ದೋಹಾ ಟು ಆಕ್ಲೆಂಡ್: ಇದು ಜಗತ್ತಿನಲ್ಲೇ ಅತಿ ದೂರದ ವಿಮಾನ ಯಾನ

Posted By:
Subscribe to Oneindia Kannada

ವೆಲ್ಲಿಂಗ್ಟನ್, ಫೆಬ್ರವರಿ 6: ಜಗತ್ತಿನ ಅತಿ ದೂರ ಪ್ರಯಾಣದ ವಾಣಿಜ್ಯ ವಿಮಾನ ನ್ಯೂಜಿಲ್ಯಾಂಡ್ ನಲ್ಲಿ ಸೋಮವಾರ ಭೂ ಸ್ಪರ್ಶ ಮಾಡಿದೆ. ಕತಾರ್ ಏರ್ ವೇಸ್ ನ ಈ ವಿಮಾನ ದೋಹಾದಿಂದ-ಆಕ್ಲೆಂಡ್ ವರೆಗೆ 14,535 ಕಿಲೋಮೀಟರ್ ಕ್ರಮಿಸಿದೆ. "ನಾವು ಅಧಿಕೃತವಾಗಿ ಆಕ್ಲೆಂಡ್ ಗೆ ಬಂದಿಳಿದಿದ್ದೇವೆ" ಎಂದು ಟ್ವೀಟ್ ಮಾಡಲಾಗಿದೆ.

ಅಂದುಕೊಂಡಿದ್ದಕ್ಕಿಂತ ಐದು ನಿಮಿಷ ಮುಂಚಿತವಾಗಿ ಅಂದರೆ 16 ಗಂಟೆ 23 ನಿಮಿಷದ ಪ್ರಯಾಣದ ನಂತರ ವಿಮಾನ ಆಕ್ಲೆಂಡ್ ತಲುಪಿದೆ. ಬೋಯಿಂಗ್ 777-200LR ವಿಮಾನವು ಹತ್ತು ವಿವಿಧ ಟೈಮ್ ಜೋನ್ ಗಳನ್ನು ಈ ಪ್ರಯಾಣದಲ್ಲಿ ದಾಟಿದೆ. ಅಂದರೆ ವಿವಿಧ ದೇಶಗಳಲ್ಲಿನ ಕಾಲಮಾನ ಒಂದೊಂದು ಇರುತ್ತವೆ. ಆ ರೀತಿ ಹತ್ತು ವಿವಿಧ ಕಾಲಮಾನ ದಾಟಿ ವಿಮಾನ ಆಕ್ಲೆಂಡ್ ತಲುಪಿದೆ.[80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!]

World's Longest Flight Lands In New Zealand

ನ್ಯೂಜಿಲ್ಯಾಂಡ್ ನಲ್ಲಿ ಚಿತ್ರೀಕರಣವಾಗಿರುವ 'ಲಾರ್ಡ್ ಆಫ್ ದ ರಿಂಗ್ಸ್' ಹಾಗೂ 'ದ ಹಾಬಿಟ್' ಸಿನಿಮಾದ ಪ್ರದರ್ಶನ ಅವಧಿಗಿಂತ ಈ ಪ್ರಯಾಣ ದೀರ್ಘಾವಧಿಯದಾಗಿತ್ತು ಎಂದು ಕತಾರ್ ಏರ್ ವೇಸ್ ಹೇಳಿಕೊಂಡಿದೆ. ಇನ್ನು ಈ ವಿಮಾನದಲ್ಲಿ ನಾಲ್ವರು ಪೈಲಟ್ ಗಳು, ಹದಿನೈದು ಕ್ಯಾಬಿನ್ ಕ್ರೂ ಇದ್ದರು. 1100 ಕಪ್ ಟೀ ಹಾಗೂ ಕಾಫಿ, 2 ಸಾವಿರ ಕೋಲ್ಡ್ ಡ್ರಿಂಕ್ಸ್, 1636 ಮೀಲ್ಸ್ ವಿತರಿಸಿದ್ದಾರೆ.

ಏರ್ ಇಂಡಿಯಾದ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಸೇವೆ ಅತಿ ದೀರ್ಘವಾದದ್ದು ಎನ್ನುತ್ತಾರೆ. ಆದರೆ ಭೂಮಿಯ ಮೇಲಿನ ದೂರವನ್ನು ಲೆಕ್ಕ ಹಾಕೋದಾದರೆ ದೋಹಾ- ಆಕ್ಲೆಂಡ್ ಪ್ರಯಾಣ ಅದಕ್ಕಿಂತಲೂ ದೀರ್ಘವಾದದ್ದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The world's longest commercial flight landed in New Zealand on Monday with the arrival of Qatar Airways's 14,535 kilometres Doha-Auckland service, the airline announced.
Please Wait while comments are loading...