Get Updates
Get notified of breaking news, exclusive insights, and must-see stories!

ರಾಧಿಕಾ ಮರ್ಚೆಂಟ್: ಇವರೇ ನೋಡಿ ಅಂಬಾನಿ ಕುಟುಂಬದ ಕಿರಿಯ ಸೊಸೆ

ಮುಂಬೈ, ಜೂನ್ 6: ವಾಣಿಜ್ಯ ನಗರಿ ಎನಿಸಿರುವ ಮುಂಬೈನಲ್ಲಿ ಸಾಂಸ್ಕೃತಿಕ ವೈಭವ ಮೂಡಿದೆ. ಶಾಸ್ತ್ರೀಯ ನೃತ್ಯಗಾರ್ತಿ, ಮುಖೇಶ್ ಮತ್ತು ನೀತಾ ಅಂಬಾನಿ ಮತ್ತು ಮರ್ಚೆಂಟ್ ಕುಟುಂಬ ಪ್ರಸ್ತುತಪಡಿಸಿದ ಅರಂಗೇತ್ರಂ ಮೂಲಕ ವೇದಿಕೆಗೆ ಪಾದಾರ್ಪಣೆ ಮಾಡಿದ ರಾಧಿಕಾ ಮರ್ಚೆಂಟ್ ತಮ್ಮ ಕಲೆಯಿಂದ ಬೆರಗುಗೊಳಿಸಿದ್ದಾರೆ.

ಅಸಲಿಗೆ ಅರಂಗೇತ್ರಂ ಎನ್ನವುದು ತಮಿಳು ಪದ. ನರ್ತಕಿಯು ಅಪ್ರಬುದ್ಧರಿಗೆ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ವೇದಿಕೆಯ ಮೇಲಿನ ಆರೋಹಣವನ್ನು ಸೂಚಿಸುವುದೇ ಅರಂಗೇತ್ರಂ ಎಂಬ ಪದದ ಅರ್ಥವಾಗಿದೆ.

ಕಷ್ಟಕರವಾದ 'ಅಷ್ಟರಸ' ಅಥವಾ ನಾಟ್ಯ ಶಾಸ್ತ್ರಗಳಲ್ಲಿ ವಿವರಿಸಿದಂತೆ ಮಾನವರಲ್ಲಿ ಅಂತರ್ಗತವಾಗಿರುವ ಎಂಟು ಪ್ರಾಥಮಿಕ ಭಾವನೆಗಳನ್ನು ವ್ಯಕ್ತಪಡಿಸುವ ಕಲಾತ್ಮಕ ವಿದ್ಯೆ ಆಗಿರುತ್ತದೆ. ಶೃಂಗಾರ್ (ಪ್ರೀತಿ), ಹಾಸ್ಯ (ನಗು), ಕರುಣಾ (ನೋವು), ಭಯ (ಭಯ), ವೀರ (ವೀರತೆ), ರೌದ್ರ (ಕೋಪ), ಬಿಭಿತ್ಸ (ಅಸಹ್ಯ), ಮತ್ತು ಅದ್ಭುತ (ಅದ್ಭುತ) ಕಲೆಯ ಮೂಲಕ ರಾಧಿಕಾ ಮರ್ಚೆಂಟ್ ಅವರು ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಹಾಗೂ ಹಲವಾರು ನೃತ್ಯ ಭಂಗಿಗಳು ಪ್ರೇಕ್ಷಕರನ್ನು ವಿಸ್ಮಯಗೊಳಿಸಿದರು.

 ರಾಧಿಕಾ ಮರ್ಚೆಂಟ್ ಯಾರು?

ರಾಧಿಕಾ ಮರ್ಚೆಂಟ್ ಯಾರು?

ರಾಧಿಕಾ ಮರ್ಚೆಂಟ್ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ದಂಪತಿಯ ಪುತ್ರಿ ಆಗಿದ್ದಾರೆ. ಮರ್ಚೆಂಟ್ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರದಲ್ಲಿ ಮುಂಬೈನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಪದವಿ ಪಡೆದುಕೊಂಡಿದ್ದು, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಇದೇ ರಾಧಿಕಾ ಮರ್ಚೆಂಟ್ ಆಗಾಗ್ಗೆ ಅಂಬಾನಿ ಕುಟುಂಬದ ಕೂಟಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಉಪಸ್ಥಿತಿಯೇ ಇಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ರಾಧಿಕಾ ಮರ್ಚೆಂಟ್ ನೀತಾ ಮತ್ತು ಮುಖೇಶ್ ಅಂಬಾನಿಯವರ ಭಾವಿ ಸೊಸೆ ಆಗಿದ್ದಾರೆ. ಅಂಬಾನಿ ದಂಪತಿಯ ಕಿರಿಯ ಮಗ ಅನಂತ್ ಅಂಬಾನಿಯ ಪತ್ನಿ ಎಂದೂ ಹೇಳಲಾಗುತ್ತಿದೆ.

 ನಿಭಾ ಆರ್ಟ್ಸ್ ನಲ್ಲಿ ರಾಧಿಕಾ ಮರ್ಚೆಂಟ್ ಅಭ್ಯಾಸ

ನಿಭಾ ಆರ್ಟ್ಸ್ ನಲ್ಲಿ ರಾಧಿಕಾ ಮರ್ಚೆಂಟ್ ಅಭ್ಯಾಸ

ರಾಧಿಕಾ ಮರ್ಚೆಂಟ್, ಗುರು ಭಾವನಾ ಠಾಕರ್ ಅವರ ಮಾರ್ಗದರ್ಶನದಲ್ಲಿ ನಿಭಾ ಆರ್ಟ್ಸ್‌ನಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಅಧ್ಯಯನ ಮಾಡಿದರು. ಕಳೆದ 25 ವರ್ಷಗಳಿಂದಲೂ ಮುಂಬೈನಲ್ಲಿ ಹೆಸರುವಾಸಿ ಆಗಿರುವ ನಿಭಾ ಆರ್ಟ್ಸ್ ನೃತ್ಯ ಅಕಾಡೆಮಿಯಾಗಿದೆ.

 ರಾಧಿಕಾ ಮರ್ಚೆಂಟ್ ಮತ್ತು ಇಶಾ ನಡುವೆ ನಿಕಟ ಬಾಂಧವ್ಯ

ರಾಧಿಕಾ ಮರ್ಚೆಂಟ್ ಮತ್ತು ಇಶಾ ನಡುವೆ ನಿಕಟ ಬಾಂಧವ್ಯ

ರಾಧಿಕಾ ಮರ್ಚೆಂಟ್ ಸಹ ಅಂಬಾನಿ ಕುಟಂಬದ ಸದಸ್ಯರೇ ಆಗಿದ್ದಾರೆ. ನೀತಾ ಮತ್ತು ಅವರ ಮಗಳು ಇಶಾ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಕಳೆದ 2018ರಲ್ಲಿ

ವಧುವಿನ ಸಂಗೀತ ಸಮಾರಂಭದಲ್ಲಿ ಆಂದನ್ ಪಿರಮಾಲ್ ಮತ್ತು ಇಶಾ ವಿವಾಹದಲ್ಲಿ ಶ್ಲೋಕಾ ಮೆಹ್ತಾ ಅವರೊಂದಿಗೆ ಪ್ರದರ್ಶನ ನೀಡಿದರು.

 2019ರಲ್ಲೇ ಅನಂತ್-ಮುಕೇಶ್ ಅಂಬಾನಿ ಮದುವೆ

2019ರಲ್ಲೇ ಅನಂತ್-ಮುಕೇಶ್ ಅಂಬಾನಿ ಮದುವೆ

ಆರ್‌ಐಎಲ್ ಮುಖ್ಯಸ್ಥ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅವರನ್ನು ಕಳೆದ ವರ್ಷ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಇದರ ಮಧ್ಯೆ ರಾಧಿಕಾ ಮತ್ತು ಅನಂತ್ 2019 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+