ಗುಂಡ್ಲುಪೇಟೆ ಉಪಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ
ಅನುಮತಿಗಿಂತಲೂ ಹೆಚ್ಚಿನ ಕಾರ್ಯಕರ್ತರನ್ನು ಮತಯಾಚನೆಗೆ ಬಳಸಿಕೊಂಡಿದ್ದಲ್ಲದೆ, ಧ್ವನಿವರ್ಧಕವನ್ನು ಬಳಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಚುನಾವಣಾ ಆಯೋಗ ಬಿಜೆಪಿ ವಿರುದ್ಧ ಈ ಕ್ರಮ ಕೈಗೊಂಡಿದೆ.
ಚಾಮರಾಜನಗರ, ಮಾರ್ಚ್ 24: ಏಪ್ರಿಲ್ 9 ಭಾನುವಾರದಂದು ನಡೆಯಲಿರುವ ಗುಂಡ್ಲುಪೇಟೆ ಉಪಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅನುಮತಿಗಿಂತಲೂ ಹೆಚ್ಚಿನ ಕಾರ್ಯಕರ್ತರನ್ನು ಮತಯಾಚನೆಗೆ ಬಳಸಿಕೊಂಡಿದ್ದಲ್ಲದೆ, ಧ್ವನಿವರ್ಧಕವನ್ನು ಬಳಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.[ಕೃಷ್ಣ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ: ಯಡಿಯೂರಪ್ಪ]
ಮಾ.22 ರಂದು ಬಿಜೆಪಿ ಪಕ್ಷದ ಉಮೇದುವಾರರಾದ ಸಿ.ಎಸ್. ನಿರಂಜನಕುಮಾರ್ ಅವರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಮತ್ತು 100 ರಿಂದ 150 ಕಾರ್ಯಕರ್ತರೊಡನೆ ಮತಯಾಚಿಸಲು ಗುಂಡ್ಲುಪೇಟೆ ಜಾಕೀರ್ ಹುಸೇನ್ ಬಡಾವಣೆಯಿಂದ ಮಹದೇವಪ್ರಸಾದ್ ನಗರದವರೆಗೆ ತೆರಳಲು ಚಾಮರಾಜನಗರ ತಾಲೂಕು ಯುವ ಮೋರ್ಚಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮೂರ್ತಿ ಅನುಮತಿ ಪಡೆದಿದ್ದರು.[ನಾಮಪತ್ರ ಸಲ್ಲಿಕೆ ವೇಳೆ ಮಾತಿನ ಚಕಮಕಿ-ಲಘುಲಾಠಿ ಪ್ರಹಾರ]

ಆದರೆ ಅನುಮತಿ ಪಡೆದಿರುವ ಸಂಖ್ಯೆಗಿಂತ ಹೆಚ್ಚು ಅಂದರೆ 600 ರಿಂದ 700 ವರೆಗೆ ಕಾರ್ಯಕರ್ತರು ಭಾಗವಹಿಸಿದ್ದಲ್ಲದೆ, ಕಾಲ್ನಡಿಗೆಯಲ್ಲಿ ತೆರಳಿ ಮತಯಾಚಿಸುವುದಾಗಿ ಅನುಮತಿ ಪಡೆದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಮತಯಾಚಿಸಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದರಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.[ನಂಜನಗೂಡು ಉಪಚುನಾವಣಾ: ಅಕ್ರಮ ಮದ್ಯ ವಶ]
ಮದ್ದೂರು ಚೆಕ್ ಪೋಸ್ಟಿನಲ್ಲಿ ನಡೆಯದ ತಪಾಸಣೆ!
ಉಪಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಯುವ ಸಲುವಾಗಿ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದರೂ ಇಲ್ಲಿ ಸಮರ್ಪಕ ತಪಾಸಣೆ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಹನ್ನೊಂದು ಚೆಕ್ ಪೋಸ್ಟ್ ಗಳ ಪೈಕಿ ಮದ್ದೂರು ಚೆಕ್ ಪೋಸ್ಟಿನಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿಯೇ ತೆರೆಯಲಾದ ತಪಾಸಣಾ ಕೇಂದ್ರದಲ್ಲಿ ವಾಹನಗಳನ್ನು ತಪಾಸಣೆ ಮಾಡದೆ ಬಿಡಲಾಗುತ್ತಿದೆ ಎಂಬುವುದು ಸಾರ್ವಜನಿಕರ ಆರೋಪ.[ಕಪ್ಪ ಕಾಣಿಕೆ ಆರೋಪ ನೂರಕ್ಕೆ ನೂರು ಸತ್ಯ: ಯಡಿಯೂರಪ್ಪ]
ಇಲ್ಲಿ ಚುನಾವಣಾ ಅಕ್ರಮ ತಡೆಯಲು ವಾಹನಗಳನ್ನು ತಪಾಸಣೆ ನಡೆಸುವುದು ಅಗತ್ಯ. ಆದರೆ ಈ ರಸ್ತೆಯಲ್ಲಿ ಹೊರಗಿನಿಂದ ಬರುವ ವಾಹನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಪಾಸಣೆ ನೆಪದಲ್ಲಿ ಕೇರಳಕ್ಕೆ ತೆರಳುವ ತರಕಾರಿ ಟೆಂಪೋ, ಆಟೋ, ಲಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಕೆಲವರ ಆರೋಪವಾಗಿದೆ.
ಚುನಾವಣೆ ದೋಷಮುಕ್ತವಾಗಿ ನಡೆಯಬೇಕಾದರೆ ಚುನಾವಣಾ ಆಯೋಗ ಈ ಬಗ್ಗೆ ಕಠಿಣ ನಿರ್ಧಾರ ತಾಳಬೇಕಿದೆ.
ಸಚಿವ ಮಹಾದೇವ ಪ್ರಸಾದ್ ಅವರ ಅಕಾಲಿಕ ಮರಣದಿಂದಾಗಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮಹಾದೇವ ಪ್ರಸಾದ್ ಅವರ ಪತ್ನಿ ಗೀತಾ ಮಹಾದೇವ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ನಿರಂಜನ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಏಪ್ರಿಲ್ 13 ಗುರುವಾರದಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications