Get Updates
Get notified of breaking news, exclusive insights, and must-see stories!

ಬೆಳಗ್ಗಿನ ತಿಂಡಿಯನ್ನು ಪೌಷ್ಟಿಕಗೊಳಿಸುವ ಉಪಾಯ ಇಲ್ಲಿದೆ!

ಬೆಳಗ್ಗಿನ ತಿಂಡಿ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಮಾತನ್ನು ಹಲವರು ಹೇಳುತ್ತಾರೆ. ಅದು ಸತ್ಯವೂ ಹೌದು, ಬೆಳಗ್ಗೆ ನಾವು ತಿನ್ನುವ ತಿಂಡಿ ನಮಗೆ ಇಡೀ ದಿನ ಅಗತ್ಯವಿರುವ ಶಕ್ತಿಯನ್ನು ವೃದ್ಧಿಸುತ್ತದೆ. ಬೆಳಗ್ಗಿನ ಸಮಯದಲ್ಲಿ ಸಂಶ್ಲೇಷಿತ ಉತ್ಪನ್ನಗಳ ಸೇವನೆಯನ್ನು ಆದಷ್ಟು ತ್ಯಜಿಸುವುದು ಉತ್ತಮ ಎಂಬುದು ಆಹಾರತಜ್ಞರ ಸಲಹೆ.

ಯಾವುದೇ ರೀತಿಯ ಸಕ್ಕರೆ ಅಂಶವನ್ನು ಹೊಂದಿರದ, ಶೇಖರಿಸಿದ ಪದಾರ್ಥವಲ್ಲದ ನೈಸರ್ಗಿಕ ಉತ್ಪನ್ನಗಳನ್ನು ಬೆಳಗ್ಗಿನ ತಿಂಡಿಯಲ್ಲಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಧಾನ್ಯಗಳು, ಸಿರಿಧಾನ್ಯಗಳನ್ನು ಬೆಳಗಿನ ತಿಂಡಿ ತಯಾರಿಸಲು ಬಳಸಿದರೆ ಅವುಗಳಲ್ಲಿ ಪ್ರೋಟೀನ್, ಡಯೆಟರಿ ಫೈಬರ್, ಕಬ್ಬಿಣ, ಕ್ಯಾಲ್ಷಿಯಂ, ವಿಟಮಿನ್ ನಂಥ ಪೋಷಕಾಂಶಗಳು ಯಥೇಚ್ಛವಾಗಿ ದೇಹವನ್ನು ಸೇರುತ್ತವೆ.

Your checklist for a healthy breakfast is here for you!

ಆದ್ದರಿಂದ ಪ್ರತಿದಿನ ನೀವು ಎಂಥ ಆರೋಗ್ಯಕರ ತಿಂಡಿಯನ್ನು ತಿನ್ನುತ್ತಿದ್ದೀರಿ? ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಪ್ರತಿದಿನ ಬೆಳಿಗ್ಗೆ ತಿನ್ನಬಹುದಾದ ಆರೋಗ್ಯಕರ ಮತ್ತು ಪೌಷ್ಟಿಕಾಂಶವುಳ್ಳ ತಿಂಡಿಗಳ ಪಟ್ಟಿ ಇಲ್ಲಿದೆ.

ನೈಸರ್ಗಿಕ ಪದಾರ್ಥಗಳು : ನೀವು ಸೇವಿಸುವ ಆಹಾರದಲ್ಲಿ ನೈಸರ್ಗಿಕ ಪದಾರ್ಥಗಳಿವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಆಹಾರ ಸಂಸಕ್ಷಿಸಲು ಬಳಸಲಾದ ವಸ್ತು ಕಡಿಮೆಯಿರುವ ತಿಂಡಿ ಸೇವಿಸಬೇಕು. ಆರೋಗ್ಯಕ್ಕೆ ಧಕ್ಕೆ ತರುವ ಸಕ್ಕರೆ ಅಂಶ ಹೆಚ್ಚಿರುವ ಸೇರಿಸಿದ ಆಹಾರ ಸೇವನೆಯನ್ನು ನಿಲ್ಲಿಸಿ.

ಬಹುಧಾನ್ಯಗಳು : ತಿಂಡಿಗೆ ಧಾನ್ಯ ಅಥವಾ ಕಾಳುಗಳಿದ್ದರೆ ಒಳ್ಳೆಯದು. ಏಕೆಂದರೆ, ಧಾನ್ಯಗಳಲ್ಲಿ ಡಯೆಟರಿ ಫೈಬರ್ ಹೆಚ್ಚಿರುತ್ತವೆ. ಇವು ಜೀರ್ಣಕ್ರಿಯೆ ಉತ್ತಮಪಡಿಸುತ್ತವೆ ಮತ್ತು ಆರೋಗ್ಯ ಸದೃಢವಾಗಿರುವಂತೆ ನೋಡಿಕೊಳ್ಳುತ್ತವೆ. ಕೇವಲ ಪೌಷ್ಟಿಕಾಂಶಗಳಿವೆ ಎಂಬ ಒಂದೇ ಕಾರಣಕ್ಕಲ್ಲ, ಧಾನ್ಯಗಳಲ್ಲಿ ಹಸಿವನ್ನು ನಿಯಂತ್ರಿಸುವ ಶಕ್ತಿಯೂ ಇದೆ.

Your checklist for a healthy breakfast is here for you!

ಒಣ ಹಣ್ಣುಗಳು : ದೈಹಿಕವಾಗಿ ಶ್ರಮಹಾಕಿ ವ್ಯಾಯಾಮಶಾಲೆಯಲ್ಲಿ ವ್ಯಾಯಾಮ ಮಾಡುವವರಿಗಂತೂ ಒಣಹಣ್ಣುಗಳ ಸೇವನೆ ಬಹಳ ಒಳ್ಳೆಯದು. ಬಾದಾಮಿ, ಗೋಡಂಬಿ, ಕಡಲೆಬೀಜ ಮತ್ತಿತರ ಒಣಹಣ್ಣುಗಳನ್ನು ಬೆಳಗ್ಗೆ ಸೇವಿಸುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ.

ಹಾಲು : ಬೆಳಗ್ಗೆ ಆರೋಗ್ಯಕರ ತಿಂಡಿಯ ಜೊತೆಗೆ ಒಂದು ಲೋಟ ಹಾಲು ಸೇವಿಸಲೇಬೇಕು. ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಮತ್ತು ಕ್ಯಾಲ್ಷಿಯಂ ಲಭಿಸುತ್ತದೆ.

ನಿಮಗೀಗ ಆರೋಗ್ಯಕರ ಮತ್ತು ಪೌಷ್ಟಿಕಾಂಶವುಳ್ಳ ತಿಂಡಿ ಹೇಗಿರಬೇಕೆಂದು ನಿಮಗೀಗ ತಿಳಿದಿದೆ. ಇವುಗಳಲ್ಲಿ ಪ್ರತಿಯೊಂದು ಕೂಡ ತಿಂಡಿಗೆ ಲಭಿಸುವಂತೆ ನಿಮ್ಮ ಆಯ್ಕೆಯಿರಬೇಕು.

Your checklist for a healthy breakfast is here for you!

ಮಾನ್ನಾ ಹೆಲ್ತ್ ಮಿಕ್ಸ್ ಅನ್ನು ಸಾಂಪ್ರದಾಯಿಕ ಸಿರಿಧಾನ್ಯ ಮತ್ತು ಕಾಳುಗಳೊಂದಿಗೆ ಒಣಹಣ್ಣುಗಳನ್ನು ಕೂಡ ಮಿಕ್ಸ್ ಮಾಡಿ ಅತ್ಯಂತ ಪರ್ಫೆಕ್ಟಾಗಿ ತಯಾರಿಸಲಾಗಿದೆ. ಸಿರಿಧಾನ್ಯ, ಧಾನ್ಯ, ಒಣಹಣ್ಣುಗಳು ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಬ್ರೇಕ್ ಫಾಸ್ಟ್ ಎಂದರೆ ಮಾನ್ನಾ ಹೆಲ್ತ್ ಮಿಕ್ಸ್.

ರಾಗಿ, ಜೋಳ, ಸಿರಿಧಾನ್ಯ, ಬಾರ್ಲಿ, ಗೋಧಿ, ಕೆಂಪು ಅಕ್ಕಿ, ಹೆಸರು ಕಾಳು, ಹುರಿದ ಬೇಳೆ, ಬಾದಾಮಿ, ಗೋಡಂಬಿ, ಕಡಲೆ ಬೀಜ ಮುಂತಾದ ಸಾಂಪ್ರದಾಯಿಕ ಪದಾರ್ಥಗಳೆಲ್ಲವೂ ಇದರಲ್ಲಿವೆ. ಒಂದು ಲೋಟ ಹಾಲಿನೊಂದಿಗೆ ಮಾನ್ನಾ ಹೆಲ್ತ್ ಮಿಕ್ಸ್ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೊಟೀನ್, ಡಯೆಟರಿ ಫೈಬರ್, ಕಬ್ಬಿಣ ಸಿಗುತ್ತವೆ.

Your checklist for a healthy breakfast is here for you!

ನಿಮ್ಮ ಕುಟುಂಬಕ್ಕೆ ಯಾವ ಆರೋಗ್ಯಕರವಾದ ತಿಂಡಿ ನೀಡುವುದು ಎಂದು ಚಿಂತಿಸುತ್ತಿದ್ದರೆ, ಮಾನ್ನಾ ಹೆಲ್ತ್ ಮಿಕ್ಸ್ ಅತ್ಯುತ್ತಮ ಆಯ್ಕೆ ಮತ್ತು ಇದೊಂದೇ ಎಲ್ಲ ಸಮಸ್ಯೆಗಳಿಗೂ ಪರಿಹಾರ. ಇದು 100% ನೈಸರ್ಗಿಕ ಧಾನ್ಯ ಮತ್ತು ನೈಸರ್ಗಿಕ ಶರ್ಕರದಿಂದ ತಯಾರಿಸಲಾಗಿದ್ದು, ಇದಕ್ಕೆ ಯಾವುದೇ ರೀತಿಯ ಕೃತಕ ಸಕ್ಕರೆಯನ್ನು ಮಿಶ್ರಣ ಮಾಡಲಾಗಿಲ್ಲ. ಅಕಸ್ಮಾತ್ ಬೆಳಗ್ಗಿನ ತಿಂಡಿ ಮಾಡುವುದಕ್ಕೆ ಆಗಿಲ್ಲವೆಂದರೂ ಒಂದು ಪುಟ್ಟ ಬೌಲ್ ನಲ್ಲಿ ಈ ಹೆಲ್ತ್ ಮಿಕ್ಸ್ ಹಾಕಿಕೊಂಡು ತಿಂದರೂ ಸಾಕು, ಹೊಟ್ಟೆ ತುಂಬುತ್ತದೆ.

ಶಕ್ತಿಯುತ ದಿನವನ್ನು ಆರಂಭಿಸಲು, ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡುವ ಮಾನ್ನಾ ಹೆಲ್ತ್ ಮಿಕ್ಸ್ ಗಿಂತ ಉತ್ತಮ ಬೇರೆ ಏನಿದೆ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+