ಬಂಡೀಪುರದ ರೆಸಾರ್ಟ್‌ಗಳಲ್ಲಿ ವಿದೇಶಿಗರು; ಭಯ ಬೇಡ ಎಂದ ಡಿಸಿ

ಚಾಮರಾಜನಗರ, ಮಾರ್ಚ್ 17: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿದ್ದ ಸುಮಾರು 13ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಪತ್ತೆ ಹಚ್ಚಿ ಅವರನ್ನು ತಪಾಸಣೆಗೊಳಪಡಿಸಲಾಗಿದೆ.

Recommended Video

      MS Dhoni leaves Chennai after IPL 2020 postponed till April 15 | IPL2020 | Dhoni Return to Home

      ಈ ಪೈಕಿ ಸುಮಾರು ಒಂಬತ್ತು ಮಂದಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ. ಒಬ್ಬ ವ್ಯಕ್ತಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ. ಈ ನಾಲ್ವರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ನಿಗಾವಣೆ ನಡೆಸಿದ್ದು, ಅವರು 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.

      ಕೊರೊನಾ ತಡೆಗೆ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗಡಿಯಂಚಿನಲ್ಲಿ ತಪಾಸಣೆ ನಡೆಸುತ್ತಾ ಮುನ್ನೆಚ್ಚರಿಕೆ ವಹಿಸಿದ್ದ ಬೆನ್ನಲ್ಲೇ ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ವಿದೇಶಿಯರಿದ್ದಾರೆ ಎಂಬ ಮಾಹಿತಿ ಬಂದಿತ್ತು.

      District Officers Performs Corona Test To Foreigners In Bandipura Resorts

      ಹೀಗಾಗಿ ಕೆಲವು ರೆಸಾರ್ಟ್‌ಗಳಿಗೆ ಅಧಿಕಾರಿಗಳು ತೆರಳಿ ಮಾಹಿತಿ ಕಲೆಹಾಕಿದ್ದರಲ್ಲದೆ, ರೆಸಾರ್ಟ್‌ಗಳಲ್ಲಿದ್ದ ವಿದೇಶಿಯರನ್ನು ತಪಾಸಣೆಗೊಳಪಡಿಸುವ ಕೆಲಸಕ್ಕೆ ಮುಂದಾಗಿದ್ದರು. ಇದೀಗ ವಿದೇಶಿಯರನ್ನು ತಪಾಸಣೆಗೊಳಪಡಿಸಲಾಗಿದ್ದು, ಆತಂಕವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವುದು ಜನರಲ್ಲಿ ನೆಮ್ಮದಿ ತಂದಿದೆ.

      District Officers Performs Corona Test To Foreigners In Bandipura Resorts

      ವಿದೇಶಿ ಪ್ರವಾಸಿಗರ ಪೈಕಿ ಜರ್ಮನಿಯ ಓರ್ವ ಮಹಿಳೆಯೂ ಇದ್ದಾರೆ. ಇವರು ಆರು ತಿಂಗಳ ಹಿಂದೆ ಜರ್ಮನಿಯಿಂದ ಭಾರತಕ್ಕೆ ಪ್ರವಾಸ ಬಂದಿದ್ದು, ಬೈಕ್ ನಲ್ಲಿಯೇ ದೇಶಪರ್ಯಟನೆ ಮಾಡುತ್ತಿದ್ದರು. ಹಾಗೇ ಬಂಡೀಪುರಕ್ಕೆ ಬಂದ ಇವರು ಪಟ್ಟಣದ ಹೊರವಲಯದ ಇಂದ್ರಪ್ರಸ್ಥ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ವಿವರ ಪಡೆದ ಅಧಿಕಾರಿಗಳು ಅಲ್ಲಿಗೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಎಲ್ಲರ ಮೇಲೆಯೂ ತೀವ್ರ ನಿಗಾ ವಹಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+