ಸುಳ್ವಾಡಿ ಮಾರಮ್ಮ ದುರಂತ ಪ್ರಕರಣ : ಆರೋಪಿಗಳಿಗೆ ವಕೀಲರು ಸಿಕ್ಕರು
ಚಾಮರಾಜನಗರ, ಜನವರಿ 24 : ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣದ ಆರೋಪಿಗಳಿಗೆ ಕೊನೆಗೂ ವಕೀಲರು ಸಿಕ್ಕಿದ್ದಾರೆ. ಜನವರಿ 29ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ಸುದೇಶ್, ಲೋಹಿತ್ ಅವರು ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರವಾಗಿ ವಕಾಲತ್ತು ವಹಿಸಲಿದ್ದಾರೆ. ಈಗಾಗಲೇ ಆರೋಪಿ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ವಕೀಲರು ಆರೋಪಿಗಳ ಪರವಾಗಿ ವಾದ ಮಂಡನೆ ಮಾಡದಿರಲು ತೀರ್ಮಾನ ಕೈಗೊಂಡಿದ್ದರು. ಆದರೆ, ಈಗ ಮಡಿಕೇರಿ ಮೂಲದ ವಕೀಲರು ಚಾಮರಾಜನಗರ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಹಾಕಿದ್ದಾರೆ.
ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಆದ್ದರಿಂದ, ಅರ್ಜಿಯ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿ ನ್ಯಾಯಾಧೀಶ ಬಸವರಾಜು ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪರವಾಗಿ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯವನ್ನು ಬೆಂಬಲಿಸುವಂತೆ ಚಾಮರಾಜನಗರ ವಕೀಲರ ಸಂಘ ಮಡಿಕೇರಿ ವಕೀಲರಿಗೆ ಮನವಿ ಮಾಡಲಿದೆ.












Click it and Unblock the Notifications