3,000 ರೂಪಾಯಿ ಗಡಿ ದಾಟಿದ ಟಿಸಿಎಸ್ ಷೇರು: ಹೂಡಿಕೆದಾರರಿಗೆ ಹಬ್ಬ!

ನವದೆಹಲಿ, ಜನವರಿ 04: ಭಾರತೀಯ ಷೇರುಪೇಟೆಯು ಇಂದು ಹೊಸ ದಾಖಲೆಯ ಹಂತಕ್ಕೆ ತಲುಪಿದ್ದು, ಬಿಎಸ್‌ಇ ಮತ್ತು ಎನ್‌ಎಸ್‌ಇ ಹೊಸ ಮಟ್ಟವನ್ನು ದಾಖಲಿಸಿದೆ. ಇದರ ನಡುವೆ ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್‌) ಷೇರುಗಳ ಬೆಲೆ ಸೋಮವಾರ 52 ವಾರಗಳ ಗರಿಷ್ಠ ಹಂತಕ್ಕೆ ತಲುಪಿದ್ದು, 3,000 ರೂಪಾಯಿ ಗಡಿ ದಾಟಿದೆ.

ಕಂಪನಿಯು ತನ್ನ ಮೂರನೇ ತ್ರೈಮಾಸಿಕ ಲಾಭ-ನಷ್ಟ ಪ್ರಮಾಣದ ಅಂಕಿ-ಅಂಶಗಳನ್ನು ಜನವರಿ 8 ರಂದು ಪ್ರಕಟಿಸಲಿದೆ. ಹೀಗಾಗಿ ಷೇರು ಬೆಲೆ ಶೇಕಡಾ 3ಕ್ಕಿಂತ ಹೆಚ್ಚಿನದನ್ನು ಗಳಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿಯಲ್ಲಿ ಅತ್ಯಂತ ಹೆಚ್ಚು ಲಾಭಗಳಿಸಿದೆ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದ ಮೌಲ್ಯ 1,136,109.52 ಕೋಟಿ ರೂಪಾಯಿಗೆ ತಲುಪಿದೆ.

ಬ್ರೋಕಿಂಗ್ ಹೌಸ್ ಪ್ರಕಾರ ನಿರಂತರ ಒಪ್ಪಂದಗಳ ಗೆಲುವು ಮತ್ತು ಡಿಜಿಟಲ್ ಖರ್ಚಿನಲ್ಲಿ ಇಳಿಕೆ ಹಾಗೂ ಉತ್ತಮ ಆದಾಯದ ಮೂಲಕ ಐಟಿ ಸೇವಾ ಕಂಪನಿಗಳು ದೃಢವಾದ ತ್ರೈಮಾಸಿಕವನ್ನು ಪ್ರಕಟಿಸಬಹುದು ಎಂದು ನಂಬಲಾಗಿದೆ.

TCS Share Price Crosses Rs 3000 Mark: Stock Hit 52 Week High

ಡಾಯ್ಚ ಮತ್ತು ಪ್ರುಡೆನ್ಶಿಯಲ್ ಫೈನಾನ್ಷಿಯಲ್ ಒಪ್ಪಂದಗಳ ಗೆಲುವುಗಳಿಂದಾಗಿ ಟಿಸಿಎಸ್ ಬಲವಾದ ತ್ರೈಮಾಸಿಕ ಲಾಭವನ್ನು ಪ್ರಕಟಿಸಬಹುದು ಎನ್ನಲಾಗಿದೆ.

ಬಿಎಸ್‌ಇ ಐಟಿ ಸೂಚ್ಯಂಕವು 2 ಪ್ರತಿಶತದಷ್ಟು ಏರಿಕೆ ದಾಖಲಿಸಿದ್ದು, ರಾಮ್ಕೊ ಸಿಸ್ಟಮ್ಸ್, ಜೆನ್ ಟೆಕ್ನಾಲಜೀಸ್, 3ಐ ಇನ್ಫೋಟೆಕ್ ಮತ್ತು ಟ್ರಿಜಿನ್ ಏರಿಕೆ ದಾಖಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+