗೇರಿದ್ದಾನೆ. ಇತನ ಹುಚ್ಚು ಸಾಹಸಕ್ಕೆ ಹಲವಾರು ಎಐಎಡಿಎಂಕೆ ಕಾರ್ಯಕರ್ತರು ಸಾಕ್ಷಿಯಾಗಿದ್ದರು.

ಸೋಮವಾರ ಚೆನ್ನೈನಲ್ಲಿ ತನ್ನನ್ನು ತಾನು ಕರಾಟೆ ಪಟು ಎಂದು ಹೇಳಿಕೊಳ್ಳುವ ಶಿಹಾನ್‌ ಹುಸೇನಿ ಎಂಬಾತ ಶಿಲುಬೆಗೇರಿ ಅಮ್ಮನ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದ್ದಾನೆ. ಎಐಎಡಿಎಂಕೆ ಕಾರ್ಯಕರ್ತರ ಸಮ್ಮುಖದಲ್ಲಿಯೇ ಈತ ಮರದಿಂದ ತಯಾರಿಸಿದ ಶಿಲೆಬೆಗೆ ಏರಿದ್ದಾನೆ.[ಶಿಹಾನ್ ಹುಸೇನಿ ಶಿಲುಬೆಗೇರಿದ ಚಿತ್ರಗಳು]

ಜಯಲಲಿತಾ ಅವರು ಪುನಃ ತಮಿಳುನಾಡು ಮುಖ್ಯಮಂತ್ರಿಯಾಗಬೇಕು ಅವರ ವಿರುದ್ಧದ ದೂರುಗಳನ್ನು ಕೈಬಿಡಬೇಕು ಎಂದು ಬೇಡಿಕೆ ಇಟ್ಟಿರುವ ಹುಸೇನಿ, ಶಿಲುಬೆಗೇರಿ ತನ್ನ ಕೈ- ಕಾಲುಗಳಿಗೆ 6 ಇಂಚು ಉದ್ದದ ಮೊಳೆಗಳನ್ನು ಹೊಡೆದುಕೊಂಡು ಅಭಿಮಾನ ಪ್ರದರ್ಶಿಸಿದ್ದಾನೆ. [ಜಯಲಲಿತಾಗೆ 10 ವರ್ಷ ಚುನಾವಣೆ ನಿಷೇಧ]

ಶಿಲುಬೆಯಲ್ಲಿ ಕೈ ಮತ್ತು ಕಾಲುಗಳಿಗೆ ಮೊಳೆ ಹೊಡೆದುಕೊಂಡು ಸುಮಾರು ಆರು ನಿಮಿಷಗಳ ಕಾಲ ನಿಂತಿದ್ದ ಹುಸೇನಿಯನ್ನು ನಂತರ ಕೆಳಗಿಳಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಐಎಡಿಎಂಕೆ ಕಾರ್ಯಕರ್ತರು ಹುಸೇನಿ ಅಭಿಮಾನವನ್ನು ಕಣ್ತುಂಬಿಕೊಂಡರು.

ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾಗಿ, ಜಯಲಲಿತಾ ಅವರು ಕಳೆದ ವರ್ಷ ಜೈಲು ಸೇರಿದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ನಂತರ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+