ಬ್ರೆಕ್ಸಿಟ್ ಎಫೆಕ್ಟ್: ಸಾವಿರ ಅಂಕ ಕಳೆದುಕೊಂಡ ಸೆನ್ಸೆಕ್ಸ್

Written By:
Subscribe to Oneindia Kannada

ಮುಂಬೈ, ಜೂನ್ 24: ಬ್ರಿಟಿಷ್ ಮಾರುಕಟ್ಟೆಯಲ್ಲಿನ ಮಹಾಪತನ ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಶುಕ್ರವಾರ ಬೆಳಗ್ಗೆಯೇ ಸೆನ್ಸೆಕ್ಸ್ 900 ಅಂಕ ಕಳೆದುಕೊಂಡರೆ, ನಿಫ್ಟಿ 300 ಅಂಕ ನಷ್ಟ ಮಾಡಿಕೊಂಡಿದೆ.

ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಇರಬೇಕೆ ಅಥವಾ ಬೇಡವೆ ಎ೦ಬ ಎದ್ದಿರುವ ವಾದದ ಪರಿಣಾಮ ಭಾರತದ ಮೇಲೂ ಆಗಿದೆ. ಇನ್ನೊಂದೆಡೆ ಬ್ರಿಟನ್ ಪೌಂಡ್ಸ್ ಡಾಲರ್ ಎದುರು 1.3642ಕ್ಕೆ ಕುಸಿದಿದೆ. ಇದು ಬ್ರಿಟೀಷ್ ಷೇರುಮಾರುಕಟ್ಟೆ ಇತಿಹಾಸದಲ್ಲೇ 31ವರ್ಷಗಳಲ್ಲೇ ಕನಿಷ್ಠ ದರ![ಚಿನ್ನದ ದರ 30 ಸಾವಿರ ತಲುಪಲು ಕಾರಣವೇನು?]

sensex

ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶವನ್ನು ಪ್ರಾ೦ತ್ಯವಾರು ಮಾದರಿಯಲ್ಲಿ ಘೋಷಣೆ ಮಾಡಲಾಗುತ್ತಿದ್ದು, ಶುಕ್ರವಾರ ಸ೦ಜೆಯ ಹೊತ್ತಿಗೆ ಪ್ರಕಟವಾಗಲಿದೆ. ಬ್ರೆಕ್ಸಿಟ್ ಚುನಾವಣೆಯಲ್ಲಿ ಸುಮಾರು 4.65 ಕೋಟಿ ಜನರು ಮತದಾನ ಮಾಡಿದ್ದಾರೆ.

ಷೇರು ಮಾರುಕಟ್ಟೆ ನೋಡಿ

ಯಾವ ಪ್ರಶ್ನೆ?
ಮತಪತ್ರದಲ್ಲಿ ಕೇವಲ ಒ೦ದೇ ಪ್ರಶ್ನೆಯಿತ್ತು. ಐರೋಪ್ಯ ಒಕ್ಕೂಟದಲ್ಲೇ ಯುನೈಟೆಡ್ ಕಿ೦ಗ್‍ಡಮ್ ಇರಬೇಕೆ ಅಥವಾ ಹೊರ ಹೋಗಬೇಕೆ ಎ೦ಬ ಪ್ರಶ್ನೆಯನ್ನು ಕೇಳಲಾಗಿತ್ತು. ಅರ್ಧಕ್ಕಿ೦ತ ಹೆಚ್ಚು ಮತಗಳನ್ನು ಪಡೆದ ಅಭಿಪ್ರಾಯಕ್ಕೆ ಮಣೆ ಹಾಕಲಾಗುತ್ತದೆ.[ಹಿಂದೆಯೂ ಮಹಾಪತನ ಕಂಡಿದ್ದ ಮಾರುಕಟ್ಟೆ]

ಬ್ರಿಟನ್ ನಲ್ಲಿನ ಈ ತಲ್ಲಣ ಭಾರತದ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು ಬಂಡವಾಳ ಹೂಡಿಕೆದಾರರು ಬೆಳಗ್ಗೆಯಿಂದಲೇ ನಿರಾಸಕ್ತಿ ತೋರಿಸಿದರು. ಜತೆಗೆ ಬಮಡವಾಳ ಹಿಂತೆಗೆತಕ್ಕೂ ಮುಂದಾಗಿದ್ದು ಮಹಾ ಕುಸಿತಕ್ಕೆ ಕಾರಣವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Benchmark indices fell sharply in trade as indications of a referendum in the UK to stay or exit the Eurozone have pointed to a Brexit. In fact, as we write the BBC has callled the referendum in favour of an exit, which means the UK would not be a part of the European Union.
Please Wait while comments are loading...