ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಕ್ತನಿಗೆ ಲಡ್ಡು ಜೊತೆ ಲಕ್ಷಗಟ್ಟಲೆ ಹಣ, ಇದು ಮಾದೇಶ್ವರನ ಪ್ರಸಾದವಾ, ಸಿಕ್ಕಿದ್ದು ಸೀರುಂಡೆಯಾ?

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ, 29: ಭೀಮನ ಅಮಾವಾಸ್ಯೆ ಹಿನ್ನೆಲೆ ಗುರುವಾರ ಮಲೆಮಹಾದೇಶ್ವರ ಬೆಟ್ಟದಲ್ಲಿ ಭಕ್ತಸಾಗರವೇ ನೆರೆದಿತ್ತು. ಈ ಸಂದರ್ಭದಲ್ಲಿ ಪ್ರಸಾದದ ಜೊತೆಗೆ 2.91 ಲಕ್ಷ ಹಣವನ್ನು ಕೂಡ ಭಕ್ತನೋರ್ವನಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಕೆಲಸದ ಒತ್ತಡದಲ್ಲಿ ಈ ಎಡವಟ್ಟು ಆಗಿದೆ ಎಂದು ಅಲ್ಲಿನ ಕೆಲವರ ವಾದವಾಗಿದೆ.

ಕೆಲಸದಲ್ಲಿನ ಒತ್ತಡ ಯಾವ ರೀತಿ ಪರಿಸ್ಥಿತಿ ತರುತ್ತದೇ ಎಂಬುದಕ್ಕೆ ಇದೊಂದು ಉದಾಹರಣೆ. ಪ್ರಸಾದದ ಜೊತೆ ಹಣವನ್ನೂ ಭಕ್ತನಿಗೆ ಕೊಟ್ಟಿರುವ ಘಟನೆ ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ತೀರ್ಥ ಕುಡಿಯುವಾಗ ಕೃಷ್ಣನ ಮೂರ್ತಿಯನ್ನೇ ನುಂಗಿದ ಭಕ್ತ!ತೀರ್ಥ ಕುಡಿಯುವಾಗ ಕೃಷ್ಣನ ಮೂರ್ತಿಯನ್ನೇ ನುಂಗಿದ ಭಕ್ತ!

ಗುರುವಾರ ಭೀಮನ ಅಮಾವಾಸ್ಯೆ ಇದ್ದುದ್ದರಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರವೇ ಹರಿದುಬಂದಿತ್ತು. ಈ ವೇಳೆ ಭಕ್ತನೋರ್ವ ಸ್ವೀಕರಿಸಲು ಬಂದಾಗ ಅಲ್ಲಿನ ಸಿಬ್ಬಂದಿ ಪ್ರಸಾದದ ಜೊತೆ 2.91 ಲಕ್ಷ ರೂಪಾಯಿಯನ್ನು ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜಗೋಪುರ ಬಳಿ ವಿಶೇಷ ದರ್ಶನ ಪಡೆಯುವ ಕೌಂಟರ್‌ನಲ್ಲಿ ಹಣ ಹೋಗಿರುವ ಘಟನೆ ನಡೆದಿದೆ.

Male Mahadeshwara Devotee Gets Rs 2.9 Lakh Along-with Laddu, Its By Mistake

ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ಲಿನ ಸಿಬ್ಬಂದಿಯೊಬ್ಬರು ಭಕ್ತರಿಗೆ ವಿಶೇಷ ದರ ಟಿಕೇಟ್ ನೀಡಿ ಲಾಡು ಪ್ರಸಾದ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನು ಸಹ ಇಟ್ಟಿದ್ದ ಹಿನ್ನಲೆ ಹಣ ಸಹಿತ ಬ್ಯಾಗ್ ಅನ್ನು ಭಕ್ತನೊರ್ವನಿಗೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದಾದ ಬಹಳ ಹೊತ್ತಿನ ನಂತರ ಹಣ ಕಾಣಿಸದಿರುವುದು ಗೊತ್ತಾದ ಮೇಲೆ ಹುಡುಕಾಟ ಶುರು ಮಾಡಿದ್ದಾರೆ. ಸಿಸಿಟಿವಿ ಪರಿಶೀಲಿಸಿದ ವೇಳೆ ಸಿಬ್ಬಂದಿಯ
ಕಣ್ಣಪ್ಪಿನಿಂದ ಲಾಡು ಜೊತೆ ದುಡ್ಡು ಹೋಗಿರುವುದು ಬೆಳಕಿಗೆ ಬಂದಿದೆ.

Male Mahadeshwara Devotee Gets Rs 2.9 Lakh Along-with Laddu, Its By Mistake

ಪ್ರಾಧಿಕಾರದ ಬೊಕ್ಕಸಕ್ಕೆ 2.91 ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂಧಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಾಸ್ಥಾನದಲ್ಲಿ ಹಣದ ಹುಂಡಿಯಲ್ಲಿ ಕಳ್ಳತನ ಆಗುವುದನ್ನು ಕೇಳಿದ್ದೇವೆ. ಆದರೆ ಚಾಮರಾಜನರದ ಮಲೆಮಹಾದೇಶ್ವರ ಬೆಟ್ಟದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಣದ ಬ್ಯಾಗ್‌ ಅನ್ನು ಪ್ರಸಾದದ ಪಕ್ಕದಲ್ಲಿ ಇಟ್ಟಿದ್ದೆವು ಅದನ್ನು ಯಾರೋ ಭಕ್ತರು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದು ಹೋದ ಹಣವನ್ನೆಲ್ಲ ಕಟ್ಟುವಂತೆ ಕರ್ತವ್ಯ ನಿರ್ಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಹೊರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ.

Recommended Video

ಹತ್ಯೆಯಾದ ಪ್ರವೀಣ್ ನೆಟ್ಟಾರ್ ಮನೆಗೆ ತೆರಳಿ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತುಕತೆ | *Politics | OneIndia

English summary
Devotees thronged the Malemahadeshwar Hill on Thursday due to Bhima's Amavasya. On this occasion, it has come to light that 2.91 lakh money was also given to Bhaktanorva along with Prasad. It is argued by some that this stumbling is due to work pressure. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X