ಎಸ್ ಬಿಐನಿಂದ ಐಎಂಪಿಎಸ್ ಸೇವೆ ಸಂಪೂರ್ಣ ಉಚಿತ!

ಬೆಂಗಳೂರು, ಜುಲೈ 12: ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ತನ್ನ ಗ್ರಾಹಕರಿಗೆ ಮತ್ತೊಮ್ಮೆ ಶುಭ ಸುದ್ದಿ ಕೊಟ್ಟಿದೆ. ಆಗಸ್ಟ್ 01, 2019ರಿಂದ ಐಎಂಪಿಎಸ್ ಸೇವೆ ಸಂಪೂರ್ಣ ಉಚಿತ ಎಂದು ಪ್ರಕಟಿಸಿದೆ.

ಇದಕ್ಕೂ ಮುನ್ನ ಜುಲೈ 01ರಂದು ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಶುಲ್ಕವನ್ನು ಎಸ್ ಬಿಐ ರದ್ದುಗೊಳಿಸಿತ್ತು. ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಐಎಂಪಿಎಸ್ ಮುಂತಾದ ಆನ್ಲೈನ್ ವಹಿವಾಟಿನ ಶುಲ್ಕವನ್ನು ಆರ್ ಬಿಐ ತೆಗೆಯಲು ಸೂಚಿಸುತ್ತಿದ್ದಮ್ತೆ, ಎಸ್.ಬಿ.ಐ. ಈ ನಿರ್ಧಾರ ಕೈಗೊಂಡಿದೆ.

ಹೀಗಾಗಿ, ಆಗಸ್ಟ್ 01, 2019ರಿಂದ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಹಣ ವರ್ಗಾವಣೆಗೆ ನೆಟ್ ಬ್ಯಾಂಕಿಂಗ್ ನಲ್ಲಿ ಬಳಸುವ NEFT, RTGS ಮತ್ತು IMPS ಮೂರು ಆಯ್ಕೆ ಹಾಗೂ ಮೊಬೈಲ್ ಬ್ಯಾಂಕಿಂಗ್ ಆಪ್ ಯೋನೋ(YONO) ಮೂಲಕ ಕಳಿಸುವ ಹಣಕ್ಕೆ ಯಾವುದೇ ರೀತಿ ಶುಲ್ಕ ವಿಧಿಸುವುದಿಲ್ಲ.

SBI waives off IMPS charges with effective from August 01

ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಒದಗಿಸುವ ಇಮಿಡಿಟೇಡ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್) ಮೂಲಕ 1000 ರು ತನಕ ಹಣ ವರ್ಗಾವಣೆಗೆ ಶುಲ್ಕವಿರುವುದಿಲ್ಲ. ಮಿಕ್ಕಂತೆ ಸದ್ಯಕ್ಕೆ ಹಳೆ ನಿಯಮಗಳು ಜಾರಿಯಲ್ಲಿರಲಿದೆ.

ಈ ಸೌಲಭ್ಯದಲ್ಲಿ ಕನಿಷ್ಠ ಒಂದು ರೂಪಾಯಿಯಿಂದ 2 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ರಜಾ ದಿನಗಳಲ್ಲಿ ಕೂಡ ನೀವು ಹಣ ವರ್ಗಾವಣೆ ಮಾಡಬಹುದಾಗಿದೆ.

10001 ರಿಂದ 10,000 ರು ತನಕ ಐಎಂಪಿಎಸ್ ಗೆ 2.36 ರು ಶುಲ್ಕ ವಿಧಿಸಲಾಗುತ್ತದೆ. 25,001 ರಿಂದ 1,00,000 ರು ತನಕದ ಐಎಂಪಿಎಸ್ ಮೂಲಕ ಹಣರವಾನೆಗೆ 5.90ರು ಶುಲ್ಕ ವಿಧಿಸಲಾಗುತ್ತದೆ. 1,00,001 ರಿಂದ 2,00,000 ರು ತನಕದ ಐಎಂಪಿಎಸ್ ಗೆ 11.80ರು ಶುಲ್ಕವಿಧಿಸಲಾಗುತ್ತದೆ.

National Electronic funds transfer(NEFT) ಸೌಲಭ್ಯ ಬಳಸಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಮೂಲಕ 2 ಲಕ್ಷ ರೂ.ಗಳ ವರೆಗೆ ಹಾಗೂ real time gross settlement (RTGS) ಮೂಲಕ 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ವರ್ಗಾಯಿಸಬಹುದಾಗಿತ್ತು. NEFT ಸೌಲಭ್ಯ ಬಳಸಿದರೆ 1 ರಿಂದ 5 ರೂ. ಗಳವರೆಗೆ ಶುಲ್ಕ ಹಾಗೂ RTGS ಬಳಸಿದರೆ 5 ರಿಂದ 50 ರೂ.ಗಳವರೆಗೆ ಶುಲ್ಕವನ್ನು ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ ವಿಧಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+