Stock Market: ₹1 ಲಕ್ಷ ಹೂಡಿಕೆ ಮಾಡಿದವರಿಗೆ 10 ವರ್ಷದಲ್ಲಿ ₹1 ಕೋಟಿ ಲಾಭ ಕೊಟ್ಟ ಷೇರು ಇದು!

ಷೇರು ಮಾರುಕಟ್ಟೆ ಎನ್ನುವುದು ಒಂದು ಜೂಜು ಎನ್ನುವ ಹೇಳಿಕೆ ಇದ್ದರು, ಸರಿಯಾಗಿ ತಿಳಿದುಕೊಂಡು ದೀರ್ಘಕಾಲದ ದೃಷ್ಟಿಯಿಂದ ಹೂಡಿಕೆ ಮಾಡಿ ಕೋಟಿಗಟ್ಟಲೆ ಹಣ ಮಾಡುವವರು ಇದ್ದಾರೆ. ಇದೊಂದು ಷೇರು ಲಕ್ಷಾಧಿಪತಿಗಳಾಗಿದ್ದ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದೆ.

ಶೀತಕ ಅನಿಲ (Refrigerant gas) ತಯಾರಿಕಾ ಕಂಪನಿ ರಿಫೆಕ್ಸ್ ಇಂಡಸ್ಟ್ರೀಸ್‌ನ ಷೇರುಗಳು ಕಳೆದ 10 ವರ್ಷಗಳಲ್ಲಿ 11,000% ಆದಾಯವನ್ನು ನೀಡಿವೆ. 10 ವರ್ಷಗಳ ಹಿಂದೆ ಪ್ರತಿ ಷೇರಿ ಬೆಲೆ ಸುಮಾರು ₹ 1.37 ಇದ್ದರೆ ಈಗ ಪ್ರತಿ ಷೇರಿನ ಬೆಲೆ ₹ 152.15 ಕ್ಕೆ ಏರಿದೆ.

Share market Refex Industries Stock Soars with 11 000 Decade Returns

10 ವರ್ಷಗಳ ಹಿಂದೆ ಯಾರಾದರೂ ಈ ಷೇರುಗಳ ಮೇಲೆ ಸುಮಾರು ₹ 1 ಲಕ್ಷ ಹೂಡಿಕೆ ಮಾಡಿದ್ದರೆ, ಈಗ ಅದರ ಮೊತ್ತ ₹ 1 ಕೋಟಿಗಿಂತ ಹೆಚ್ಚಾಗಿರುತ್ತಿತ್ತು. ಈ ಮೊದಲು ರಿಫೆಕ್ಸ್ ರೆಫ್ರಿಜರೆಂಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ ರಿಫೆಕ್ಸ್ ಇಂಡಸ್ಟ್ರೀಸ್ ಅನ್ನು 2002 ರಲ್ಲಿ ಸ್ಥಾಪನೆ ಮಾಡಲಾಯಿತು.

ಈ ಕಂಪನಿ ಓಝೋನ್ ಅಲ್ಲದ ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಮತ್ತು ಶೈತ್ಯೀಕರಣ ಸಾಧನಗಳಲ್ಲಿ ಬಳಸಲಾಗುವ ಹೈಡ್ರೋಫ್ಲೋರೋಕಾರ್ಬನ್‌ಗಳನ್ನು ಮರುಪೂರಣ ಮಾಡುವ ವ್ಯವಹಾರದಲ್ಲಿ ತೊಡಗಿತ್ತು.

2007ರಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆ

ರಿಫೆಕ್ಸ್ ಇಂಡಸ್ಟ್ರೀಸ್ ಜುಲೈ 2007 ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿತು. ಬಿಎಸ್‌ಇನಲ್ಲಿ ಪಟ್ಟಿಮಾಡಲ್ಪಟ್ಟಿತು. ಮಾರ್ಚ್ 31, 2007 ರ ವೇಳೆಗೆ ಕಂಪನಿಯ ಒಟ್ಟು ವಹಿವಾಟು ₹ 51.41 ಕೋಟಿ ಆಗಿತ್ತು.

ಕಂಪನಿಯು 2018 ರಲ್ಲಿ ಥರ್ಮಲ್ ಪವರ್ ಪ್ಲಾಂಟ್‌ಗಳಿಗೆ ಹಾರುಬೂದಿ (fly ash) ಮತ್ತು ಕಲ್ಲಿದ್ದಲು ನಿರ್ವಹಣೆ ಸೇವೆಗಳಲ್ಲಿ ತೊಡಗಿತು. ಬಳಿಕ ಸ್ಟಾಕ್ ಬೆಲೆಯು ಸುಮಾರು 21 ಪಟ್ಟು ಬೆಳೆದು ಪ್ರತಿ ಷೇರಿಗೆ ₹30 ಕ್ಕೆ ತಲುಪಿತು.

ಕಳೆದ 10 ವರ್ಷಗಳಲ್ಲಿ ಸುಮಾರು 11,000% ನಷ್ಟು ಆದಾಯವನ್ನು ನೀಡಿದ ಕಂಪನಿಗೆ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಪರಿಸರ ಸ್ನೇಹಿ ಹೈಡ್ರೋಫ್ಲೋರೋಕಾರ್ಬನ್‌ಗಳು ಅಥವಾ ಎಚ್‌ಎಫ್‌ಸಿ ಶೀತಕ ಅನಿಲಗಳ ಪ್ರಮುಖ ಪೂರೈಕೆದಾರರಾಗಿ ಹೊರಹೊಮ್ಮಿದೆ.

ರಿಫೆಕ್ಸ್ ಇಂಡಸ್ಟ್ರೀಸ್ ಪ್ರಸ್ತುತ ಚೆನ್ನೈ ಮತ್ತು ತಮಿಳುನಾಡಿನಲ್ಲಿ ಮರುಪೂರಣ ಸೌಲಭ್ಯಗಳನ್ನು ನಿರ್ವಹಿಸುತ್ತಿದೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಗೋದಾಮುಗಳನ್ನು ಹೊಂದಿದೆ.

ಕಂಪನಿಯು 2023-24 ರ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ₹345.7 ಕೋಟಿ ಆದಾಯವನ್ನು ವರದಿ ಮಾಡಿದೆ ಮತ್ತು ಪೂರ್ಣ ಹಣಕಾಸು ವರ್ಷದ ಆದಾಯ ₹ 1,388.84 ಕೋಟಿ ಆಗಿತ್ತು. ರೆಫೆಕ್ಸ್ ಇಂಡಸ್ಟ್ರೀಸ್‌ನ ಪ್ರವರ್ತಕರು ಬಹುಪಾಲು 55.3% ಪಾಲನ್ನು ಹೊಂದಿದ್ದಾರೆ ಮತ್ತು ಸಾರ್ವಜನಿಕ ಷೇರುದಾರರು 44.7% ಹೊಂದಿದ್ದಾರೆ.

ಷೇರು ಮಾರುಕಟ್ಟೆ ಎನ್ನುವುದು ಎಷ್ಟು ಹೆಚ್ಚು ಲಾಭ ಕೊಡುತ್ತದೋ ಅಷ್ಟೇ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡುವ ಅಪಾಯ ಹೊಂದಿದೆ. ಆದ್ದರಿಂದ ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ಷೇರುಗಳ ಬಗ್ಗೆ, ಮಾರುಕಟ್ಟೆ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿರುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+