ಇಂತಹ ಗೊಡ್ಡು ಬೆದರಿಕೆಗೆ ಹೆದರಲ್ಲ: ಗೀತಾ ಮಹದೇವ್ ಪ್ರಸಾದ್
ಚಾಮರಾಜನಗರ, ಜುಲೈ 4 : ಏಳಿಗೆಯನ್ನು ಸಹಿಸಿಕೊಳ್ಳಲಾಗದವರ ಕುತಂತ್ರಕ್ಕೆ ನಾನು ಬಲಿಯಾಗಲಾರೆ. ನನ್ನ ಅಭಿವೃದ್ಧಿ ಕಾರ್ಯವನ್ನು ಸಹಿಸದವರು ಸುಳ್ಳು ದೂರನ್ನು ದಾಖಲಿಸಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ತನಿಖೆಯಿಂದ ಸತ್ಯ ಗೊತ್ತಾಗಲಿದೆ ಎಂದು ಗುಂಡ್ಲಪೇಟೆ ಶಾಸಕಿ ಗೀತಾ ಮಹದೇವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಗುಂಡ್ಲುಪೇಟೆ ಶಾಸಕಿಯಾದ ಗೀತಾ ಮಹದೇವ್ ಪ್ರಸಾದ್ ಸೋಲಾರ್ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ಮೂರ್ತಿ ಎಂಬುವವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನ ಸಂಬಂಧ ಸ್ಪಷ್ಟೀಕರಣವನ್ನು ದೂರವಾಣಿ ಮೂಲಕ ನೀಡಿದ ಶಾಸಕಿ ಗೀತಾ ಮಹದೇವಪ್ರಸಾದ್, ಇದೊಂದು ರಾಜಕೀಯ ಪ್ರೇರಿತ ದೂರಾಗಿದೆ.













Click it and Unblock the Notifications