ಕಿಂಗ್ಸ್ ಆಫ್ ಗುಡ್ ಟೈಮ್ ಮಲ್ಯಗೆ ಕಲ್ಯಾಣ ಯೋಗ

ಲಂಡನ್, ಮಾರ್ಚ್ 28: ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರುಗಳಿಗೂ ಅಧಿಕ ಮೊತ್ತದ ಸಾಲವನ್ನು ಹಿಂತಿರುಗಿಸಲು ಆಗದೆ, ಲಂಡನ್ನಿಗೆ ಹಾರಿರುವ ಉದ್ಯಮಿ ವಿಜಯ್ ಮಲ್ಯಗೆ ಈಗ ಕಲ್ಯಾಣ ಯೋಗ ಕೂಡಿ ಬಂದಿದೆ. ತಮ್ಮ 62ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ಮದುವೆಯಾಗುತ್ತಿದ್ದಾರೆ.

ಬಹು ಕಾಲದ ಸಂಗಾತಿ ಪಿಂಕಿ ಲಾಲ್ವಾನಿಯನ್ನು ಮದುವೆಯಾಗಲು ಮಲ್ಯ ನಿರ್ಧರಿಸಿದ್ದಾರೆ. 2011 ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಸಹಾಯಕ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡ ಪಿಂಕಿ ಈಗ ಮಲ್ಯ ಅವರ ಮಡದಿಯಾಗಲಿದ್ದಾರೆ.

ಮಲ್ಯ ಅವರ ಕಷ್ಟ-ಸುಖದ ದಿನಗಳಲ್ಲಿ ಜತೆಯಲ್ಲಿದ್ದುಕೊಂಡು ಸಹ ಜೀವನ ನಡೆಸಿರುವ ಪಿಂಕಿ ಅವರು ಲಂಡನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೂ ಬಂದಿದ್ದರು.

Vijay Mallya to get married for the 3rd time

1986-87ರಲ್ಲಿ ಸಮೀರಾ ತ್ಯಾಬ್ಜಿ, 1993ರಲ್ಲಿ ಬಾಲ್ಯದ ಗೆಳತಿ ರೇಖಾ ಮಲ್ಯರನ್ನು ಅಧಿಕೃತವಾಗಿ ಮದುವೆಯಾಗಿದ್ದರು. ಎರಡು ಮದುವೆಯಿಂದ ಸಿದ್ಧಾರ್ಥ, ಲೀನ್ನಾ, ತಾನ್ಯಾ ಎಂಬ ಮಕ್ಕಳನ್ನು ಹೊಂದಿದ್ದಾರೆ. ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ಮಾರ್ಚ್ 02,2016ರಂದು ಭಾರತ ತೊರೆದವರು ಸದ್ಯ ಲಂಡನ್ ನಿವಾಸಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+