ಚಾಮರಾಜನಗರ: ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ವಿಧಿವಶ

ಚಾಮರಾಜನಗರ, ಅಕ್ಟೋಬರ್‌ 11: ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದ ಚಾಮರಾಜನಗರದ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ಅವರು ವಯೋಸಹಜವಾಗಿ ವಿಧಿವಶರಾಗಿದ್ದಾರೆ.

ಅಕ್ಟೋಬರ್‌ 5 ರಂದು 91ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಲಲಿತ ಟ್ಯಾಗೆಟ್ ಅವರು ವಯೋಸಹಜವಾಗಿ ಕೊನೆಯುಸಿರೆಳೆದಿದ್ದಾರೆ. ಲಲಿತ ಟ್ಯಾಗೆಟ್ ಅವರ ಅಂತ್ಯಕ್ರಿಯೆ ಚಾಮರಾಜನಗರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಜಿಲ್ಲೆಯ ಗಂಗಮತಸ್ಥರ ಬೀದಿಯಲ್ಲಿ ವಾಸವಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿರುವ ಲಲಿತಾ ಟಾಗೆಟ್ ಅವರ ಅಂತಿಮ ದರ್ಶನದಲ್ಲಿ ನೂರಾರು ಮಂದಿ ಭಾಗಿಯಾಗಲಿದ್ದಾರೆ.

ಲಲಿತಾ ಟಾಗೆಟ್ ಅವರು ತಮ್ಮ 14ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದ ಘೋಷಣೆಗಳಿಂದ ಸ್ಪೂರ್ತಿ ಪಡೆದು ಸ್ವಾತಂತ್ಯ ಸಂಗ್ರಾಮ ಚಳವಳಿಗೆ ಧುಮುಕಿದ್ದರು.‌ ಕುಟುಂಬಸ್ಥರ ಮಾತು ಕೇಳದೆ ಎಲ್ಲರ ವಿರೋಧದ ನಡುವೆ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದ ಮೆರವಣಿಗೆಗಳಲ್ಲಿ ಭಾಗವಹಿಸಿದ್ದ ಲಲಿತಾ ಟಾಗೆಟ್‌ ಅವರು, ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿ ಎಲ್ಲರ ಗಮನ ಸೆಳೆದಿದ್ದರು.

Freedom Fighter Lalitha Taget No More

ಕುಟುಂಬಸ್ಥರು ಲಲಿತಾ ಟಾಗೆಟ್ ಅವರ ಹೋರಾಟಕ್ಕೆ ತೀವ್ರವಾಗಿ ವಿರೋಧಿಸುತ್ತಿದ್ದರು. ಲಲಿತಾ ಟಾಗೆಟ್ ಅವರ ತಾಯಿ ಮನೆಯಲ್ಲಿ ಕೂಡಿ ಹಾಕಿದ್ದರೂ ಕೂಡ ಟಾಗೆಟ್ ಅವರು ಮನೆಯ ಮೇಲ್ಛಾವಣಿಯಿಂದ ಹೊರಗೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು ಎನ್ನಲಾಗಿದೆ. ಸ್ವಾತಂತ್ರ್ಯ ಹೋರಾಟದ ಪ್ರತಿಭಟನೆ, ಮೆರವಣಿಗೆಗಳಲ್ಲಿ ಮುಂದಿರುತ್ತಿದ್ದ ಲಲಿತಾ ಟಾಗೆಟ್ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತೆಸೆಯುತ್ತಿದ್ದರು ಎನ್ನುವುದನ್ನು ಹಲವಾರು ಮಂದಿ ನೆನಪಿಸಿಕೊಳ್ಳುತ್ತಾರೆ.

ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಲಲಿತಾ ಟಾಗೆಟ್ ಅವರನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಚಾಮರಾಜನಗರ ಜಿಲ್ಲಾಡಳಿತ ಸೇರಿದಂತೆ ಜನಾರ್ದನ ಪ್ರತಿ‍ಷ್ಠಾನ ಹಾಗೂ ಇತರ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದರು. ಇದು ನಮ್ಮ ದೇಶ, ಇಲ್ಲಿನ ಜನರು ನಮ್ಮವರು, ವೈರತ್ವ ಮರೆತು ಎಲ್ಲರೂ ಒಂದಾಗಿ ಬಾಳಬೇಕು ಎನ್ನುವುದು ಲಲಿತಾ ಟಾಗೆಟ್ ಅವರ ಆಶಯವಾಗಿತ್ತು. ತಮ್ಮ 90ನೇ ವಯಸ್ಸಿನಲ್ಲೂ ಕೂಡ ಯುವ ಜನತೆಯನ್ನು ಮೀರಿಸುವ ಉತ್ಸಾಹ ಹೊಂದಿದ್ದರು. ಸದ್ಯ ಅವರ ಅಗಲಿಕೆಯಿಂದ ಚಾಮರಾಜನಗರದ ಗಂಗಮತಸ್ಥರ ಬೀದಿಯಲ್ಲಿ ಮೌನ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+