ಚಾಮರಾಜನಗರ; ಪಾರ್ವತಿಬೆಟ್ಟದಲ್ಲಿ ನಡೆದಿದ್ದು ಪೂಜೆನಾ, ಮದುವೆನಾ?

ಚಾಮರಾಜನಗರ, ಜೂನ್ 06; ಕೊರೊನಾ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ದೇವಾಲಯದ ಬಾಗಿಲು ತೆರೆದು ಪೂಜಾ ಕಾರ್ಯದ ಜೊತೆಗೆ ರಾಜಕೀಯ ಮುಖಂಡರೊಬ್ಬರ ಕುಟುಂಬಕ್ಕೆ ಸೇರಿದವರೊಬ್ಬರ ಮದುವೆಯನ್ನು ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಅದರ ತಡೆಗೆ ಲಾಕ್‌ಡೌನ್ ಮಾಡುವುದರೊಂದಿಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಪ್ರಭಾವಿಗಳು ಇದನ್ನೆಲ್ಲ ಗಾಳಿಗೆ ತೂರಿ ತಮಗೆ ತೋಚಿದಂತೆ ವರ್ತಿಸುತ್ತಿದ್ದು, ನಿಯಮಗಳೆಲ್ಲ ಬಡವನಿಗೆ ಮಾತ್ರನಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.

ಚಾಮರಾಜನಗರದಲ್ಲಿ ಕೊರೊನಾ ತೀವ್ರತೆ ತುಸು ಜಾಸ್ತಿಯಿದ್ದು, ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲ ದೇವಾಲಯಗಳಿಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಿರುವಾಗ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾರ್ವತಿ ಬೆಟ್ಟದಲ್ಲಿ ದೇವಾಲಯದ ಬಾಗಿಲು ತೆರೆದು ಪೂಜಾ ಕಾರ್ಯ ನಡೆಸಿರುವುದರ ಹಿಂದೆ ರಾಜಕೀಯ ಮುಖಂಡರೊಬ್ಬರ ಪ್ರಭಾವ ಇದೆ ಎಂದು ಹೇಳಲಾಗುತ್ತಿದೆ.

 Lockdown Rules Violation Temple Open For Marriage At Parvathi Betta

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ದೇವಾಲಯವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿ ಈ ರೀತಿ ಮದುವೆ ಮಾಡಿರುವುದು ಖಂಡನೀಯ. ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿ ಇದ್ದು ಅಧಿಕಾರ ದುರ್ಬಳಕೆ ಮಾಡಿ ಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಇತಿಹಾಸಪ್ರಸಿದ್ಧ ಪಾರ್ವತಿ ಬೆಟ್ಟದಲ್ಲಿ ನಡೆಯಬೇಕಾದ ಜಾತ್ರೆಯನ್ನು ಕೋವಿಡ್ ಕಾರಣದಿಂದಾಗಿ ನಿಲ್ಲಿಸಲಾಗಿತ್ತು. ಆದರೆ ಇಲ್ಲಿ ಕೋವಿಡ್ ಸಮಯದಲ್ಲೂ ಸಹ ರಾಜಕೀಯ ಪ್ರಭಾವ ಬಳಸಿ ಪೂಜಾ ಕಾರ್ಯದ ಜತೆಗೆ ಮದುವೆಯನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.

 Lockdown Rules Violation Temple Open For Marriage At Parvathi Betta

ಮೂಲಗಳ ಪ್ರಕಾರ ಅರ್ಚಕರು ತಹಸೀಲ್ದಾರ್ ಅನುಮತಿ ಪಡೆದಿರುವುದಾಗಿ ಹೇಳಿ ಕರೆದೊಯ್ದು ವಿವಾಹ ಮಾಡಿಸಿದ್ದಾರೆ ಎನ್ನಲಾಗಿದ್ದು, ತಹಸೀಲ್ದಾರ್‌ಗೆ ಮದುವೆಯನ್ನು ಮನೆಯಲ್ಲಿ ಮಾಡಿಕೊಳ್ಳುತ್ತೇವೆ ಹಾಗೂ ಹೆಚ್ಚಿನ ಜನರನ್ನು ಸಹ ಸೇರಿಸುವುದಿಲ್ಲ ಎಂದು ಹೇಳಿ ಅನುಮತಿ ಪಡೆದಿದ್ದರು ಎನ್ನಲಾಗಿದೆ.

ಒಟ್ಟಾರೆ ಪ್ರಭಾವಿಗಳು ಏನೂಬೇಕಾದರೂ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+