ಪಂಜಾಬ್ ಚುನಾವಣೆ: ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇನ್ನೂ ಕಣಕ್ಕಿಳಿಸದ ಕಾಂಗ್ರೆಸ್

ಚಂಡೀಗಢ, ಜನವರಿ 25: ಪಂಜಾಬ್ ವಿಧಾನಸಭಾ ಚುನಾವಣೆ ಕೆಲವೇ ವಾರಗಳು ಬಾಕಿ ಉಳಿದಿವೆ, ನಾಮಪತ್ರ ಸಲ್ಲಿಕೆ ಶುರುವಾಗಿದೆ. ಆದರೂ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ವೇಳಾಪಟ್ಟಿ ಪ್ರಕಾರ ಮುಂಬರುವ ಪಂಜಾಬ್ ವಿಧಾನಸಭಾ 2022ರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಜನವರಿ 25ರಂದು (ಮಂಗಳವಾರ) ಅಧಿಸೂಚನೆ ಹೊರಡಿಸುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 1ರವರೆಗೆ ಮುಂದುವರಿಯುತ್ತದೆ . ಫೆಬ್ರವರಿ 2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಫೆಬ್ರವರಿ 4 ಕೊನೆಯ ದಿನವಾಗಿರುತ್ತದೆ ಎಂದು ಕರುಣಾ ರಾಜು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇನ್ನೂ ಲುಧಿಯಾನಾ ದಕ್ಷಿಣ, ಗಿಲ್, ಸಹ್ನೆವಾಲ್ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಇದುವರೆಗೂ ಆ ಕ್ಷೇತ್ರಗಳಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಸ್ಪಷ್ಟತೆ ಲಭ್ಯವಾಗಿಲ್ಲ. ಇದುವರೆಗೂ ಚುನಾವಣಾ ಮೆರವಣಿಗೆಗಳನ್ನೂ ನಡೆಸಿಲ್ಲ.

Punjab Elections: Discontent In Congress As Ticket Get Delayed

ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿವೆ, ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಆರಂಭವಾಗಿದೆ ಆದರೆ ದಕ್ಷಿಣ, ಗಿಲ್, ಸಹ್ನೇವಾಲ್, ಜಾಗ್ರಾಂ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಯಾರೆಂಬುದೇ ತಿಳಿದಿಲ್ಲ.

ಪಂಜಾಬ್ ವಿಧಾನಸಭಾ ಚುನಾವಣೆಗೆ ನಾಮಪತ್ರಗಳನ್ನು ಜನವರಿ 25ರಿಂದ ಫೆಬ್ರವರಿ 1, 2022 ರವರೆಗೆ ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಲ್ಲಿಸಬಹುದಾಗಿದೆ.

ನಮೂನೆ 2ಬಿ ಯಲ್ಲಿ ನಾಮಪತ್ರ ಸಲ್ಲಿಸಬೇಕು. ಖಾಲಿ ನಮೂನೆಗಳು ಆಯಾ ಚುನಾವಣಾ ಅಧಿಕಾರಿಯಲ್ಲಿ ಲಭ್ಯವಿವೆ. ಟೈಪ್ ಮಾಡಿದ ನಾಮಿನೇಷನ್ ಪೇಪರ್‌ಗಳು ನಿಗದಿತ ನಮೂನೆಯಲ್ಲಿದ್ದರೆ ಅವುಗಳನ್ನು ಸಹ ಸ್ವೀಕರಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕರುಣಾ ರಾಜು ಹೇಳಿದ್ದಾರೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಚುನಾವಣೆಗೆ 13 ಸಿಖ್ ಸೇರಿದಂತೆ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷವು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯವನ್ನು ನೀಡಿದೆ. ಮೊದಲ ಪಟ್ಟಿಯಲ್ಲಿ 12 ರೈತ ಕುಟುಂಬಗಳು, ಎಂಟು ಪರಿಶಿಷ್ಟ ಜಾತಿಯವರು ಮತ್ತು ವೃತ್ತಿಪರರು ಇದ್ದಾರೆ ಎಂದು ತರುಣ್ ಚುಗ್ ಹೇಳಿದರು.

ಮಾಜಿ ಸಚಿವ ಮನೋರಂಜನ್ ಕಾಲಿಯಾ, ಕಾಂಗ್ರೆಸ್ ತೊರೆದ ಹಾಲಿ ಶಾಸಕ ರಾಣಾ ಗುರ್ಮೀತ್ ಸಿಂಗ್ ಸೋಧಿ, ಅರವಿಂದ್ ಖನ್ನಾ ಮತ್ತು ದಿವಂಗತ ಅಕಾಲಿ ದಿಗ್ಗಜ ಗುರುಚರಣ್ ಸಿಂಗ್ ತೋಹ್ರಾ ಅವರ ಮೊಮ್ಮಗ ಕನ್ವರ್ವೀರ್ ಸಿಂಗ್ ತೋಹ್ರಾ ಅವರ ಹೆಸರುಗಳು ಇವೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪಂಜಾಬ್ ರಾಷ್ಟ್ರದ ಹೆಮ್ಮೆ. ಆದರೆ ಅಲ್ಲಿ ಪರಿಸ್ಥಿತಿಯು ಕೆಟ್ಟದಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷವು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಎಸ್ಎಡಿ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮೂರು ಪಕ್ಷಗಳು ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸಲು ಮೂರು ಪಕ್ಷಗಳಿಂದ ತಲಾ ಇಬ್ಬರು ಆರು ಸದಸ್ಯರ ಸಮಿತಿಯನ್ನು ರಚಿಸಿವೆ. ಮೂರು ಪಕ್ಷಗಳು ಸಾಮಾನ್ಯ ಪ್ರಣಾಳಿಕೆಯನ್ನೂ ಮಾಡಲಿವೆ.

ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ವೈದ್ಯರು, ವಕೀಲರು, ಕ್ರೀಡಾಪಟುಗಳು, ರೈತರು, ಯುವಕರು, ಮಹಿಳೆಯರು ಮತ್ತು ಮಾಜಿ ಐಎಎಸ್ ಅಧಿಕಾರಿಗಳು ಇದ್ದಾರೆ ಎಂದು ಚುಗ್ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಮಾಜಿ ಸಹಾಯಕಿ ನಿಮಿಷಾ ಮೆಹ್ತಾ ಅವರನ್ನು ಗಢಶಂಕರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಮೆಹ್ತಾ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಮೆಹ್ತಾ ಹೊರತುಪಡಿಸಿ, ಮತ್ತೊಬ್ಬ ಮಹಿಳಾ ಅಭ್ಯರ್ಥಿ ರೇಣು ಕಶ್ಯುಪ್ ದಿನಾನಗರದಿಂದ ಕಣಕ್ಕಿಳಿದಿದ್ದಾರೆ. ಕಬಡ್ಡಿ ಆಟಗಾರ ರಂಜಿತ್ ಸಿಂಗ್ ಖೋಜೆವಾಲಾ ಅವರನ್ನು ಕಪುರ್ತಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಗಿಲ್ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಆರ್ ಲದ್ಧರ್ ಅವರನ್ನು ಕಣಕ್ಕಿಳಿಸಲಾಗಿದೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಂಜಾಬ್ ಲೋಕ ಕಾಂಗ್ರೆಸ್‌ನ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದಾರೆ. "ನಾವು ಮೊದಲ ಪಟ್ಟಿಯಲ್ಲಿ 22 ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೇವೆ," ಎಂದು ಅಮರಿಂದರ್ ಸಿಂಗ್‌ ಹೇಳಿದ್ದಾರೆ.
5 ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ

"ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. 22 ಅಭ್ಯರ್ಥಿಗಳನ್ನು ನಾವು ಈಗ ಬಿಡುಗಡೆ ಮಾಡಿದ್ದೇವೆ. ಮಜಾದಿಂದ 2 ಅಭ್ಯರ್ಥಿಗಳು, ದೋಬಾದಿಂದ 3 ಮತ್ತು ಮಾಲ್ವಾ ಪ್ರದೇಶದಿಂದ 17 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಎಸ್‌ಎಡಿ (ಸಂಯುಕ್ತ) ಜೊತೆಗಿನ ಮೈತ್ರಿಯ ಭಾಗವಾಗಿ ಪಂಜಾಬ್ ಲೋಕ ಕಾಂಗ್ರೆಸ್ ಪ್ರಸ್ತುತ ರಾಜ್ಯದಲ್ಲಿನ 117 ಸ್ಥಾನಗಳಲ್ಲಿ 37 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಪಕ್ಷಕ್ಕೆ ಇನ್ನೂ ಐದು ಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಪಂಜಾಬ್ ಲೋಕ ಕಾಂಗ್ರೆಸ್‌ನ 37 ಸ್ಥಾನಗಳಲ್ಲಿ ಗರಿಷ್ಠ 26 ಸ್ಥಾನಗಳು ಮಾಲ್ವಾ ಪ್ರದೇಶದಲ್ಲಿ ಬರುತ್ತದೆ. ಕ್ಯಾಪ್ಟನ್‌ ಅಮರಿಂದರ್ ಏಕಾಂಗಿಯಾಗಿ 2007ರಲ್ಲಿ ಕಾಂಗ್ರೆಸ್‌ಗೆ ಗೇಮ್‌ ಚೇಂಜರ್‌ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+