• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1.47 ಲಕ್ಷ ಕೋಟಿ ರು ಬಾಕಿ ಮೊತ್ತ ಕ್ಲಿಯರ್ ಮಾಡಿ : ಸುಪ್ರೀಂಕೋರ್ಟ್

|

ನವದೆಹಲಿ, ಜನವರಿ 17: ತೆರಿಗೆ, ದಂಡ ಮತ್ತು ಬಡ್ಡಿ ಸೇರಿದಂತೆ 92,000 ಕೋಟಿ ರೂಪಾಯಿ ಬಾಕಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುವಂತೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ ನೀಡಿದ್ದ ಸೂಚನೆ ಮರುಪರಿಶೀಲನೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಭಾರ್ತಿ ಏರ್ ಟೆಲ್ ಹಾಗೂ ವೋಡಾಫೋನ್ ಐಡಿಯಾ ಸಂಸ್ಥೆಗಳಿಗೆ ಜನವರಿ 23ರೊಳಗೆ 1.47 ಲಕ್ಷ ಕೋಟಿ ರು ಪಾವತಿಸುವಂತೆ ಸೂಚಿಸಿದೆ.

ರಿಲಯನ್ಸ್ ಜಿಯೋ ''2020 ಹ್ಯಾಪಿ ನ್ಯೂ ಇಯರ್ ಆಫರ್''

ನ್ಯಾಯಮೂರ್ತಿ ಅರುಣ್ ಮಿಶ್ರಾ, ಎಸ್ಎ ನಜೀರ್ ಹಾಗೂ ಎಂ. ಆರ್ ಶಾ ನೇತೃತ್ವದ ನ್ಯಾಯಪೀಠವು, ಮರು ಪರಿಶೀಲನೆಗೆ ಬೇಕಾದ ಅಗತ್ಯ ಮೆರಿಟ್ ಕಂಡು ಬಂದಿಲ್ಲ ಎಂದು ಹೇಳಿದ್ದಲ್ಲದೆ, ಓಪನ್ ಕೋರ್ಟ್ (ಬಹಿರಂಗ ನ್ಯಾಯಾಲಯ) ಪ್ರಕ್ರಿಯೆಯನ್ನು ಬದಿಗೊತ್ತಿ, ಇನ್ ಚೇಂಬರ್ ವಿಚಾರಣೆಯನ್ನೇ ನಡೆಸಿದೆ. ಎಜಿಆರ್ ಲೆಕ್ಕಾಚಾರ ಸರಿಯಾಗಿದ್ದು,ಅಕ್ಟೋಬರ್ 24ರಂದು ನೀಡಿದ್ದ ಅದೇಶದಂತೆ ಬಾಕಿಮೊತ್ತ ಪಾವತಿಸಲು ಸೂಚಿಸಿದೆ.

ಟೆಲಿಕಾಂ ಇಲಾಖೆ ಲೆಕ್ಕ ಒಪ್ಪದ ಸಂಸ್ಥೆಗಳು

ಟೆಲಿಕಾಂ ಇಲಾಖೆ ಲೆಕ್ಕ ಒಪ್ಪದ ಸಂಸ್ಥೆಗಳು

ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸುಮಾರು 92,000 ಕೋಟಿ ರೂ ಎಂದು ದೂರಸಂಪರ್ಕ ಇಲಾಖೆಯು ಅಂದಾಜಿಸಿತ್ತು. ಅದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಟೆಲಿಕಾಂ ಸಂಸ್ಥೆಗಳು ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆಯಾಗಬೇಕಿದೆ ಎಂದು ಮನವಿ ಮಾಡಿಕೊಂಡಿದ್ದವು.

ಒಟ್ಟು ಬಾಕಿ ಮೊತ್ತ ಎಷ್ಟು?

ಒಟ್ಟು ಬಾಕಿ ಮೊತ್ತ ಎಷ್ಟು?

ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಭಾರ್ತಿ ಏರ್ ಟೆಲ್, ವೋಡಾಫೋನ್, ರಿಲಯನ್ಸ್ ಕಮ್ಯೂನಿಕೇಷನ್ ಒಟ್ಟು 92,642 ಕೋಟಿ ರು ಪರವಾನಗಿ ಶುಲ್ಕ, 55,054 ಕೋಟಿ ರು ಸ್ಪೆಕ್ಟ್ರಂ ಬಳಕೆ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ ಎಂದಿದ್ದಾರೆ.

ಒಟ್ಟು ಆದಾಯ (ಎಡಿಆರ್) ವ್ಯಾಖ್ಯಾನ

ಒಟ್ಟು ಆದಾಯ (ಎಡಿಆರ್) ವ್ಯಾಖ್ಯಾನ

ಸರ್ಕಾರಕ್ಕೆ ಸಲ್ಲಿಸುವ ತರಂಗಾಂತರ ಶುಲ್ಕ ಮತ್ತು ಪರವಾನಗಿ ಶುಲ್ಕ ಎರಡಕ್ಕೂ ಮೂಲ ನಿಗದಿ ಮಾಡುವ ಹೊಂದಾಣಿಕೆಯ ಒಟ್ಟು ಆದಾಯ (ಎಡಿಆರ್) ವ್ಯಾಖ್ಯಾನಕ್ಕೆ ದೂರಸಂಪರ್ಕ ಕಂಪೆನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಸೇವೆಯಿಂದ ದೊರಕುವ ಆದಾಯಗಳಾಚೆ ಡಿವಿಡೆಂಟ್, ಹ್ಯಾಂಡ್‌ಸೆಟ್ ಮಾರಾಟ, ಬಾಡಿಗೆ ಮತ್ತು ಚಿಂದಿಗಳ ಮಾರಾಟವನ್ನು ಕೂಡ ಎಡಿಆರ್ ಒಳಗೊಂಡಿರಬೇಕು ಎಂದು ಇಲಾಖೆ ವಾದಿಸಿತ್ತು. ಇಲಾಖೆ ಪ್ರಸ್ತಾಪಿಸಿರುವ ಹೆಚ್ಚಿನ ವಸ್ತುಗಳು ಸರ್ಕಾರದ ಎಡಿಆರ್ ವ್ಯಾಖ್ಯಾನದ ಅಡಿಯೇ ಬರುವುದರಿಂದ ಕಂಪೆನಿಗಳು ಈ ಮೊತ್ತ ಪಾವತಿ ಮಾಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ

ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ

ದೂರಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೂರಸಂಪರ್ಕ ಕಂಪೆನಿಗಳಾದ ಭಾರ್ತಿ ಏರ್‌ಟೆಲ್ 21,682.13 ಕೋಟಿ ರೂ., ವೊಡಾಫೋನ್ ಐಡಿಯಾ 19,823.71, ಕೋಟಿ ರೂ. ಮತ್ತು ರಿಲಯನ್ಸ್ ಕಮ್ಯುನಿಕೇಷನ್ 16,456.47 ಕೋಟಿ ರೂ. ಪಾವತಿ ಮಾಡಬೇಕಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 2098 ಕೋಟಿ ರು, ಎಂಟಿಎನ್ಎಲ್ 2537 ಕೋಟಿ ರು ಬಾಕಿ ಉಳಿಸಿಕೊಂಡಿದೆ.

English summary
The Supreme Court on Thursday dismissed review petitions of top telecom firms including Bharti Airtel and Vodafone Idea seeking review of its earlier order asking them to pay Rs 1.47 lakh crore in past statutory dues by January 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X