ಗುಂಡ್ಲುಪೇಟೆ: ಅಜ್ಜಿ ಕೈಗೆ ಮಗು ಇಟ್ಟು ಶೌಚಾಲಯಕ್ಕೆ ಹೋದ ಮಹಿಳೆ ವಾಪಸ್ ಬರಲೇ ಇಲ್ಲ-ಮುಂದಾಗಿದ್ದೇನು?
ಚಾಮರಾಜನಗರ, ಡಿಸೆಂಬರ್, 21: ಶೌಚಾಲಯಕ್ಕೆ ಹೋಗಿ ಬರುತ್ತೇನೆ, ಮಗು ನೋಡಿಕೊಳ್ಳಿ ಎಂದು ವೃದ್ಧೆಗೆ ಮಗು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಬುಧವಾರ (ಡಿಸೆಂಬರ್ 20) ಬಸ್‌ಗಾಗಿ ಕಾಯುತ್ತಿದ್ದ ಕಲಿಗೌಡನಹಳ್ಳಿ ಗ್ರಾಮದ ಮಹಾದೇವಮ್ಮ ಎಂಬ ವೃದ್ಧೆ ಬಳಿ ಬಂದ ಮಹಿಳೆ ಒಬ್ಬಾಕೆ ತಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಮಗು ನೋಡಿಕೊಳ್ಳುತ್ತಿರಿ ಎಂದು ಹೇಳಿ ಬಳಿಕ ವಾಪಾಸ್ ಬರದೇ ಪರಾರಿಯಾಗಿದ್ದಾಳೆ.

ಅದು ಹೆಣ್ಣು ಮಗುವಾಗಿದ್ದು, ಅಂದಾಜು 10 ತಿಂಗಳಿನಿಂದ-ಒಂದೂವರೆ ವರ್ಷದ್ದಾಗಿದೆ. ಗುಂಡ್ಲುಪೇಟೆ ಠಾಣೆ ಪೊಲೀಸರು ಮಗುವನ್ನು ಸಿಡಬ್ಲೂಸಿ ಸುಪರ್ದಿಗೆ ಕೊಟ್ಟಿದ್ದು, ಪರಾರಿಯಾದ ಮಹಿಳೆ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಮಕ್ಕಳನ್ನು ಟವೆಲ್‌ನಂತೆ ಬಸ್ ಕಿಟಕಿಯಲ್ಲಿ ತುರುಕಿದ ಪೋಷಕರು
ಇನ್ನು ನವರಾತ್ರಿ ಹಬ್ಬ ಹಿನ್ನೆಲೆ ದೇವಾಲಯಗಳು ತುಂಬಿ ತುಳುಕುತ್ತಿದ್ದವು. ಈ ವೇಳೆ ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಲಾಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದರು. ಭಕ್ತರು ಹೆಚ್ಚಿದ ಹಿನ್ನೆಲೆ ಸಾರಿಗೆ (KSRTC) ಬಸ್‌ಗಳು ತುಂಬಿ ತುಳುಕುತ್ತಿದ್ದವು. ಇನ್ನು ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್‌ನಂತೆ ಪೋಷಕರು ಹತ್ತಿಸುತ್ತಿದ ಘಟನೆಗಳು ನಡೆದವು.
ಒಂದೇ ಸಾರಿಗೆ ಬಸ್‌ಗೆ 300ಕ್ಕೂ ಹೆಚ್ಚು ಜನ ಮುಗಿಬಿದ್ದಿದ್ದರು. ಶಕ್ತಿ ಯೋಜನೆಯ ಫ್ರೀ ಬಸ್ ಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತಾದಿಗಳು ಶೃಂಗೇರಿಗೆ ಆಗಮಿಸಿದ್ದರು. ಶಕ್ತಿ ಯೋಜನೆಯ ಎಫೆಕ್ಟ್‌ನಿಂದ ಪ್ರವಾಸಿ ಕೇಂದ್ರ ಫುಲ್ ರಶ್ ಆಗಿದ್ದವು.
ಇನ್ನು ಜನರನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೈರಾಣಾಗಿದ್ದಾರೆ. ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳಾ ಮಣಿಗಳು ಮುಗಿಬಿದ್ದಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಸಹ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.












Click it and Unblock the Notifications