ಬಂಡೀಪುರದಲ್ಲಿ ಜಿಪ್ಸಿ ಸಫಾರಿಗೆ ಮುಂಗಡ ಬುಕಿಂಗ್ ಅನಿವಾರ್ಯ!

ಚಾಮರಾಜನಗರ, ಜೂನ್ 03 : ಬಂಡೀಪುರ ಅರಣ್ಯದಲ್ಲಿ ಸಫಾರಿಗೆ ಇದುವರೆಗೆ ಜಿಪ್ಸಿಯಲ್ಲಿ ತೆರಳಿ ಖುಷಿ ಪಟ್ಟವರು ಇನ್ನು ಮುಂದೆ ಅದೇ ವಾಹನದಲ್ಲಿ ತೆರಳಬೇಕಾದರೆ ಮುಂಗಡ ಆನ್‍ಲೈನ್ ಬುಕಿಂಗ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಈ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರು ಜಿಪ್ಸಿ ವಾಹನದಲ್ಲಿ ಸಫಾರಿ ತೆರಳುತ್ತಿದ್ದರು. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಈಗಾಗಲೇ ಸಫಾರಿಗೆ ಜಿಪ್ಸಿ ಜೊತೆಗೆ ವ್ಯಾನ್‍ಗಳಲ್ಲಿ ಅವಕಾಶ ನೀಡಲಾಗುತ್ತಿತ್ತು.

ಜತೆಗೆ ವ್ಯಾನ್‍ಗಳ ಬದಲು ಪ್ರತ್ಯೇಕವಾಗಿ ಕುಟುಂಬ ಸಮೇತ ಜಿಪ್ಸಿ ವಾಹನದಲ್ಲಿ ಸಫಾರಿಗೆ ತೆರಳಲು ಇಚ್ಚಿಸುವ ಪ್ರವಾಸಿಗರು ಟಿಕೆಟ್ ಕೌಂಟರಿನಲ್ಲಿ ಹಣ ಕಟ್ಟಿದರೆ ಜಿಪ್ಸಿ ವಾಹನದಲ್ಲಿ ತೆರಳಲು ಸಾಧ್ಯವಾಗುತ್ತಿತ್ತು.

Bandipur

'ಇದೀಗ ಹೆದ್ದಾರಿಗಳಲ್ಲಿ ಗಸ್ತು ನಡೆಸಲು ವಾಹನಗಳ ಕೊರತೆಯಿರುವುದರಿಂದ ಸಫಾರಿಗೆ ಬಳಸುತ್ತಿದ್ದ ಜಿಪ್ಸಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಆನ್‍ಲೈನ್‍ನಲ್ಲಿ ಮುಂಗಡ ಬುಕಿಂಗ್ ಮಾಡದ ಹೊರತು ಜಿಪ್ಸಿ ಸಫಾರಿಗೆ ವಾಹನಗಳನ್ನು ನೀಡಲಾಗುವುದಿಲ್ಲ' ಎಂದು ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದ್ದಾರೆ.

ಒಟ್ಟಾರೆ ಜಿಪ್ಸಿನಲ್ಲಿ ಓಡಾಡುವ ಪ್ರವಾಸಿಗರು ಇನ್ನು ಮುಂದೆ ಮೊದಲೇ ಬುಕ್ ಮಾಡಲೇ ಬೇಕಾಗಿರುವುದು ಅನಿವಾರ್ಯ. ಕುಟುಂಬದವರ ಜೊತೆ ಬಂಡೀಪುರಕ್ಕೆ ಹೋಗುವಾಗ ಇದನ್ನು ಮರೆಯದಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+