ವೊಡಾಫೋನ್ ಐಡಿಯಾ ಹೊಸ ಪ್ರಿಪೇಯ್ಡ್ ಯೋಜನೆ: ಏನೆಲ್ಲಾ ಆಫರ್ ಸಿಗಲಿದೆ?
ನವದೆಹಲಿ, ಸೆಪ್ಟೆಂಬರ್ 21: ವೊಡಾಫೋನ್ ಐಡಿಯಾ ಲಿಮಿಟೆಡ್ (ವಿY) ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಹೊಸ ಯೋಜನೆಗಳು ಕಡಿಮೆ ಬೆಲೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುತ್ತವೆ ಎಂದು ಕಂಪನಿಯ ವೆಬ್‌ಸೈಟ್ ತಿಳಿಸಿದೆ.
ಇದು ಕೆಲವು ಯೋಜನೆಗಳಿಂದ ಜೀ5 ಚಂದಾದಾರಿಕೆ, ಓವರ್-ದಿ-ಟಾಪ್ (ಒಟಿಟಿ) ಮನರಂಜನಾ ವೇದಿಕೆಯಂತಹ ಪ್ರಯೋಜನಗಳನ್ನು ತೆಗೆದುಹಾಕಿದೆ. ಜೀ5 ಚಂದಾದಾರಿಕೆ ಈ ಮೊದಲು ಎಲ್ಲಾ ಪ್ರಿಪೇಯ್ಡ್ ಯೋಜನೆಗಳ ಅಡಿಯಲ್ಲಿ ಲಭ್ಯವಿತ್ತು.
ಹೊಸ ಪ್ರಿಪೇಯ್ಡ್ ಯೋಜನೆಗಳು 405 ರೂಪಾಯಿಯಿಂದ ಪ್ರಾರಂಭವಾಗುತ್ತವೆ, ನಂತರ 595 ರೂ, 795 ಮತ್ತು 2,595 ರೂಪಾಯಿ ಯೋಜನೆಗಳು, 28 ದಿನಗಳ ವ್ಯಾಲಿಡಿಟಿಯಿಂದ ಪ್ರಾರಂಭವಾಗುತ್ತದೆ. 405 ಯೋಜನೆಯನ್ನು ಹೊರತುಪಡಿಸಿ, ಎಲ್ಲಾ ಯೋಜನೆಗಳು ದಿನಕ್ಕೆ 2 ಜಿಬಿ ಡೇಟಾವನ್ನು ನೀಡುತ್ತವೆ. 405 ರೂಪಾಯಿ ಯೋಜನೆಯು ಬಳಕೆದಾರರಿಗೆ 90 ಜಿಬಿ ಡೇಟಾವನ್ನು 28 ದಿನಗಳವರೆಗೆ ಅನುಮತಿಸುತ್ತದೆ.

ಎಲ್ಲಾ ಯೋಜನೆಗಳನ್ನು ಆಹಾರ ಡಿಲಿವರಿ ಸಂಸ್ಥೆ ಜೊಮಾಟೊ, ದೈನಂದಿನ ಆರ್ಡರ್ ಮೇಲೆ 75 ರೂ. ರಿಯಾಯಿತಿ ಕೊಡುಗೆ, ಅನ್ವಯಿಕ ನಿಯಮಗಳು ಮತ್ತು ಷರತ್ತುಗಳೊಂದಿಗೆ ಸಂಯೋಜಿಸಲಾಗಿದೆ.












Click it and Unblock the Notifications