ಮರಿಯಾನೆ ಸಾಕೋದು ಅಷ್ಟು ಸುಲಭವಲ್ಲ, ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ "ದಿ ಎಲಿಫೆಂಟ್ ವಿಸ್ಪರರ್ಸ್" ಬೊಮ್ಮನ್-ಬೆಳ್ಳಿ ದಂಪತಿ

ಚಾಮರಾಜನಗರ, ಆಗಸ್ಟ್‌, 26: ಆಸ್ಕರ್ ಪ್ರಶಸ್ತಿ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಮರಿಯಾನೆ ಸಾಕುವುದರ ಬಗ್ಗೆ ಕನ್ನಡದಲ್ಲೇ ಮನಬಿಚ್ಚಿ ಮಾತನಾಡಿ ಪ್ರವಾಸಿಗರ ಗಮನ ಸೆಳೆದಿದ್ದಾರೆ.

ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮಿಳುನಾಡಿನ ಮದುಮಲೈ ಆನೆ ಕ್ಯಾಂಪ್‌ನಲ್ಲಿ ಹಲವು ವರ್ಷಗಳಿಂದ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಇವರು ಮರಿಯಾನೆಗಳನ್ನು ಅಚ್ಚುಕಟ್ಟಾಗಿ ಅವುಗಳಿಗೆ ಯಾವುದೇ ತೊಂದರೆ ಆಗದಂತೆ ಮಗುವಂತೆ ಪೋಷಣೆ ಮಾಡುತ್ತಾ ಬಂದಿದ್ದಾರೆ. ಇನ್ನು ಈ ಬಗ್ಗೆ ಅವರು ಕನ್ನಡದಲ್ಲಿಯೇ ವಿವರಣೆ ನೀಡಿದ್ದಾರೆ ಗಮನಿಸಿ.

Bomman, Belli couple talk in Kannada on baby elephant nutrition

ಈ ಬಗ್ಗೆ ಮಾತನಾಡಿದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಆಸ್ಕರ್ ಪ್ರಶಸ್ತಿ ಬಂದ ಬಳಿಕ ತಮ್ಮನ್ನು ನೋಡಲು ಪ್ರವಾಸಿಗರ ದಂಡೇ ಬರುತ್ತುದೆ ಎಂದು ಕರ್ನಾಟಕದ ಪ್ರವಾಸಿಗರೊಂದಿಗೆ ಕನ್ನಡದಲ್ಲೇ ಮುಕ್ತವಾಗಿ ಮಾತಾಡಿ ಗಮನ ಸೆಳೆದಿದ್ದಾರೆ.

ಆನೆ ಮರಿ ಪಾಲನೆ ಮಾಡುವವಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಮರಿಯಾನೆ ವಾಸಿಸುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಮಯಕ್ಕೆ ಸರಿಯಾಗಿ ಗ್ಲುಕೋಸ್ ನೀಡಬೇಕು. ನಮ್ಮ ವೈಯುಕ್ತಿಕ ಕೆಲಸಗಳು ಏನೇ ಇದ್ದರೂ ಒಂದು ಕ್ಷಣವೂ ಆನೆಯನ್ನು ಬಿಟ್ಟು ಹೋಗುವ ಹಾಗಿಲ್ಲ. ಮರಿಯಾನೆ ಹುಲ್ಲು ತಿನ್ನುವ ತನಕ ಅದರ ಜೊತೆ ನಿಂತು ಕಾಪಾಡಬೇಕು. ಹೀಗೆ ಒಂದು ವರ್ಷದ ವರೆಗೆ ಭಾರೀ ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+