ಟೋಟಲ್ ಕರ್ನಾಟಕ, ಕನ್ನಡದಲ್ಲಿರುವ ಏಕೈಕ ಅಂತರ್ಜಾಲ ಮಾರುಕಟ್ಟೆ

Posted By:
Subscribe to Oneindia Kannada

ಟೋಟಲ್ ಕರ್ನಾಟಕ.ಕಾಂ ಅಂತರ್ಜಾಲ ಮಾರಾಟ ಕೇಂದ್ರವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮವಲಯದ ಉದ್ದಿಮೆಗಳನ್ನು ಇ-ಕಾಮರ್ಸ್ ಮುಖ್ಯವಾಹಿನಿಗೆ ತರಲು ಸಹಾಯ ಹಸ್ತ ಚಾಚುತ್ತಿರುವುದು ಒಂದು ಶ್ಲಾಘನೀಯ ಪ್ರಯತ್ನವಾಗಿದೆ. ಟೋಟಲ್ ಕರ್ನಾಟಕ - ಕರ್ನಾಟಕದ ವಿಶಿಷ್ಟ ಉತ್ಪನ್ನಗಳಿಗಾಗಿ ಕನ್ನಡದಲ್ಲಿರುವ ಏಕೈಕ ಅಂತರ್ಜಾಲ ಮಾರುಕಟ್ಟೆ.

ಟೋಟಲ್ ಕರ್ನಾಟಕ ಕೇವಲ ಮಾರುವುದನ್ನೇ ಉದ್ದೆಶವಾಗಿಟ್ಟುಕೊಳ್ಳದ ಒಂದು ವಿಶಿಷ್ಟ ಅಂತರ್ಜಾಲ ಮಾರುಕಟ್ಟೆಯಾಗಿದೆ. ಆಂಗ್ಲ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಲಭ್ಯವಿರುವ ಏಕೈಕ ಮಾರುಕಟ್ಟೆ ಇದಾಗಿದ್ದು, ಕನ್ನಡ ಭಾಷೆಯ ಪದಗಳು 'ಗೂಗಲ್ ಟ್ರಾನ್ಸ್ಲೇಷನ್' ಆಗಿರದೇ ಕನ್ನಡ ಭಾಷೆ ಬಲ್ಲ ಸ್ಥಳೀಯ ಪರಿಣತರಿಂದ ಬರೆಯಲ್ಪಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ.

"ನಮಸ್ತೆ. ಕರ್ನಾಟಕದ ರಾಜ್ಯದ ವಿಶಿಷ್ಟ ಉತ್ಪನ್ನಗಳನ್ನು ನೀವು ಈಗ ಅಂತರ್ಜಾಲ ಮಾರುಕಟ್ಟೆಯಲ್ಲಿ ನೇರವಾಗಿ ಖರೀದಿಸಬಹುದು....." ಸಾಮಾಜಿಕ ಜಾಲತಾಣಗಳಲ್ಲಿ ಟೋಟಲ್ ಕರ್ನಾಟಕದ ಸಂಸ್ಥಾಪಕರು ಇಂತಹ ಅಂತರ್ಜಾಲ ಮಾರುಕಟ್ಟೆಯನ್ನು ಸ್ಥಾಪಿಸುವುದರ ಹಿಂದಿರುವ ಎರಡು ನಿಖರವಾದ ಉದ್ದೇಶಗಳನ್ನು ವಿವರಿಸಿದ್ದಾರೆ.

Total Karnataka : Online shop in Kannada

(ಅ) ಕರ್ನಾಟಕದಿಂದ ಜನಿತವಾದ ಉತ್ಪನ್ನ ಮತ್ತು ಸೇವಾಸೌಲಭ್ಯಗಳಿಗೆ ಅಂತರ್ಜಾಲದ ಮೂಲಕ ಮಾರಾಟದ ಸೌಲಭ್ಯ ಒದಗಿಸುವುದು.
(ಆ) ಕರ್ನಾಟಕದಿಂದ ಜನಿತವಾದ ಉತ್ಪನ್ನ ಮತ್ತು ಸೇವಾಸೌಲಭ್ಯಗಳನ್ನು ಬಯಸುವ, ಪ್ರಪಂಚದಾದ್ಯಂತ ಪಸರಿಸಿರುವ ಗ್ರಾಹಕರಿಗೆ ಅವನ್ನು ಅಂತರ್ಜಾಲದ ಮೂಲಕ ಒದಗಿಸುವುದು.

ಪ್ರಾರಂಭವಾಗಿದ್ದು ಹೇಗೆ? : ಟೋಟಲ್ ಕರ್ನಾಟಕ.ಕಾಂ ಅಂತರ್ಜಾಲ ಮಾರಾಟಕೇಂದ್ರವು "ಟೋಟ್ಯಾಲಿಟಿ ಸಲ್ಯೂಶನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಪ್ರಾರಂಭಿಸಿದ ಜಾಲತಾಣವಾಗಿದೆ. ಪರಸ್ಪರ ಪೂರಕವಾದ ಸಾಮರ್ಥ್ಯವಿರುವ ಸಮಾನ ಮನಸ್ಕರೀರ್ವರ ಚಿಂತನೆಯಿಂದ ಇದು ಪ್ರಾರಂಭಗೊಂಡಿದೆ.

Total Karnataka : Online shop in Kannada

ಮೂರು ದಶಕಕ್ಕೂ ಹೆಚ್ಚು ಕಾಲ ಇನ್ಫೋಸಿಸ್, ಎಲ್ ಅಂಡ್ ಟಿ, ರಾಂಕೋ ಸಿಸ್ಟಮ್ಸ್ ನಂತಹ ಹೆಸರುವಾಸಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ಠಳೀಯ ಉತ್ಪಾದಕರು ಮತ್ತು ಎಲ್ಲೆಡೆ ಇರುವ ಗ್ರಾಹಕರ ನಡುವಿನ ಕಂದಕವನ್ನು ಬಂಧಮಾಡುವ ದೂರದರ್ಶಿತ್ವವನ್ನು ಹೊಂದಿ, ಸ್ಟಾರ್ಟ್ ಅಪ್ ಕಂಪೆನಿಗಳಿಗೆ ತರಬೇತಿ ನೀಡುತ್ತಿರುವ ಚಂದ್ರಶೇಖರ ಕಾಕಾಲ್ ಮತ್ತು ಟೋಟಲ್ ಕನ್ನಡ ಪುಸ್ತಕ ಮಳಿಗೆಯ ಮೂಲಕ ಕನ್ನಡಿಗರಿಗೆ ಈಗಾಗಲೇ ಚಿರಪರಿಚಿತರಾಗಿರುವ ಲಕ್ಷ್ಮೀಕಾಂತ್ ಅವರೇ ಈ ಸಂಸ್ಥೆಯ ಮುಂಚೂಣಿಯಲ್ಲಿರುತ್ತಾರೆ.

ವಿಭಾಗಗಳು : ಸದ್ಯಕ್ಕೆ ಟೋಟಲ್ ಕರ್ನಾಟಕ ಅಂತರ್ಜಾಲ ಮಾರಾಟಕೇಂದ್ರದಲ್ಲಿ ಕೆಲವೇ ವಿಭಾಗಗಳಿವೆ. ಟೆರ್ರಾಕೋಟ ಆಭರಣಗಳು, ಬ್ಲಾಕ್ ಪ್ರಿಂಟಿಂಗ್ ಮಾಡಿದ ಹತ್ತಿ ಬಟ್ಟೆಯ ವಸ್ತುಗಳು, ವಿಶೇಷ ತಯಾರಿಕೆಯ ಮಲೆನಾಡಿನ ಉಪ್ಪಿನಕಾಯಿಗಳು, ಚನ್ನಪಟ್ಟಣದ ಗೊಂಬೆಗಳು, ಮೈಸೂರಿನ ಕರಕುಶಲ ವಸ್ತುಗಳು, ಕನ್ನಡ ಪುಸ್ತಕಗಳು ಇತ್ಯಾದಿ ಈಗ ಲಭ್ಯವಿವೆ.

ಎಲ್ಲಾ ಉತ್ಪನ್ನಗಳನ್ನೂ 4 ಕಾಲಂಗಳಲ್ಲಿ ಸುಂದರವಾಗಿ ಅವುಗಳಿಗೆ ಸಂಬಂಧಿಸಿದ ಉಪವಿಭಾಗಗಳಲ್ಲಿ ಪ್ರದರ್ಶಿಸಲಾಗಿದೆ. ಉತ್ಪನ್ನಗಳನ್ನು ಆವುಗಳ ಬೆಲೆಯ ಮೇಲೆ ಅಥವಾ ಇತರ ಗುಣಲಕ್ಷಣಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ಜೋಡಿಸಿಕೊಂಡು ವೀಕ್ಷಿಸಬಹುದಾಗಿದೆ.

ಕಂಪೆನಿಯ ಮೂಲ ಉದ್ದೇಶದ ಪ್ರಕಾರ ಹೆಚ್ಚಿನ ಉತ್ಪನ್ನಗಳು ಗ್ರಾಮೀಣ ಪ್ರದೇಶದ ಸಣ್ಣ ಉದ್ದಿಮೆಗಳಿಂದ ಮತ್ತು ಸ್ತ್ರೀಯರ ಸ್ವಸಹಾಯ ಮಂಡಳಿಗಳಿಂದ ತಯಾರಾದವುಗಳಾಗಿವೆ. ಉದಾಹರಣೆಗೆ, ಟೆರ್ರಾಕೋಟ ಆಭರಣಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಒಂದು ಸ್ವಸಹಾಯ ಮಂಡಳಿಯಿಂದ ತಯಾರಾಗುತ್ತಿದ್ದು, ನೇರವಾಗಿ ಅಲ್ಲಿಂದಲೇ ಅಥವಾ ಅವರ ಬೆಂಗಳೂರಿನ ಮಳಿಗೆಯಿಂದ ರವಾನೆಯಾಗುತ್ತದೆ.

Total Karnataka : Online shop in Kannada

ಅಂತೆಯೇ ಇತ್ತೀಚೆಗೆ ಪ್ರಪಂಚಾದ್ಯಂತ ಪ್ರಸಿದ್ಧಿಯಾಗಿರುವ ಚನ್ನಪಟ್ಟಣದ ಗೊಂಬೆಗಳು, ಚನ್ನಪಟ್ಟಣದ ಹಲವಾರು ಕಲಾಕಾರರ ಅಸಂಘಟಿತ ಕುಟುಂಬಗಳಿಂದ ತಯಾರಾಗುತ್ತವೆ. ಕೆಲವು ಕಲಾಕಾರರನ್ನು ಪೋಷಿಸುತ್ತಿರುವ ಕುಟುಂಬದ ಯಜಮಾನನು ಅಂತರ್ಜಾಲದ ಮೂಲಕ ತಮ್ಮ ಉತ್ಪನ್ನಗಳನ್ನು ಎಲ್ಲೆಡೆಗೂ ತಲುಪಿಸುವುದು ಟೋಟಲ್ ಕರ್ನಾಟಕ.ಕಾಂ ಮೂಲಕ ಈಗ ಸಾಧ್ಯವಾಗುತ್ತದೆ.

ಭವಿಷ್ಯದ ಯೋಜನೆಗಳು :
ಸದ್ಯಕ್ಕೆ ಟೋಟಲ್ ಕರ್ನಾಟಕ.ಕಾಂ ಅಂತರ್ಜಾಲ ಮಾರುಕಟ್ಟೆಯಲ್ಲಿ ಸುನಾರು 500 ಉತ್ಪನ್ನಗಳಿದ್ದು, 10-12 ಉದ್ದಿಮೆದಾರರನ್ನು ಸಕ್ರಿಯಗೊಳಿಸಲಾಗಿದೆ. ಓದಲೇಬೇಕಾದ ಕನ್ನಡ ಪುಸ್ತಕಗಳಲ್ಲಿ ಕೆಲವು ಮಾತ್ರ ಈಗ ಲಭ್ಯವಿದ್ದು, ಇನ್ನೂ ಸಾವಿರಾರು ಪುಸ್ತಕಗಳನ್ನು ಸೇರಿಸುವ ಪ್ರಕ್ರಿಯೆ ಮುಂದುವರಿಯುತ್ತಿದೆ.

ಟೋಟಲ್ ಕರ್ನಾಟಕ.ಕಾಂ ಅಂತರ್ಜಾಲ ಮಾರುಕಟ್ಟೆಯಲ್ಲಿ ತಮ್ಮನ್ನೂ ಸಕ್ರಿಯಗೊಳಿಸುವಂತೆ ಕೋರಿ ಸಣ್ಣ ಉದ್ದಿಮೆದಾರರಿಂದ ಮತ್ತು ಹಲವು ಪ್ರಕಾಶಕರಿಂದ ಈಗಾಗಲೇ ಕೋರಿಕೆಗಳು ಬರಲಾರಂಭಿಸಿವೆ. ಇನ್ನೊಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಉದ್ದಿಮೆಗಳನ್ನು ಹಾಗೂ ಎಲ್ಲಾ ಕನ್ನಡ ಪುಸ್ತಕ ಮತ್ತು ಸಿನೆಮಾಗಳನ್ನು ಸೇರಿ 20,000ಕ್ಕೂ ಹೆಚ್ಚು ಪದಾರ್ಥಗಳನ್ನು ಈ ಅಂತರ್ಜಾಲ ಮಾರುಕಟ್ಟೆಯ ಮೂಲಕ ಒದಗಿಸುವ ಉದ್ದೇಶವನ್ನು ಟೋಟಲ್ ಕರ್ನಾಟಕ ಹೊಂದಿದೆ.

ವಿಳಾಸ :

ಟೋಟಲ್ ಕರ್ನಾಟಕ,
ನಂ.9, 1ನೇ ಮುಖ್ಯ ರಸ್ತೆ, 1ನೇ ಅಡ್ಡ ರಸ್ತೆ,
ಸಂತೃಪ್ತಿನಗರ, ಕೊತ್ತನೂರು ದಿನ್ನೆ ಮುಖ್ಯರಸ್ತೆ
(ಕಾಕಾಲ್ ಕೈ ರುಚಿ ಹೋಟೆಲ್ ಹಿಂಬಾಗ)
ಜೆ. ಪಿ. ನಗರ 7ನೇ ಹಂತ,
ಬೆಂಗಳೂರು - 560072

ದೂರವಾಣಿ : +91 080 4952 1123
ಈಮೇಲ್ : support@totalkarnataka.com
ವೆಬ್ ಸೈಟ್ ವಿಳಾಸ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Total Karnataka, an e-commerce platform of Totality Solutions India Private Limited was started with two clear objectives in mind. The Kannada online shop is started by Chandrashekar Kakal and Lakshmikanth, passionate about Kannada and Karnataka.
Please Wait while comments are loading...