ಗುಂಡ್ಲುಪೇಟೆ: ಸಚಿವ ಯು.ಟಿ.ಖಾದರ್ ವಿರುದ್ಧ ಎಫ್‍ಐಆರ್

ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್ ವಿರುದ್ಧ ಗುಂಡ್ಲುಪೇಟೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಗುಂಡ್ಲುಪೇಟೆ, ಮಾರ್ಚ್ 30: ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ. ಖಾದರ್ ವಿರುದ್ಧ ಗುಂಡ್ಲುಪೇಟೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಇದನ್ನು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಖಚಿತಪಡಿಸಿದ್ದಾರೆ..

Gundlupet: FIR filled against minister U T Khader

ಸಚಿವ ಯು.ಟಿ. ಖಾದರ್ ಅವರು ಮಾ. 27 ರಂದು ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮತಯಾಚನೆ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಹಣದ ಆಮಿಷವೊಡ್ಡಿದ್ದಾರೆ. ಹಾಗೂ ಅವರ ಕಾರು ಚಾಲಕ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಗುಂಡ್ಲುಪೇಟೆ ಟೌನ್ ನಿವಾಸಿ ಎಲ್. ಸುರೇಶ್ ದೂರು ಅರ್ಜಿ ಸಲ್ಲಿಸಿದ್ದರು.[ಕಾಂಗ್ರೆಸ್ ನಿಂದ ಹಣ ಪಡೀರಿ, ಲಿಂಗಾಯಿತ್ರ ಮನೆಗೆ ಹೋಗ್ಬೇಡಿ: ಈಶ್ವರಪ್ಪ]

ಮತದಾರರಿಗೆ ಹಣದ ಆಮಿಷ ನೀಡಿ ಪ್ರಚೋದಿಸುವುದು ಅಸಂಜ್ಞೆಯ ಅಪರಾಧವಾದ್ದರಿಂದ ಪ್ರಕರಣ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದು ಮಾ.28 ರಂದು ಐಪಿಸಿ ಸೆಕ್ಷನ್ 171 (ಬಿ)(ಸಿ)(ಇ) ಮತ್ತು (ಎಫ್)ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+