ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!
ಬೆಂಗಳೂರು, ಮಾರ್ಚ್ 1: ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಹಾಗೂ ಮನೆ ಕಟ್ಟಲು ಸಾಲ, ಆರ್ಥಿಕ ನೆರವು ನೀಡುವ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ.
ಗೃಹ ಸಾಲದ ಮೇಲಿನ ಬಡ್ಡಿ ದರಗಳನ್ನು ಮಾರ್ಚ್ 31ರವರೆಗೆ ಇಳಿಕೆ ಮಾಡಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇಕಡಾ 6.70ರಿಂದ ಪ್ರಾರಂಭವಾಗಲಿದೆ. 70 ಬೇಸಿಸ್ ಪಾಯಿಂಟ್‌ಗಳ (ಶೇ 0.70) ರಿಯಾಯಿತಿಯನ್ನು ಎಸ್ಬಿಐ ನೀಡುತ್ತಿದೆ. ಇದಲ್ಲದೆ, ಪ್ರೊಸೆಸಿಂಗ್ ಶುಲ್ಕವನ್ನು ಶೇಕಡಾ 100ರಷ್ಟು ಮನ್ನಾ ಮಾಡಲಾಗುತ್ತಿದೆ.
ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಲು ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಎಸ್ಬಿಐ ಹೇಳಿದೆ.

ಜೊತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನದಂದು ಮಹಿಳಾ ಸಾಲಗಾರರಿಗೆ ವಿಶೇಷ 5 ಬಿಪಿಎಸ್ ರಿಯಾಯಿತಿ ನೀಡಲಾಗುತ್ತಿದೆ, ಈ ರೀತಿ ಸೌಲಭ್ಯಗಳ ಬಳಕೆ ಹೆಚ್ಚಿದ್ದಂತೆ ಇಎಂಐ ಕೂಡಾ ತಗ್ಗಲಿದೆ ಎಮುದ್ ಡಿಎಂಡಿ ಸಲೋನಿ ನಾರಾಯಣನ್ ಹೇಳಿದ್ದಾರೆ.
75 ಲಕ್ಷ ರು ತನಕದ ಸಾಲಕ್ಕೆ ಶೇ 6.7 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ. ಗ್ರಾಹಕರು ಯೋನೋ ಆಪ್ ಬಳಸಿಕೊಂಡು ಬಡ್ಡಿದರ ರಿಯಾಯಿತಿ ಪಡೆದುಕೊಳ್ಳಬಹುದು. ಡಿಸೆಂಬರ್ 31, 2020ಕ್ಕೆ 5 ಲಕ್ಷ ಕೋಟಿ ಗೂ ಅಧಿಕ ಸಾಲ ವಿತರಿಸಿದ ಸಾಧನೆಯನ್ನು ಎಸ್ಬಿಐ ದಾಖಲಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications