ಆಪ್ತ ಸಹಾಯಕನಿಂದ ಶೂ ಹಾಕಿಸಿಕೊಂಡ ಸಿದ್ದರಾಮಯ್ಯ
ಚಾಮರಾಜನಗರ, ಫೆಬ್ರವರಿ 07: ಸಮಾಜವಾದ ಸಿದ್ಧಾಂತ ರೂಢಿಸಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೇಗುಲವೊಂದರ ಉದ್ಘಾಟನೆಗೆ ಆಗಮಿಸಿದ ವೇಳೆ ತನ್ನ ಆಪ್ತ ಸಹಾಯಕನಿಂದ ಶೂ ಹಾಕಿಸಿಕೊಂಡಿರುವ ಘಟನೆ ನಡೆದಿದ್ದು, ಈ ದೃಶ್ಯಗಳು ಇದೀಗ ವೈರಲ್ ಆಗಿದೆ.
ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿ ಮಲ್ಲಿಗಮ್ಮ ದೇಗುಲದ ರಾಜಗೋಪುರ ಉದ್ಘಾಟನೆ ಹಾಗೂ ರಾಜಗೋಪುರ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು. ದೇಗುಲಕ್ಕೆ ತೆರಳುವಾಗ ಸಿದ್ದರಾಮಯ್ಯರ ಕಾಲಿನಿಂದ ಶೂ ಬಿಚ್ಚಿದ ಆಪ್ತ ಸಹಾಯಕ, ಕಾರ್ಯಕ್ರಮ ಉದ್ಘಾಟಿಸಿ ಹೊರಬಂದ ಬಳಿಕ ಕಾಲಿಗೆ ಶೂ ತೊಡಿಸಿದ್ದಾರೆ. ಕಾಲಿಗೆ ಶೂ ಹಾಕಿದ ಸಿದ್ದರಾಮಯ್ಯ ನಡತೆ ಟೀಕೆಗೆ ಕಾರಣವಾಗಿದೆ.
ಈ ಹಿಂದೆ ದುಬಾರಿ ವಾಚನ್ನು ಉಡುಗೊರೆಯಾಗಿ ಪಡೆದಿದ್ದು. ಅಲ್ಲದೆ ದುಬಾರಿ ಬೆಲೆಯ ಶೂ ಮತ್ತು ಕನ್ನಡಕವನ್ನು ಬಳಸುವ ಬಗ್ಗೆಯೂ ಅವರ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೆ ಇದೀಗ ತನ್ನ ಆಪ್ತ ಸಹಾಯಕನಿಂದಲೇ ಶೂ ಹಾಕಿಸಿಕೊಂಡಿರುವುದು ರಾಜಕೀಯ ವಿರೋಧಿಗಳಿಗೆ ಟೀಕೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.

ಸಿದ್ದರಾಮಯ್ಯರವರೊಂದಿಗೆ ಹಲವಾರು ರಾಜಕೀಯ ಮುಖಂಡರು ಜತೆಗಿದ್ದರೂ ಅವರು ಯಾರು ಕೂಡ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಮಾಜಿ ಸಂಸದರಾದ ಧ್ರುವನಾರಾಯಣ್, ಶಿವಣ್ಣ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್ ಕೃಷ್ಣಮೂರ್ತಿ ಈ ವೇಳೆ ಇದ್ದರು ಎನ್ನಲಾಗಿದೆ.












Click it and Unblock the Notifications