ಹರ್ಯಾಣ ರಾಜ್ಯಪಾಲ ಸತ್ಯದೇವ್ ನರೈನ್‌ಗೆ ಕೊರೊನಾ ಸೋಂಕು
ಚಂಡೀಘಡ, ನವೆಂಬರ್ 17: ಹರ್ಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ಕೊರೊನಾ ಸೋಂಕು ತಗುಲಿದೆ.
ಅವರನ್ನು ಪಂಜಾಬ್ ನ ಮೊಹಾಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಸತ್ಯದೇವ ನಾರಾಯಣ್ ಆರ್ಯ ಅವರನ್ನು ಮುಂಜಾಗ್ರತಾ ಕ್ರಮವಾಗಿ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ವಯಸ್ಸಿನ ಸತ್ಯದೇವ ನರೈನ್ ಆರ್ಯ ಅವರಿಗೆ 81 ವರ್ಷ ವಯಸ್ಸಾಗಿದೆ.ಇನ್ನು ರಾಜ್ಯಪಾಲ ಸತ್ಯದೇವ ನಾರಾಯಣ್ ಆರ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಈ ಬಗ್ಗೆ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದು, ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಖಟ್ಟರ್, ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಸೇರಿದಂತೆ ಅವರ ಸಂಪುಟದ ಹಲವು ಮಂತ್ರಿಗಳು ಸಹೋದ್ಯೋಗಿಗಳು, ಹರಿಯಾಣ ವಿಧಾನಸಭೆ ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರು ಸೋಂಕಿಗೆ ತುತ್ತಾಗಿದ್ದರು ಮತ್ತು ಬಳಿಕ ಅದರಿಂದ ಚೇತರಿಸಿಕೊಂಡಿದ್ದರು












Click it and Unblock the Notifications