ಚೀನಾದ ಟಿಕ್ ಟಾಕ್- ಟ್ವಿಟ್ಟರ್ ವಿಲೀನದ ಬಗ್ಗೆ ಸುದ್ದಿ ಏನಿದೆ?

ವಾಷಿಂಗ್ಟನ್, ಆ.9: ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್ ಅನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿದ ಬೆನ್ನಲ್ಲೇ ಟಿಕ್‌ಟಾಕ್ ಖರೀದಿಗೆ ಅಮೆರಿಕದ ಐಟಿ ಕಂಪನಿಗಳು ಮುಂದಾಗಿರುವ ಸುದ್ದಿ ಬಂದಿದೆ. ಟಿಕ್ ಟಾಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮೈಕ್ರೋಸಾಫ್ಟ್ ಮಾತುಕತೆ ನಡೆಸುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಟ್ವಿಟ್ಟರ್ ಹಾಗೂ ಟಿಕ್ ಟಾಕ್ ವಿಲೀನದ ಬಗ್ಗೆ ಪೂರ್ವಭಾವಿ ಮಾತುಕತೆ ಬಗ್ಗೆ ವರದಿ ಬಂದಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು, ಟಿಕ್‌ಟಾಕ್ ಬ್ಯಾನ್ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್ ಸೇವೆಯನ್ನು ಖರೀದಿಸಲು ಮೈಕ್ರೋಸಾಫ್ಟ್ ಎದುರು ನೋಡುತ್ತಿದೆ ಎಂಬ ಸುದ್ದಿ ಬಂದಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ ಟಾಕ್ ಕಂಪನಿಯನ್ನು ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು ಇಲ್ಲವೆ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ.

ಟಿಕ್‌ಟಾಕ್‌ ನಿಷೇಧಿಸುವುದಾಗಿ ಬೆದರಿಕೆ ಒಡ್ಡಿರುವ ಅಮೆರಿಕಾ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮಂಗಳವಾರ ಟ್ರಂಪ್ ವಿರುದ್ಧ ಮೊಕದ್ದಮೆ ದಾಖಲಿಸುವ ಸಾಧ್ಯತೆಯಿದೆ.

ಎರಡು ಸಂಸ್ಥೆಗಳ ವಿಲೀನದ ಮಾತುಕತೆ

ಎರಡು ಸಂಸ್ಥೆಗಳ ವಿಲೀನದ ಮಾತುಕತೆ

ಈಗ ಟಿಕ್ ಟಾಕ್ ಸಂಸ್ಥೆಯ ಅಮೆರಿಕ ವಿಭಾಗವನ್ನು ಖರೀದಿಸಲು ಫೇಸ್ಬುಕ್ ಒಡೆತನದ ಸ್ಯಾನ್ ಫ್ರಾನಿಸ್ಕೋ ಮೂಲದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮುಂದಾಗಿತ್ತು. ಎರಡು ಸಂಸ್ಥೆಗಳ ವಿಲೀನದ ಮಾತುಕತೆ ನಡೆದಿತ್ತು ಎಂಬ ಸುದ್ದಿ ಬಂದಿತ್ತು.

ಬೀಜಿಂಗ್ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಖರೀದಿಗೆ ಕೆಲ ವಾರಗಳಿಂದ ಮೈಕ್ರೋಸಾಫ್ಟ್ ಯತ್ನಿಸುತ್ತಿದೆ. ಈ ಕುರಿತಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಸ್ಥೆಯ ಸಿಇಒ ಸತ್ಯ ನಡೆಲ್ಲಾ ಮಾತುಕತೆ ನಡೆಸಿದ್ದಾರೆ.

ಟಿಕ್ ಟಾಕ್ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ

ಟಿಕ್ ಟಾಕ್ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ

ಆದರೆ, ಈ ಡೋ ಜೋನ್ಸ್ ವರದಿ ಬಗ್ಗೆ ಟಿಕ್ ಟಾಕ್ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ. ಸುಮಾರು 29 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಟ್ವಿಟ್ಟರ್ ಗೆ ಹೋಲಿಸಿದರ್ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿದ್ದು, 1.6 ಟ್ರಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಟಿಕ್ ಟಾಕ್ ಖರೀದಿಸಲು ಸಣ್ಣ ಕಂಪನಿಗಳಿಗೆ ಸಿಲ್ವರ್ ಲೇಕ್ ಹೂಡಿಕೆದಾರರು ನೆರವಾಗುವ ಸಾಧ್ಯತೆಯೂ ಇದೆ.

ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದೆ

ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದೆ

ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್‌(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕಾ ಕೈಗೊಂಡ ಕ್ರಮದ ಕುರಿತು ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಟಿಕ್‌ಟಾಕ್‌ ನಿಷೇಧಿಸುವುದಾಗಿ ಬೆದರಿಕೆ ಒಡ್ಡಿರುವ ಅಮೆರಿಕಾ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮಂಗಳವಾರ ಟ್ರಂಪ್ ವಿರುದ್ಧ ಮೊಕದ್ದಮೆ ದಾಖಲಿಸುವ ಸಾಧ್ಯತೆಯಿದೆ.

ವೀಚಾಟ್ ಜೊತೆಗೆ, ಟೆನ್ಸೆಂಟ್ ಸಹ ಪ್ರಮುಖ ಗೇಮಿಂಗ್ ಕಂಪನಿಯಾಗಿದೆ ಮತ್ತು ಅದರ ಹೂಡಿಕೆಗಳಲ್ಲಿ ಎಪಿಕ್ ಗೇಮ್ಸ್‌ನಲ್ಲಿ ಶೇ. 40ರಷ್ಟು ಪಾಲನ್ನು ಒಳಗೊಂಡಿದೆ. ಇದು ಅತ್ಯಂತ ಜನಪ್ರಿಯ ಫೋರ್ಟ್‌ನೈಟ್ ವಿಡಿಯೋ ಗೇಮ್‌ನ ಹಿಂದಿನ ಕಂಪನಿಯಾಗಿದೆ.

ಅಮೆರಿಕ ಅಲ್ಲದೆ ಇತರೆ ದೇಶಗಳಲ್ಲೂ ನಿಷೇಧ?

ಅಮೆರಿಕ ಅಲ್ಲದೆ ಇತರೆ ದೇಶಗಳಲ್ಲೂ ನಿಷೇಧ?

ಭವಿಷ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ಕೂಡ ಚೀನಾ ಆ್ಯಪ್‌ಗಳನ್ನ ಮನೆ ಕಳುಹಿಸಲು ಸಿದ್ಧತೆ ನಡೆಸಿವೆ. ಇದು ಕೇವಲ ಆ್ಯಪ್‌ಗಳಿಗೆ ಸೀಮಿತವಾಗಿರದೆ, ಚೀನಾ ಮೂಲದ ವಸ್ತುಗಳಿಗೂ ಅನ್ವಯಿಸುವ ಸಾಧ್ಯತೆ ಇದೆ. ಹೀಗಾಗಿ ಚೀನಾ ನಾಯಕರು ಕಂಗಾಲಾಗಿ ಹೋಗಿದ್ದಾರೆ. ಒಟ್ಟಾರೆ ಭಾರತ ಕೈಗೊಂಡ ಕ್ರಮ ವಿಶ್ವಕ್ಕೇ ಮಾದರಿಯಾಗುತ್ತಿದ್ದು, ಕಪಟಿ ಚೀನಾಗೆ ಬುದ್ಧಿ ಕಲಿಸಲು ಇಡೀ ಜಗತ್ತೇ ಒಂದಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+