ಪ್ರಚಾರಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮಕ್ಕಳಿಂದ ಜೈಕಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಗುಂಡ್ಲುಪೇಟೆಯಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಕಾಂಗ್ರೆಸ್ ನವರು ಮಕ್ಕಳನ್ನು ಕರೆತಂದಿದ್ದರಾ ಎಂಬ ಪ್ರಶ್ನೆ ಮೂಡಿದೆ. ಬಿಸಿಲಿನಲ್ಲಿ ಮಕ್ಕಳು ಭಾಗವಹಿಸಿದ್ದ ಫೋಟೋಗಳು ಸಿಕ್ಕಿವೆ
ಗುಂಡ್ಲುಪೇಟೆ, ಏಪ್ರಿಲ್ 1: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮದ ವೇಳೆ ಉರಿಬಿಸಿಲಿನಲ್ಲಿ ಮಕ್ಕಳನ್ನು ನಿಲ್ಲಿಸಿ, ಜೈಕಾರ ಹೇಳಿಸಿದ ದೃಶ್ಯ ಮಲ್ಲಯ್ಯನಪುರ ಗ್ರಾಮದಲ್ಲಿ ಕಂಡುಬಂತು.
ಮಲ್ಲಯ್ಯನಪುರ ಗ್ರಾಮದಲ್ಲಿ ಶನಿವಾರ ಮುಖ್ಯಮಂತ್ರಿಗಳ ಪ್ರಚಾರ ಸಭೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ತಪ್ಪು ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ನ ಶಾಲು ಹೊದಿಸಿ, ಮಕ್ಕಳನ್ನು ಮುಖ್ಯಮಂತ್ರಿಗೆ ಜೈಕಾರ ಹಾಕಲು ಬಿಡಲಾಗಿತ್ತು.[ಉಪಚುನಾವಣೆ: ಮುಖ್ಯಮಂತ್ರಿ ಮಗ ಡಾ.ಯತೀಂದ್ರ ಕಾರು ಜಪ್ತಿ]

ಆದರೆ, ಇವೆಲ್ಲವನ್ನು ಕಣ್ಣಾರೆ ಅಧಿಕಾರಿಗಳು ಕಂಡರೂ ತೆಪ್ಪಗಾಗಿದ್ದರು. ಮಲ್ಲಯ್ಯನಪುರದಲ್ಲಿ ಮುಖ್ಯಮಂತ್ರಿಗಳು ಬರುವ ಮುನ್ನವೇ ಮಕ್ಕಳು ಜೈಕಾರ ಕೂಗುತ್ತಾ ಸುಡು ಬಿಸಿಲಿನಲ್ಲಿ ತಮಗೆ ಅರಿವಿಲ್ಲದಂತೆ ಯಾರೋ ಹೇಳಿಕೊಟ್ಟಿದ್ದನ್ನು ಹೇಳುತ್ತಿದ್ದದ್ದು ಕಂಡುಬಂತು.
ಈ ಬಗ್ಗೆ ಮಕ್ಕಳನ್ನು ವಿಚಾರಿಸಿದಾಗ 2 ಸಾವಿರ ಕೊಟ್ಟಿರುವ ವಿಚಾರ ಬಾಯಿ ಬಿಟ್ಟಿದ್ದಾರೆ. ಕೂಡಲೇ ಕಾರ್ಯಕರ್ತರೊಬ್ಬರು ಆ ಬಾಲಕನನ್ನು ಪಕ್ಕಕ್ಕೆ ಕಳುಹಿಸಿದ್ದು ಕಂಡುಬಂತು. ಸಿಎಂ ಆಗಮನಕ್ಕೂ ಮುನ್ನ ಅದೇ ರಸ್ತೆಯಲ್ಲಿ ಎತ್ತಿನ ಗಾಡಿಯೊಂದರ ಮೇಲೆ ಪ್ಲಾಸ್ಟಿಕ್ ಟ್ಯಾಂಕ್ ನಲ್ಲಿ ಮನೆಗೆ ಕುಡಿಯುವ ನೀರು ತರಲಾಗುತ್ತಿತ್ತು.[ಉಪಚುನಾವಣೆಯಲ್ಲಿ 'ಕೈ' ತಂತ್ರ ಸಫಲವಾಗುತ್ತಾ?]

ಈ ವೇಳೆ ನೀರು ತರುತ್ತಿದ್ದ ವ್ಯಕ್ತಿಯನ್ನು ಅಡ್ಡ ಹಾಕಿದ ಪೊಲೀಸರು ಪ್ರಶ್ನೆ ಮಾಡಿದರು. ನಂತರ ಸ್ಥಳೀಯ ಕಾರ್ಯಕರ್ತರು ಆತನಿಗೂ ಕಾಂಗ್ರೆಸ್ ಶಾಲು ಹೊದೆಸಿದ್ದು ಮಾತ್ರ ಆಶ್ಚರ್ಯ ತಂದಿತು. ಅದಾದ ಬಳಿಕ ಸಿದ್ದರಾಮಯ್ಯ ಅವರು ಕುತನೂರಲ್ಲಿ ಪ್ರಚಾರ ನಡೆಸುತ್ತಿದ್ದಾಗ ತಲೆ ಮೇಲೆ ಬಿಂದಿಗೆ ಹೊತ್ತು ಮನೆಗೆ ತೆರಳುತ್ತಿದ್ದ ಮಕ್ಕಳು ಸಂಚಾರ ದಟ್ಟಣೆ ಆಗಿ ಬಿಸಿಲಲ್ಲೇ ನಿಂತಿದ್ದ ದೃಶ್ಯ ಕಂಡು ಬಂತು.












Click it and Unblock the Notifications