ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್ 159 'ಐಡಿಯಾ'

Recommended Video

      ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್ 159 'ಐಡಿಯಾ' | Oneindia Kannada

      ಬೆಂಗಳೂರು, ಡಿಸೆಂಬರ್ 04: ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆದು ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡಿರುವ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ವೋಡಾಫೋನ್-ಐಡಿಯಾ ಎರಡು ಕಂಪನಿಗಳು ಒಟ್ಟಿಗೆ ಸ್ಪರ್ಧೆಗಿಳಿದರೂ ಸಾಧ್ಯವಾಗಿಲ್ಲ.

      ಏರ್ ಟೆಲ್ ನಂತೆ ವೋಡಾಫೋನ್ ಹಾಗೂ ಐಡಿಯಾ ಕೂಡಾ ತನ್ನ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಯೋಜನೆ ತರುತ್ತಿದೆ. ಈಗ ವೋಡಾಫೋನ್ 159 ರೂಪಾಯಿ ಯೋಜನೆ ಬಂದಿದೆ. ಈ ಯೋಜನೆ ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಪೈಪೋಟಿ ನೀಡಲಿದೆ.

      ಏರ್ಟೆಲ್ ನಂತೆ ವೋಡಾಫೋನ್ ಕೂಡ 159 ರೂಪಾಯಿ ಪ್ಲಾನ್ ಗೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾ ಲಭ್ಯವಾಗಲಿದೆ. 28 ದಿನಗಳಲ್ಲಿ ಗ್ರಾಹಕರಿಗೆ ಒಟ್ಟು 28 ಜಿಬಿ ಡೇಟಾ ಸಿಗಲಿದೆ. ಪ್ರತಿ ದಿನ 100 ಎಸ್ ಎಂ ಎಸ್ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಆದರೆ, 250 ನಿಮಿಷಗಳ ವಾಯ್ಸ್ ಕಾಲ್ ಪ್ರತಿದಿನ ಮಾತ್ರ ಸೀಮಿತವಾಗಿದೆ.

      Vodafone Rs 159 prepaid plan with 1GB daily data launched

      ಇದಕ್ಕೆ ಹಿಸಿದರೆ ಜಿಯೋ ತನ್ನ 149 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ನೀಡುತ್ತಿದೆ. ಜಿಯೋ ಪ್ಲಾನ್ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ವೋಡಾಫೋನ್ ಈ ಪ್ಲಾನ್ ಕೆಲ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

      ನಗರ ಪ್ರದೇಶಗಳಲ್ಲಿ ವೋಡಾಫೋನ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಗ್ರಾಮೀಣ ಭಾಗಗಳಲ್ಲಿ ಏರ್ ಟೆಲ್ ಹಾಗೂ ಜಿಯೋ ತಮ್ಮ ಪ್ರಭಾವ ಬೀರುತ್ತಿವೆ. ವರ್ಷದ ಆರಂಭದಲ್ಲಿ ವೋಡಾಫೋನ್ ಹಾಗೂ ಐಡಿಯಾ ಕಂಪನಿಗಳು ವಿಲೀನವಾದರೂ ಪ್ರತ್ಯೇಕವಾಗಿ ಮಾರುಕಟ್ಟೆಯಲ್ಲಿ ಉಳಿದುಕೊಂಡಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+