ಮೋದಿಯಲ್ಲಿ ತಾಯಿ ಹೃದಯ ನಾವಂತೂ ಕಂಡಿಲ್ಲ, ಶೋಭಕ್ಕ ಎಲ್ಲಿ ಕಂಡ್ರೋ ಗೊತ್ತಿಲ್ಲ: ನಲಪಾಡ್ ವ್ಯಂಗ್ಯ
ಚಾಮರಾಜನಗರ,ಜುಲೈ 20 : " ಪ್ರಧಾನಿ ಮೋದಿಯವರಲ್ಲಿ ನಮಗಂತೂ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಮೋದಿಯಲ್ಲಿ ತಾಯಿ ಹೃದಯ ಎಲ್ಲಿ ಕಂಡಿದ್ದಾರೋ ನನಗೆ ಗೊತ್ತಿಲ್ಲ" ಎಂದು ಪ್ರಧಾನಿ ಮೋದಿ ತಾಯಿ ಹೃದಯ ಉಳ್ಳವರು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಯುವಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, " ತಾಯಿ ಹೃದಯ ಯಾರಿಗಿದೆ, ಮೋದಿಗಾ? ನಮಗಂತೂ ಎಲ್ಲೂ ಕಂಡಿಲ್ಲ, ಮಗು ಕುಡಿಯುವ ಹಾಲಿನ ಮೇಲೂ 5 % ಜಿಎಸ್‌ಟಿ ಹಾಕಿದ್ದಾರೆ. ಮೊಸರು, ಅಕ್ಕಿ ಸೇರಿದಂತೆ ಎಲ್ಲದರ ಮೇಲೂ ಟ್ಯಾಕ್ಸ್ ಹೇರಿದ್ದಾರೆ. ಡಿಜಿಟಲ್ ಇಂಡಿಯಾ ಅಂತಾ ಬಡಕೊಳ್ತಾರೆ, ಆದರೆ ಚೆಕ್‌ಬುಕ್ ಲೀಫ್ಸ್ ಮೇಲೆ 18% ಜಿಎಸ್‌ಟಿ ಹಾಕಿದ್ದಾರೆ. ಇಂದು ಬಿಜೆಪಿ ಸಾಮಾನ್ಯ ಜನರ ಸರಕಾರವಲ್ಲ, ಬರೀ ಪಕ್ಷಕ್ಕೆ, ಎರಡು ಮೂರು ಕಂಪನಿಗಳಿಗೆ ಸೇರಿದ ಸರಕಾರ ಇದಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಸರಕಾರಗಳು ಯುವಕರ ಪರವಾಗಿಲ್ಲ, ಯುವಕರಿಗೆ ಇಂದು ಕೆಲಸ ಸಿಗುತ್ತಿಲ್ಲ, ಯುವಕರಿಗೆ ಕೆಲಸ ಕೊಡಿಸುವುದೇಗೆ, ಅವರನ್ನು ಹೇಗೆ ಮುಂದಕ್ಕೆ ತರುವುದು ಎಂಬುದರ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದ್ದರೆ, ಬಿಜೆಪಿಯವರ ಯೋಚನೆ ಹೇಗೆ ಜನರ ಬಳಿ ಪಿಕ್ ಪಾಕೆಟ್ ಮಾಡೋದು, ದುಡ್ಡು ಮಾಡೋದು ಹೇಗೆ ಎಂಬುದಾಗಿದೆ ಎಂದು ಬಿಜೆಪಿ ಪಕ್ಷವನ್ನು ಅಪಹಾಸ್ಯ ಮಾಡಿದರು.

ಇಂದು ಮಕ್ಕಳಿಗೆ ಓದಿಸುವುದಕ್ಕಾಗಿ ಆಗುತ್ತಿಲ್ಲ, ತಂದೆತಾಯಿಗಳು ಕಷ್ಟಪಟ್ಟು ಓದಿಸಿದ ಮಕ್ಕಳಿಗೆ ಕೆಲಸ ಸಿಗುತ್ತಿಲ್ಲ.ಅವರನ್ನ ಮನೆಯಲ್ಲಿ ಇರಿಸಿಕೊಳ್ಳಲಾಗದೆ, ಹೊರಗೂ ಕಳಿಸಲಾಗದೆ, ಸಾಮಾನ್ಯ ಜನರು ಸಂಕಟಪಡುತ್ತಿದ್ದಾರೆ. ಅಡಿಗೆ ಎಣ್ಣೆ ಬೆಲೆ 200 ದಾಟಿದೆ, ಗ್ಯಾಸ್ ಬೆಲೆ 1000 ದಾಟಿದೆ. ಹೀಗೆ ಯುವಕರಿಗೆ , ಸಾಮಾನ್ಯ ಜನರಿಗೆ ಹಾಗೂ ತಾಯಿಂದರಿಗೆ ಇದರ ವಿರುದ್ಧ ನಾವು ಹೋರಾಟ ಮಾಡಲು ಯೋಜನೆ ರೂಪಿಸಿದ್ದೇವೆ, ಇಂತಹ ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಬಣವಿಲ್ಲ
ಕಾಂಗ್ರೆಸ್‌ನಲ್ಲಿ ಬಣಗಳಿವೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ , ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಮೊದಲು ಅವರ ಪಕ್ಷವನ್ನು ಮಾತಾಡೋಕೆ ಹೇಳಿ. ನಮ್ಮ ಪಕ್ಷ ಎಲ್ಲಾ ಚೆನ್ನಾಗಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ, ಜೊತೆ ಜೊತೆಯಾಗಿ ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಹೋಗಲಿದ್ದೇವೆ ಎಂದರು.
ಒಕ್ಕಲಿಗರು 100% ಕಾಂಗ್ರೆಸ್ ಪರ ಇದೆ
ಒಕ್ಕಲಿಗರು ಕಾಂಗ್ರೆಸ್ ಪರ ಇದ್ದಾರೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂರಕ್ಕೆ ನೂರು ಇದೆ, ಒಕ್ಕಲಿಗ ಸಮುದಾಯ ಮಾತ್ರವಲ್ಲ, ರಾಜ್ಯದ ಎಲ್ಲಾ ಸಮುದಾಯಗಳ ಬೆಂಬಲ ಕಾಂಗ್ರೆಸ್ ಇದೆ. ಏಕೆಂದರೆ ಕಾಂಗ್ರೆಸ್ ಮಾತ್ರ ಜನರ ಪರವಾಗಿದೆ. ಬಿಜೆಪಿ ಪಕ್ಷ ಜನರ ಪರವಾಗಿಲ್ಲ, ಅದು ಅದಾನಿ-ಅಂಬಾನಿ ಪರವಿದೆ. ಅವರು ಜನರ ಪರ ಇದ್ದಿದ್ದರೆ, 8 ವರ್ಷಗಳಲ್ಲಿ ಒಂದೇ ಒಂದು ಜನಪರವಾದ ಯೋಜನೆ ಮಾಡಿದ್ದಾರಾ ಹೇಳಿ? ಜನರ ಜೇಬಿಗೆ ಕತ್ತರಿ ಹಾಕುತ್ತಿದೆ, ನಮ್ಮ ಆಸ್ತಿಗಳನ್ನು ಮಾರುವುದನ್ನ ಬಿಟ್ಟರೆ ಏನು ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications