ಮೈಸೂರು ದಸರಾ ಜಂಬುಸವಾರಿಯಲ್ಲಿ ಮಿಂಚಲಿದೆ ಗಡಿಜಿಲ್ಲೆಯ ಈ ಸ್ತಬ್ಧಚಿತ್ರ
ಚಾಮರಾಜನಗರ, ಅಕ್ಟೋಬರ್, 23: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬುಸವಾರಿಯಲ್ಲಿ ಗಡಿಜಿಲ್ಲೆ ಚಾಮರಾಜನಗರದಿಂದ ಜಾನಪದ, ಅರಣ್ಯ ಸಂಪತ್ತು, ಧಾರ್ಮಿಕ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರ ಪಾಲ್ಗೊಳ್ಳಲ್ಲಿದೆ.
ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಡೆದಿದ್ದು, 'ಜಾನಪದ ಭಕ್ತಿಯ ಬೀಡು- ಹುಲಿ ಆನೆಗಳ ಸಂತೃಪ್ತಿಯ ಕಾಡು' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧಚಿತ್ರ ರೂಪಿಸಲಾಗಿದೆ. ಜಿಲ್ಲೆಯ ವಿಶಿಷ್ಟ ಜಾನಪದ ಕಲೆ ಗೊರವರ ಕುಣಿತವನ್ನು ಸ್ತಬ್ಧಚಿತ್ರದಲ್ಲಿ ಪ್ರಮುಖವಾಗಿ ಬಿಂಬಿಸಲಾಗುತ್ತಿದೆ. ಗೊರವರ ಕುಣಿತದ ಕಲಾವಿದರ ಮುಖದ ಬೃಹತ್ ಪ್ರತಿಕೃತಿ ಸ್ತಬ್ಧಚಿತ್ರದ ಮುಂಭಾಗದಲ್ಲಿ ಅಳವಡಿಸಲಾಗಿದೆ.

ಇದಲ್ಲದೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಮಲೆ ಮಹದೇಶ್ವರ ಸ್ವಾಮಿಯು ಹುಲಿಯ ಮೇಲೆ ಕುಳಿತಿರುವ 108 ಅಡಿ ಎತ್ತರ ಪ್ರತಿಮೆಯ ಪ್ರತಿಕೃತಿ, ಮಹದೇಶ್ವರ ಬೆಟ್ಟದ ದೇವಾಲಯದ ಪ್ರತಿಕೃತಿಗಳನ್ನೂ ಸ್ತಬ್ಧಚಿತ್ರ ಒಳಗೊಂಡಿದೆ. ಜಿಲ್ಲೆಯ ಪ್ರಕೃತಿ ಸಂಪತ್ತು, ಆನೆ, ಹುಲಿಗಳ ಕಾರಿಡಾರ್, ಜೀವನದಿ ಕಾವೇರಿ, ಭರಚುಕ್ಕಿ, ಹೊಗೆನಕಲ್ ಜಲಪಾತದ ಚಿತ್ರಣ ಕೂಡ ಸ್ತಬ್ಧಚಿತ್ರದಲ್ಲಿರಲಿದೆ.
ರೈತ ದಸರಾದ ಪ್ರಮುಖ ಆಕರ್ಷಣೆಗಳೇನು?
ಬಂಡೂರಿ ಕುರಿ, ಹಳ್ಳಿಕಾರ್ ಹಸು, ಮಲೆನಾಡ ಗಿಡ್ಡ ಹಸು ನೋಡಬೇಕಾದರೆ ನೀವು ಒಮ್ಮೆ ರೈತ ದಸರಾಗೆ ಬರಲೇಬೇಕು. ನಗರದ ಜೆಕೆ ಗ್ರೌಂಡ್ ಮೈದಾನದಲ್ಲಿ ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ಬರದ ನಡುವೆಯೂ ರೈತರು ಪಾಲ್ಗೊಂಡು ತಮ್ಮ ನೋವನ್ನು ಮರೆತರು.
ಒಂದೆಡೆ ವಿವಿಧ ತೋಟಗಾರಿಕೆಯ ಬೆಳೆಗಳು, ಮತ್ತೊಂದೆಡೆ ಬಂಡೂರು ಕುರಿಯ ಪ್ರದರ್ಶನ, ನಾಟಿಕೋಳಿಗಳ ಸಾಕಣೆ. ಆಂಧ್ರ ಮೂಲದ ಒಂಗೋಲ್, ಗಿರ್ ತಳಿ, ಹಳ್ಳಿಕಾರ್ ಹಸು ನೋಡುಗರ ಗಮನ ಸೆಳೆದರೆ, ಸಮಗ್ರ ಮೀನು ಕೃಷಿ, ಕೃಷಿ ಬಳಕೆ ಸಲಕರಣೆಗಳು, ಪ್ರಗತಿಪರ ರೈತರು ಬೆಳೆದ ಸಾವಯವ ಪದಾರ್ಥಗಳು ಮಳಿಗೆಗಳು ಮಾಹಿತಿ ಪೂರ್ಣವಾಗಿದ್ದವು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಚಂದವಳ್ಳಿಯ ರೈತರು ಬಂಡೂರು ಕುರಿಯ ಪ್ರದರ್ಶನ ಮಾಡಿದರು. ಈ ಕುರಿಗಳು ಮೊಲದ ಮರಿಗಳ ರೀತಿ ಇದ್ದು, 6 ತಿಂಗಳಿಗೆ 14 ಕೆ.ಜಿ., ಒಂದು ವರ್ಷಕ್ಕೆ 22 ಕೆ.ಜಿ ತೂಕ ಬರಲಿದೆ. ಈ ಕುರಿಗಳು ಪ್ರದರ್ಶನ ವಿಶೇಷವಾಗಿತ್ತು. ಬಂಡೂರಿ ಕುರಿ ಮಾಂಸದ ರುಚಿ ಮತ್ತು ಲಾಭಾಂಶದಿಂದ ಇಂದು ಸಾಕಣೆ ಹೆಚ್ಚುತ್ತಿರುವುದು ಗಮನಾರ್ಹ ಸಂಗತಿ.
ಯುವ ಕುಕ್ಕುಟೋದ್ಯಮಿ ಸಾಗರ್ ಅರಸ್ ಅವರು ಸುಧಾರಿತ ಹಿತ್ತಲ ನಾಟಿಕೋಳಿಗಳ ಸಾಕಣೆ ಬಗ್ಗೆ ಯುವಜನತೆಗೆ ಮಾಹಿತಿ ನೀಡುವ ಸಲುವಾಗಿ ಮಳಿಗೆ ತೆರೆದಿದ್ದಾರೆ. ಇಲ್ಲಿ ಸ್ಥಳೀಯ ನಾಟಿಕೋಳಿ, ಅಸೀಲ್, ಟರ್ಕಿ, ಗಿರಿರಾಜ ಹಾಗೂ ಸ್ವರ್ಣದಾರ ಕೋಳಿಗಳ ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ ಆಂಧ್ರ ಮೂಲದ ಒಂಗೋಲ್, ಗುಜರಾತಿನ ಗಿರ್, ಹಸುಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದಾರೆ.
ಇದರೊಂದಿಗೆ ಹಳ್ಳಿಕಾರ್ ಎತ್ತು ವಸ್ತು ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಲ್ಲದೆ, ಸುಮುಧ ಸಾವಯವ ತೋಟದ ಮಲೆನಾಡು ಗಿಡ್ಡ ಹಸು ಗಮನ ಸೆಳೆಯುತ್ತಿದೆ. ಉದ್ದ ಕುರಿ ಮೇಕೆ, ಇಯರ್ ಮೇಕೆ ತಳಿಗಳು ಪ್ರದರ್ಶನ ಸೊಬಗನ್ನು ಹೆಚ್ಚಿಸಿದವು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಬಳಿ ನಗಾರಿ ಬಾರಿಸುವ ಮೂಲಕ ರೈತ ದಸರೆಗೆ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ಚಾಲನೆ ನೀಡಿದರು. ಅಲಂಕೃತ ಜೋಡಿ ಎತ್ತಿನ ಗಾಡಿ ಏರಿದ ಕೃಷಿ ಸಚಿವರು ಮೆರವಣಿಗೆಯಲ್ಲಿ ಸಾಗಿ ಬಂದರು. ಧಾನ್ಯಗಳಿಗೆ ಪೂಜೆ ಸಲ್ಲಿಸಿ ಕೃಷಿಯಲ್ಲಿ ಸಾಧನೆ ತೋರಿದ ಹಲವು ಸಾವಯವ ಕೃಷಿಕರಿಗೆ ಸನ್ಮಾನ, ಗುಣಮಟ್ಟದ ಬೆಳೆಗಳ ಪ್ರದರ್ಶನ, ಸಾವಯವ ಉತ್ಪನ್ನಗಳ ಮಾರಾಟ ರೈತ ದಸರಾ ಯಶಸ್ಸಿಗೆ ಎಲ್ಲವೂ ಸಾಕ್ಷಿಯಾದವು.
ಅಷ್ಟೇ ಅಲ್ಲದೆ ವೀರಗಾಸೆ, ಕೋಲಾಟ, ಪೂಜಾ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ಹುಲಿ ವೇಷ, ಪಾಳೇಗಾರ, ಮರಗಾಲು ಕುಣಿತ ಇನ್ನಿತರ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಣೆ ತುಂಬಿದವು. ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದಲ್ಲಿ ದೊಡ್ಡ ಬರಗಾಲ ಇದೆ. 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮೂರು ಬಾರಿ ಪ್ರಧಾನಿಗೆ ಪತ್ರ ಬರೆದರೂ ಭೇಟಿ ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಜೆಕೆ ಗ್ರೌಂಡ್ ಬಳಿ ಇರುವ ಮೈಸೂರು ವೈದ್ಯಕೀಯ ಕಾಲೇಜಿನ ಅಲ್ಯೂಮಿನಿ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ಬರ ತಾಂಡವ ಆಡುತ್ತಿದೆ. ಮೊದಲ ಹಂತದಲ್ಲಿ 195 ತಾಲೂಕು ಹಾಗೂ ಎರಡನೇ ಹಂತದಲ್ಲಿ 21 ತಾಲೂಕುಗಳನ್ನು ಬರ ಪೀಡಿತ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ ಅಷ್ಟೇ ಎಂದು ತಿಳಿಸಿದರು.
ಬರ ಪರಿಹಾರವಾಗಿ 5 ಸಾವಿರದ 21 ಕೋಟಿ ರೂಪಾಯಿ ನೀಡುವಂತೆ ಕೇಂದ್ರವನ್ನು ಕೋರಿದ್ದೇವೆ. ಆದರೂ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಲು ಇಂದಿಗೂ ನಮಗೆ ಅವಕಾಶ ಸಿಕ್ಕಿಲ್ಲ. ಇದು ರಾಜ್ಯದ ಬಗ್ಗೆ ಕೇಂದ್ರದ ನಡವಳಿಕೆ ಹಾಗೂ ತಾತ್ಸಾರವನ್ನು ತೋರಿಸುತ್ತದೆ. ಕಾವೇರಿ ಗಲಾಟೆಯಾದಾಗ ಮೂರು ಬಾರಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್‌ನ 27 ಸಂಸದರು ಮೋದಿ ಭೇಟಿಗೆ ಯಾಕೆ ಹೋಗಲಿಲ್ಲ, ನಮ್ಮ ನೆರವಿಗೂ ಬರಲಿಲ್ಲ? ಎಂದು ಪ್ರಶ್ನಿಸಿದರು.
ಈ ವೇಳೆ ಶಾಸಕರಾದ ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪ, ಉಪ ಸಮಿತಿ ಅಧ್ಯಕ್ಷ ಯೋಗೇಶ್, ಕೃಷಿಕ ಸಮಾಜದ ಶಿವಕುಮಾರ್, ಉಪಾಧ್ಯಕ್ಷ ಮಾಲೇಗೌಡ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ ಲಿಂಗರಾಜ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ನಗರ ಪಾಲಿಕೆ ಸದಸ್ಯ ಪ್ರವೀಳಾ ಭರತ್ ಸೇರಿದಂತೆ ಇತರರು ಇದ್ದರು.
ಮೈಸೂರಿನಲ್ಲಿ ದಸರಾ ಸಂಭಮ: ಫಲಪುಷ್ಪ ಪ್ರದರ್ಶನ, ಆಹಾರ ಮೇಳ ವೀಕ್ಷಿಸಿದ ಸಚಿವ ಹೆಚ್
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications